Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮುಜಫರ್ನಗರ : ಉತ್ತರ ಪ್ರದೇಶದ ಮುಜಫರ್ನಗರದಲ್ಲಿ ಸ್ಕೂಟರ್ ಸವಾರನೊಬ್ಬ ಹೆಲ್ಮೆಟ್ ಧರಿಸದಿದ್ದಕ್ಕಾಗಿ ಸುಮಾರು 21 ಲಕ್ಷ ರೂ. ದಂಡ ವಿಧಿಸಿದ್ದರಿಂದ ದಿಗ್ಭ್ರಮೆಗೊಂಡಿದ್ದಾನೆ. ವಿಪರ್ಯಾಸವೆಂದರೆ ಆ ಸ್ಕೂಟರ್ ಕೇವಲ 1 ಲಕ್ಷ ರೂಪಾಯಿ ಮೌಲ್ಯದ್ದು.
20,74,000 ರೂ.ಗಳ ದಂಡದ ಮೊತ್ತವನ್ನು ತೋರಿಸುವ ಚಲನ್’ನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಬೇಗನೆ ವೈರಲ್ ಆಗಿದ್ದು, ಪೊಲೀಸರು ದೋಷವನ್ನ ಸರಿಪಡಿಸಿ ದಂಡದ ಮೊತ್ತವನ್ನ 4,000 ರೂ.ಗಳಿಗೆ ಇಳಿಸಿದರು.
ಕಳೆದ ಮಂಗಳವಾರ ಮುಜಫರ್ ನಗರ ಜಿಲ್ಲೆಯ ನ್ಯೂ ಮಂಡಿ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಅನ್ಮೋಲ್ ಸಿಂಘಾಲ್ ಎಂದು ಗುರುತಿಸಲಾದ ಸವಾರನನ್ನ ಸಂಚಾರ ಪೊಲೀಸರು ನಿಯಮಿತ ತಪಾಸಣೆಯ ಸಮಯದಲ್ಲಿ ತಡೆದರು. ಸಿಂಘಾಲ್ ಹೆಲ್ಮೆಟ್ ಧರಿಸಿರಲಿಲ್ಲ ಮತ್ತು ಆತ ಸ್ಕೂಟರ್’ಗೆ ಅಗತ್ಯವಾದ ದಾಖಲೆಗಳನ್ನ ಸಹ ತೋರಿಸಲು ವಿಫಲವಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.