Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು : ಗ್ಯಾಸ್ ಗೀಸರ್ ಸೋರಿಕೆಯಾಗಿ ಇಬ್ಬರು ಯುವತಿಯರು ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ.
ಗುಲ್ಪಾರ್ಮ್(23), ಸಿಮ್ರಾನ್ ತಾಜ್(20) ಮೃತಪಟ್ಟವರು. ಅಕ್ಕ,ತಂಗಿಯರಾದ ಇಬ್ಬರೂ ಒಟ್ಟಿಗೆ ಸ್ನಾನಕ್ಕೆ ಹೋಗಿದ್ದು, ಬಹಳ ಹೊತ್ತಿನವರೆಗೂ ಹೊರಗೆ ಬಂದಿಲ್ಲ. ಅನುಮಾನಗೊಂಡ ಅವರ ತಂದೆ ಅಲ್ತಾಫ್ ಅವರು ಬಾಗಿಲು ಬಡಿದಿದ್ದಾರೆ.
ಆಗ ಬಾಗಿಲು ತೆಗೆದಿಲ್ಲ. ಕೊನೆಗೆ ಬಾಗಿಲು ತೆಗೆದು ನೋಡಿದಾಗ ಮಕ್ಕಳಿಬ್ಬರೂ, ಅರೆಪ್ರಜ್ಞಾವಸ್ಥೆಯಲ್ಲಿರುವುದು ಕಂಡು ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಈ ವೇಳೆಗೆ ಇಬ್ಬರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ಗ್ಯಾಸ್ ಗೀಸರ್ ಬಳಸುವ ಮುನ್ನ ಎಚ್ಚರ ವಹಿಸಿ.