Subscribe ನ್ಯೂಸಿಕ್ಸ್ ಕನ್ನಡ
NewsicsKannada/ YouTube
newsics.com
ಕ್ಲಿಯೋ ಎಂಬ ಚಾಟ್‌ಬಾಟ್ ನಿಮಗೆ ಹಾಸ್ಯ ಮತ್ತು ತಮಾಷೆಯ ಮೂಲಕ ಹಣಕಾಸು ನಿಯಂತ್ರಣ ಕಲಿಸುತ್ತದೆ. ಇದು ನಿಮ್ಮ ದೈನಂದಿನ ಖರ್ಚುಗಳನ್ನು ಟ್ರ್ಯಾಕ್ ಮಾಡಿ ಸಣ್ಣ ಉಳಿತಾಯ ಸವಾಲುಗಳನ್ನು ನೀಡುತ್ತದೆ. ಹಣದ ನಿರ್ವಹಣೆ ಅಂದರೆ ಟೆನ್ಶನ್, ಒತ್ತಡ ಅನ್ನೋದನ್ನೆಲ್ಲ ಸೈಡಿಗಿಟ್ಟು ಈ ಬಾಟ್ ಹೇಳಿದಂತೆ ಕೇಳಿ ಹಣ ಉಳಿಸಬಹುದು.
ಮನಿ ಮ್ಯಾಟರ್ ಜೊತೆಗೆ ಮನೆ ಮ್ಯಾಟರ್‌ನಲ್ಲೂ ಮೂಗು ತೂರಿಸುವ ಎಐ ಟೂಲ್ ಇದು. ಕುಟುಂಬ ಸದಸ್ಯರು ಒಟ್ಟಾಗಿ ಮಾಡಿದ ಖರ್ಚು, ಹೂಡಿಕೆ, ಗುರಿ ಇತ್ಯಾದಿಗಳನ್ನು ಇದು ಟ್ರ್ಯಾಕ್ ಮಾಡುತ್ತದೆ. ಯಾರು ಎಷ್ಟು ಖರ್ಚು ಮಾಡಿದ್ದಾರೆ ಅನ್ನೋದನ್ನು ತೋರಿಸೋ ಜೊತೆಗೆ ಹಣ ಉಳಿತಾಯದ ಟ್ರಿಕ್‌ಗಳನ್ನೂ ಕಲಿಸುತ್ತೆ.
ಹಣದ ಹರಿವನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಹಣದ ಪೋಲನ್ನು ತಡೆಯುತ್ತದೆ. ಸಾಲದಿಂದ ದೂರ ಇರಲು ಮತ್ತು ನಿಯಮಿತವಾಗಿ ಉಳಿಸಲು ಸಹಾಯ ಮಾಡುತ್ತದೆ. ಹಣ ಜಾಸ್ತಿ ಖರ್ಚು ಮಾಡೋದು ಗೊತ್ತಾದರೆ ವಾರ್ನ್ ಮಾಡೋ ಎಐ ಟೂಲ್ ಇದು.
ಕಿಸೆಯ ತೂತಿಗೆ ಹೊಲಿಗೆ ಹಾಕೋ ಎಐ ಪಾಕೆಟ್ ಗಾರ್ಡ್. ನಿಮ್ಮ ಬಿಲ್‌ಗಳು ಮತ್ತು ಉಳಿತಾಯ ಗುರಿಗಳನ್ನು ತೆಗೆದ ನಂತರ ಎಷ್ಟು ಹಣ ಖರ್ಚು ಮಾಡಬಹುದು ಎಂದು ತೋರಿಸುತ್ತದೆ. ಅನಗತ್ಯ ಸಬ್‌ಸ್ಕ್ರಿಪ್ಶನ್‌ಗಳನ್ನು ಗುರುತಿಸಿ, ಅತಿಯಾಗಿ ಖರ್ಚಾಗುವ ಮುನ್ನ ಎಚ್ಚರಿಸುತ್ತದೆ.
ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳನ್ನು ಪತ್ತೆಹಚ್ಚಿ ತಿಂಗಳ ಬಿಲ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದಾಯ ಮತ್ತು ಖರ್ಚಿನ ಆಧಾರದ ಮೇಲೆ ಸ್ವಯಂ ಉಳಿತಾಯವನ್ನೂ ಕಲಿಸಿಕೊಡುತ್ತದೆ.
ಎಕ್ಸ್‌ಚೇಂಜ್ ಟ್ರೇಡ್ ಫಂಡ್‌ನಲ್ಲಿ ಆಸಕ್ತರಾಗಿದ್ದರೆ ಈ ಎಐ ಬಾಟ್‌ನ ಸಹಾಯ ಪಡೆಯಬಹುದು. ಇದು ಹೂಡಿಕೆಯ ಐಡಿಯಾ ಕೊಡುವ ಜೊತೆಗೆ ತೆರಿಗೆ ಉಳಿತಾಯಕ್ಕೂ ಪ್ಲಾನ್ ಮಾಡುತ್ತದೆ.
ಇದು ಇಟಿಎಫ್ ಅಂದರೆ ಎಕ್ಸ್‌ಚೇಂಜ್ ಟ್ರೇಡ್ ಫಂಡ್‌ಗಳ ಬಗ್ಗೆ ತೌಲನಿಕ ಅಂದರೆ ಹೋಲಿಸಿ ನೋಡಿ ವಿವರ ನೀಡುತ್ತದೆ. ಈ ಹೂಡಿಕೆಯಲ್ಲಿ ಏನೆಲ್ಲ ರಿಸ್ಕ್‌ಗಳಿವೆ ಅನ್ನೋದನ್ನು ವಿವರಿಸುತ್ತದೆ. ಯಾವುದರಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್ ಅನ್ನೋದನ್ನೂ ಅರ್ಥವಾಗುವಂತೆ ತಿಳಿಸಿಕೊಡುತ್ತದೆ. ಇದು ಹೂಡಿಕೆಗೆ ಸರಳ ಮಾರ್ಗದರ್ಶಿ.