Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > 5000 ಕೊಡ್ತಿನಿ ಬಾ ಎಂದು ಕಿರುಕುಳ ನೀಡಿದವನ ಕೆನ್ನೆಗೆ ಬಾರಿಸಿದ ನರ್ಸ್‌
ವಿದೇಶವೈರಲ್

5000 ಕೊಡ್ತಿನಿ ಬಾ ಎಂದು ಕಿರುಕುಳ ನೀಡಿದವನ ಕೆನ್ನೆಗೆ ಬಾರಿಸಿದ ನರ್ಸ್‌

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಡೆಹ್ರಾಡೂನ್: ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನರ್ಸ್‌ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ 5000 ರೂಪಾಯಿ ಕೊಡ್ತಿನಿ ಬಾ ಎಂದು ಕರೆದ ಮಧ್ಯವಯಸ್ಕ ವ್ಯಕ್ತಿಯೊಬ್ಬನಿಗೆ ನರ್ಸ್ ಮಂಗಳಾರತಿ ಮಾಡಿದಂತಹ ಘಟನೆ ಉತ್ತರಾಖಂಡ್‌ನ ಡೆಹ್ರಾಡೂನ್ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮಾಜಿ ಸೈನಿಕ 42 ವರ್ಷದ ರಮೇಶ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ. ಈತ ತನ್ನ ಅತ್ತೆಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಡೆಹ್ರಾಡೂನ್‌ನ ಸಿಎಂಐ ಆಸ್ಪತ್ರೆಗೆ ಬಂದಿದ್ದ. ಆದರೆ ಕುಡಿದ ಮಾತಿನಲ್ಲಿದ್ದ ಈತ ಅಲ್ಲಿನ ನರ್ಸ್ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಮೊದಲಿಗೆ ಆತನಿಗೆ ಎಚ್ಚರಿಕೆ ನೀಡಿ ಸುಮ್ಮನಿರಲಾಗಿತ್ತು. ಆದರೆ ಆತ ಮರುದಿನವೂ ಬಂದು ಅಸಭ್ಯವಾಗಿ ವರ್ತಿಸಲು ಶುರು ಮಾಡಿದಾಗ ತಾಳ್ಮೆ ಕಳೆದುಕೊಂಡ ನರ್ಸ್ ಆತನ ಕೆನ್ನೆಗೆ ಬಾರಿಸಿದ್ದಾಳೆ.
5000 ಕೊಡ್ತಿನಿ ಜೊತೆಗೆ ಬಾ ಎಂದು ಕರೆದು ಕಿರುಕುಳ
ಈ ಘಟನೆ ಅಲ್ಲಿದ್ದ ಸ್ಥಳೀಯರ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಆತನಿಗೆ ಥಳಿಸುತ್ತಿರುವ ನರ್ಸ್ 500 ಸಾವಿರ ಕೊಡ್ತಿನಿ ನನ್‌ ಜೊತೆ ಬಾ ಎಂದು ಆತ ಕರೆದಿದ್ದಾನೆ ಎಂದು ಆರೋಪಿಸಿದ್ದಾರೆ. ನೀನು ಯಾಕೆ ಹೀಗೆ ಹೇಳ್ತಿದ್ದೀಯಾ? ನಿನ್ನ ಸಮಸ್ಯೆ ಏನು? ಕಳೆದ ರಾತ್ರಿಯಿಂದ ಈತ ಇಲ್ಲಿ ಹುಡುಗಿಯರಿಗೆ ಕಿರುಕುಳ ನೀಡ್ತಿದ್ದಾನೆ. ಆತ 5000 ಸಾವಿರ ತಗೋ ನನ್ ಜೊತೆ ಬಾ ಅಂತ ಹೇಳ್ತಾನೇ ಇದ್ದಾನೆ. 112ಗೆ ಕರೆ ಮಾಡಿ ಪೊಲೀಸರನ್ನ ಕರೆಸಿ, ನಾವು ಇಲ್ಲಿ ಕೆಲಸ ಮಾಡುವವರು, ಅವಮಾನ ಮಾಡಿಸಿಕೊಳ್ಳಲು ಬಂದವರಲ್ಲ, ಈತ ರೋಗಿಯ ಸಹಾಯಕನಾಗಿ ಇಲ್ಲಿಗೆ ಬಂದಿದ್ದ, ನಿನ್ನೆಯಿಂದ ಈತ ನನ್ನ ಹಿಂದೆ ಬಿದ್ದಿದ್ದು, ನನ್ನ ನಂಬರ್ ನೀಡುವಂತೆ ಕೇಳ್ತಿದ್ದಾನೆ. ನನ್ನ ಫಾಲೋ ಮಾಡುತ್ತಾ ನನ್ನ ಹಿಂದಿಂದೆ ಬರ್ತಿದ್ದಾನೆ ಎಂದು ನರ್ಸ್‌ ಹೇಳುತ್ತಲೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಆಸ್ಪತ್ರೆ ಆಡಳಿತ ಮಂಡಳಿಯ ದೂರಿನ ಆಧಾರದ ಮೇಲೆ, ರಮೇಶ್ ಸಿಂಗ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 74 (ಮಹಿಳೆಯ ಮೇಲೆ ಹಲ್ಲೆ) ಮತ್ತು 75 (ಲೈಂಗಿಕ ಕಿರುಕುಳ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ದಲನ್ವಾಲಾ ಪೊಲೀಸ್ ಠಾಣೆ ವ್ಯಾಪ್ತಿಯ ಅರಘರ್ ಪೊಲೀಸ್ ಚೆಕ್‌ಪೋಸ್ಟ್‌ನ ಉಸ್ತುವಾರಿ ಎಸ್‌ಐ ನರೇಂದ್ರ ಕೋಥಿಯಾಲ್ ಹೇಳಿದ್ದಾರೆ.
ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಅನೇಕರು ಕಿರುಕುಳ ನೀಡಿದ ವ್ಯಕ್ತಿಗೆ ಸರಿಯಾಗಿ ಬಾರಿಸಿದ ನರ್ಸ್‌ ಬೆಂಬಲಕ್ಕೆ ನಿಂತಿದ್ದಾರೆ.

https://www.instagram.com/reel/DP-oCgWiKm4/?igsh=MWplM2ppd3Q0MGd1bw==

ರೈಲಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ ವ್ಯಕ್ತಿ, ಮುಂದೆನಾಯ್ತು|; ವೈರಲ್ ವಿಡಿಯೋ ನೋಡಿ

TAGGED:"Give me 5000."Nurse slaps man who came after her and harassed hersaying
Share This Article
Facebook Twitter Copy Link Print
Previous Article ರೈಲಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ ವ್ಯಕ್ತಿ, ಮುಂದೆನಾಯ್ತು|; ವೈರಲ್ ವಿಡಿಯೋ ನೋಡಿ
Next Article ಕ್ಲಿನಿಕ್ ಗೆ ಹೋದ ಯುವತಿಗೆ ಬಟ್ಟೆ ಬಿಚ್ಚುವಂತೆ ಒತ್ತಾಯ : ಕಾಮುಕ ವೈದ್ಯ ಅರೆಸ್ಟ್.!

Popular Posts

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

You Might Also Like

ದೇಶವೈರಲ್

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read
ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ವಿದೇಶ

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read
ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?