ತಾನು ಸುಲಭವಾಗಿ ಕನ್ನಡ ಕಲಿತಿದ್ದು ಹೇಗೆ ಎಂಬುದನ್ನು ಸ್ವತಃ ಸಿವಶ್ರೀ ಅವರೇ ಸಂದರ್ಶನದಲ್ಲಿ ಹೇಳಿದ್ದಾರೆ. ಸಿವಶ್ರೀ ಅವರು ಸತೀಶ್ ಎಂಬುವವರ ವೀಡಿಯೋ ನೋಡಿ ಕನ್ನಡವನ್ನು ಕಲಿತಿದ್ದಾರಂತೆ. ವೀಡಿಯೋವೊಂದರಲ್ಲಿ ಇದ್ದ ಅವರ ಫೋನ್ ನಂಬರ್‌ಗೆ ಸಿವಶ್ರೀ ಅವರು ಕರೆ ಮಾಡಿ ತನಗೆ ಕನ್ನಡ ಕಲಿಯುವುದಕ್ಕೆ ಆಸಕ್ತಿ ಇದೆ ಎಂದು ತಿಳಿಸಿದರಂತೆ. ಈ ವೇಳೆ ಅವರು ತಮ್ಮ ಕನ್ನಡ ಆನ್‌ಲೈನ್‌ ಕೋರ್ಸ್‌ಗಳು ಇರುವ ಬಗ್ಗೆ ಹೇಳಿ ಅದಕ್ಕೆ ಸೇರುವಂತೆ ಹೇಳಿದರಂತೆ, ಅದರಲ್ಲಿಅವರು ವಾಟ್ಸಾಪ್ ಮೂಲಕ ಗೂಗಲ್ ಮೀಟ್ ಲಿಂಕ್ ಕಳಿಸ್ತಿದ್ದರು. ಅದರ ಮೂಲಕ ಕನ್ನಡ ಕಲಿತೆ, ಭೂತಕಾಲ ಭವಿಷ್ಯಕಾಲದ ವರ್ತಮಾನ ಕಾಲದ ಬಗ್ಗೆ ಅವರು ಸಂಪೂರ್ಣ ವಿವರವಾಗಿ ಪಾಠ ಮಾಡುತ್ತಿದ್ದರು ಎಂದು ಸಿವಶ್ರೀ ಹೇಳಿದ್ದಾರೆ. ಇದೆಲ್ಲದಕ್ಕೂ ಚಾರ್ಟ್ ಸಿದ್ಧಪಡಿಸಿರುತ್ತಾರೆ. ಆ ಚಾರ್ಟ್ ಮಾತ್ರ ಸ್ಕ್ರೀನ್‌ನಲ್ಲಿ ಇರುತ್ತಿತ್ತು. ಅದು ನನಗೆ ತುಂಬಾ ಸಹಾಯ ಮಾಡಿತ್ತು. ಹೀಗಾಗಿಯೇ ನಾನು ಇಷ್ಟು ಬೇಗ ಕನ್ನಡ ಕಲಿತಿದ್ದಾಗಿ ಸಿವಶ್ರೀ ಹೇಳಿದ್ದಾರೆ. ಇಲ್ಲದೇ ಹೋಗಿದ್ದರೆ ನಾನು ಇಷ್ಟು ಬೇಗ ಕನ್ನಡ ಕಲಿಯುವುದಕ್ಕೆ ಸಾಧ್ಯವಾಗ್ತಿರಲಿಲ್ಲ ಎಂದು ಹೇಳಿದ್ದಾರೆ.

ಸಿವಶ್ರೀ ಮಾತಿಗೆ ಸಂದರ್ಶಕರು ಅಚ್ಚರಿಪಟ್ಟಿದ್ದಾರೆ, ನಮ್ಮ ಬೆಂಗಳೂರಿನಲ್ಲಿ ಇಷ್ಟೊಂದು ಜನರಿದ್ದಾರೆ ಯಾರು ಕೂಡ ಕನ್ನಡ ಕಲಿಯಲು ಇಷ್ಟೊಂದು ಆಸಕ್ತಿ ತೋರಿಸಲಿಲ್ಲ, ನಿಮಗೆ ಕನ್ನಡ ಕಲಿಯಬೇಕು ಎಂಬ ಒತ್ತಾಯ ಮನೆಯಲ್ಲಿ ಇತ್ತ ಅಥವಾ ಸ್ವ ಇಚ್ಛೆಯಿಂದ ಕಲಿತಿರೆ ಎಂದು ಕೇಳಿದ್ದಾರೆ. ಅದಕ್ಕೆ ಸಿವಶ್ರೀ ಸ್ವಿಚ್ಛೆಯಿಂದ ಕಲಿತಿದ್ದಾಗಿ ಹೇಳಿದ್ದಾರೆ. ಮನೆಯಲ್ಲಿ ಮಾತನಾಡುವುದಕ್ಕೆ ಸ್ವಲ್ಪ ಸುಲಭವಾಗುತ್ತದೆ. ಅತ್ತೆ ಮಾವನಿಗೆ ಇಂಗ್ಲೀಷ್‌ನಲ್ಲಿ ಮಾತನಾಡಿ ಎಂದು ಹೇಳುವುದಕ್ಕೆ ಆಗುವುದಿಲ್ಲ, ಇಂಗ್ಲೀಷ್‌ನಲ್ಲಿ ಮಾತನಾಡಿದರೆ ಫೀಲಿಂಗ್ ಬರಲ್ಲ ಹೀಗಾಗಿ ಕನ್ನಡ ಕಲಿತಿದ್ದಾಗಿ ಸಿವಶ್ರೀ ಹೇಳಿದ್ದಾರೆ.

ಟೀನೇಜ್ ಹುಡುಗರು ‘ಡ್ರಿಂಕ್ಸ್‌’ ಚಟಕ್ಕೆ ದಾಸರಾಗ್ತಿರೋದು ಯಾಕೆ; ಕಾರಣವೇನು?