Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com
ಉತ್ತರಾಖಂಡದ ಕಾಂದಾಡ್ ಮತ್ತು ಇಂದ್ರೋಲಿ ಗ್ರಾಮಗಳಲ್ಲಿ ಮೂರು ವಿಧದ ಚಿನ್ನಾಭರಣವನ್ನು ಮಾತ್ರ ಧರಿಸಬೇಕೆಂಬ ನಿರ್ಬಂಧ ವಿಧಿಸಲಾಗಿದೆ.
ಇನ್ನು ಗ್ರಾಮಗಳ ಈ ನಿರ್ಧಾರವು ದೊಡ್ಡ ಸದ್ದು ಮಾಡಿದೆ. ಇತ್ತೀಚೆಗೆ ಕಾಂದಾಡ್ ಗ್ರಾಮದಲ್ಲಿ ನಡೆದ ಪಂಚಾಯತ್ ಸಭೆಯಲ್ಲಿ ಮಹಿಳೆಯರು ಮದುವೆ ಮತ್ತು ಶುಭ ಕಾರ್ಯಕ್ರಮಗಳಲ್ಲಿ ಕೇವಲ ಮೂರು ಚಿನ್ನದ ಆಭರಣಗಳನ್ನು ಮಾತ್ರ ಧರಿಸಬೇಕೆಂದು ನಿರ್ಧರಿಸಲಾಯಿತು. ಇದನ್ನು ಉಲ್ಲಂಘಿಸುವವರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಲು ಸಹ ಒಪ್ಪಿಗೆ ನೀಡಲಾಯಿತು.
ಈ ನಿರ್ಧಾರದ ಹಿಂದಿನ ಉದ್ದೇಶವೇನು?: ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ಜೌನ್ಸರ್ ಬವಾರ್ ಬುಡಕಟ್ಟು ಪ್ರದೇಶವು ತನ್ನ ವಿಶಿಷ್ಟ ಸಂಪ್ರದಾಯ ಮತ್ತು ಜಾನಪದ ಸಂಸ್ಕೃತಿಯಿಂದ ಶ್ರೀಮಂತವಾಗಿದೆ. ಕಾಲಕಾಲಕ್ಕೆ ಗ್ರಾಮ ಪಂಚಾಯತ್ ಗಳು ಸಾಮಾಜಿಕ ಸುಧಾರಣಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಅಕ್ಟೋಬರ್ 16ರಂದು ನಡೆದ ಸಭೆಯಲ್ಲಿ ಮಹಿಳೆಯರು ಕಿವಿಯೋಲೆ, ಮಂಗಳಸೂತ್ರ ಮತ್ತು ಮೂಗುತಿಯನ್ನು ಮಾತ್ರ ಧರಿಸಬೇಕು ಎಂಬ ನಿರ್ಧಾರ ತಳೆಯಲಾಗಿದೆ.
ಸಮಾಜದಲ್ಲಿ ಹೆಚ್ಚುತ್ತಿರುವ ಆಡಂಬರದ ಪ್ರವೃತ್ತಿ ತಡೆಯುವುದು ಮತ್ತು ಆರ್ಥಿಕ ಅಸಮಾನತೆಯ ಭಾವನೆಯನ್ನು ನೀಗಿಸುವುದು ಈ ನಿರ್ಧಾರದ ಹಿಂದಿನ ಗುರಿಯಾಗಿದೆ. ಕೆಲವು ಮಹಿಳೆಯರು ಕಾರ್ಯಕ್ರಮಗಳಿಗೆ ಮಣಭಾರದ ಚಿನ್ನಾಭರಣಗಳನ್ನು ಧರಿಸುತ್ತಾರೆ. ಆರ್ಥಿಕವಾಗಿ ದುರ್ಬಲವಾದ ಕುಟುಂಬಗಳ ಮೇಲೆ ಇದು ಪರಿಣಾಮ ಬೀರುತ್ತಿದೆ.
ರಾಮಭಕ್ತರಿಗೆ ಗುಡ್ ನ್ಯೂಸ್; ಅಯೋಧ್ಯೆ ಶ್ರೀರಾಮ ಮಂದಿರದ ಕೆಲಸ ಸಂಪೂರ್ಣ, ಮಾಹಿತಿ ನೀಡಿದ ಟ್ರಸ್ಟ್