Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > ಅವನತಿ ಹಾದಿಯಲ್ಲಿ ರಣಹದ್ದು ಸಂತತಿ:: ಇದರಿಂದಲೇ 5 ಲಕ್ಷ ಜನರ ಸಾವು!
ದೇಶಪ್ರಮುಖವಿದೇಶವೈರಲ್

ಅವನತಿ ಹಾದಿಯಲ್ಲಿ ರಣಹದ್ದು ಸಂತತಿ:: ಇದರಿಂದಲೇ 5 ಲಕ್ಷ ಜನರ ಸಾವು!

Share
2 Min Read
SHARE

newsics.com
ಪಕ್ಷಿ ಸಂಕುಲಗಳಲ್ಲಿ ಅನೇಕ ಬಗೆಯ ಪಕ್ಷಿಗಳ ಸಂತತಿ ಕ್ಷೀಣಿಸುತ್ತಾ ಬರುತ್ತಿವೆ. ಗುಬ್ಬಿಯಿಂದ ಹಿಡಿದು ಹಲವಾರು ಪಕ್ಷಿಗಳು ನಮಗೆ ಮೊದಲಿನಷ್ಟು ಕಾಣ ಸಿಗೋದಿಲ್ಲ.

ಜಾಗತೀಕರಣ, ಹವಾಮಾನದಲ್ಲಾಗುತ್ತಿರುವ ಬದಲಾವಣೆ. ಮಾನವನ ಸ್ವಯಂಕೃತ ಅಪರಾಧಗಳಿಂದಾಗಿ ನಾವು ಅಮೂಲ್ಯ ಪಕ್ಷಿ ಸಂಕುಲಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಅಂತಹ ಪಕ್ಷಿಗಳ ಸಾಲಿಗೆ ಬಂದು ಸೇರುತ್ತೆ ರಣಹದ್ದುಗಳು. ಪ್ರಮುಖವಾಗಿ ಭಾರತದಲ್ಲಿ ರಣಹದ್ದುಗಳ ಸಂತತಿ ಕ್ಷೀಣಿಸುತ್ತಾ ಬರುತ್ತಿದೆ.

ಇದು ಕೇವಲ ಪಕ್ಷಿ ಸಂತತಿಗೆ ಮಾತ್ರವಲ್ಲ ಮಾನವ ಕುಲಕ್ಕೂ ಸಹ ದೊಡ್ಡ ನಷ್ಟವನ್ನುಂಟು ಮಾಡಿದೆ ಅನ್ನುತ್ತಿದೆ ಅಮೆರಿಕದ ಎಕಾನಾಮಿಕ್ ರೀವಿವ್ ಬಿಡುಗಡೆ ಮಾಡಿರುವ ಒಂದು ವರದಿ.

ಭಾರತದಲ್ಲಿ ರಣಹದ್ದುಗಳ ಸಂತತಿ ಕ್ಷೀಣಿಸಲು ಮೊದಲು ಆರಂಭವಾಗಿದ್ದೇ 1994 ರಿಂದ ಎಂದು ಈ ಅಧ್ಯಯನ ಹೇಳುತ್ತದೆ.

ಪ್ರಮುಖವಾಗಿ ಆ ವರ್ಷದಿಂದಲೇ ನಾವು ಜಾನುವಾರುಗಳಿಗೆ ಡೈಕ್ಲೋಫೆನಾಕ್ ಅನ್ನೋ ಔಷಧಿಯನ್ನು ನೀಡಲು ಶುರು ಮಾಡಿದ್ದು. ಈ ಒಂದು ಔಷಧಿ ಆ ಪಕ್ಷಿಗಳ ಸಂಕುಲದ ನಿರ್ನಾಮಕ್ಕೆ ಮೊದಲ ಶಾಸನ ಬರೆದಿದ್ದು. ಸತ್ತ ಜಾನುವಾರುಗಳನ್ನು ತಿಂದ ಈ ಪಕ್ಷಿಗಳಲ್ಲಿಯೂ ಆ ಔಷಧದ ಪರಿಣಾಮದಿಂದಾಗಿ ಅನೇಕ ಸಮಸ್ಯೆಗಳು ಕಂಡು ಬಂದು ಅವುಗಳ ಅವನತಿ ಆರಂಭವಾಯ್ತು. ರಣಹದ್ದುಗಳ ಅವನತಿ ಆರಂಭವಾದ ಕ್ಷಣದಿಂದ ದೇಶದಲ್ಲಿ ಪ್ರಾಣಿಗಳ ಮೃತದೇಹಗಳು ಹಾಗೆಯೇ ಬಿದ್ದು ಕೊಳೆಯಲು ಆರಂಭಿಸಿದವು ಇವು ಅನೇಕ ರೋಗರುಜಿನಗಳನ್ನು ಪಸರಿಸಿದವು. ಇದೇ ಒಂದು ಕಾರಣದಿಂದ ಕಳೆದ 2000 ನೇ ಇಸವಿಯಿಂದ 2005ರವರೆಗೆ ಅಂದ್ರೆ ಕೇವಲ ಐದು ವರ್ಷದಲ್ಲಿ 5 ಲಕ್ಷ ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎಂದು ಹೇಳುತ್ತದೆ ಅಧ್ಯಯನದ ಸಹ ಲೇಖಕ ಇಯಾಲ್ ಫ್ರ್ಯಾಂಕ್ ಹೇಳುತ್ತಾರೆ.
ರಣಹದ್ದುಗಳನ್ನು ಪರಿಸರದ ನಿರ್ಮಲೀಕರಣದಲ್ಲಿ ಪ್ರಮುಖ ಪಾತ್ರವಹಿಸುವ ಪಕ್ಷಿಗಳು ಎಂದೇ ಗುರುತಿಸಲಾಗುತ್ತದೆ. ಏಕೆಂದರೆ ಅವು ಸತ್ತ ಪ್ರಾಣಿಗಳಲ್ಲಿನ ಪ್ರಾಣಘಾತಕದಂತಹ ಬ್ಯಾಕ್ಟೀರಿಯಾ ಮತ್ತು ರೋಗ ಪಸರಿಸುವಂತ ವೈರಸ್ಗಳನ್ನು ತಡೆಯುತ್ತಿದ್ದವು. ಇದರಿಂದ ಮಾರಣಾಂತಿಕ ಕಾಯಿಲೆಗಳು ಮನುಷ್ಯರಿಗೆ ಹರಡದಂತೆ ಕಾಯುತ್ತಿದ್ದವು.
ಒಟ್ಟಾರೆ 2000 ರಿಂದ 2005ರವರೆಗೆ ಒಟ್ಟು 1 ಲಕ್ಷಕ್ಕೂ ಅಧಿಕ ರಣಹದ್ದುಗಳು ಸಾವನ್ನಪ್ಪಿವೆ. ಆದ್ರೆ ಅವುಗಳ ಸಂತತಿ ಕ್ಷೀಣಿಸಿದ ಕಾಣವಾಗಿಯೇ ಸುಮಾರು 5 ಲಕ್ಷ ಜನರು ರಣಹದ್ದುಗಳು ತಡೆಯಬಹುದಾದ ಕಾಯಿಲೆ ಬಂದು ಮೃತಪಟ್ಟಿದ್ದಾರೆ ಎಂದು ಈ ಅಧ್ಯಯನದಲ್ಲಿ ಹೇಳಲಾಗಿದೆ.

ಮೊಬೈಲ್‌ ಬಳಕೆದಾರರೇ ಎಚ್ಚರ : ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!

TAGGED:Vultures are responsible for the deaths of 5 lakh people
Share This Article
Facebook Twitter Copy Link Print
Previous Article ಶುಭೋದಯ 28-07-2024 ಭಾನುವಾರ ಕ್ರೋಧಿ ಸಂವತ್ಸರ ದಕ್ಷಿಣಾಯನ ಗ್ರೀಷ್ಮ ಋತು ಆಷಾಢ ಮಾಸ ಕೃಷ್ಣ ಪಕ್ಷ ಅಷ್ಟಮಿ
Next Article ಕಮಲಾ ಹ್ಯಾರಿಸ್‌ಗೆ childless cat ಎಂದಿದ್ದೇಕೆ ಜೆ.ಡಿ ವ್ಯಾನ್ಸ್; ಏನಿದರ ಅರ್ಥ?

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?