Subscribe NewsicsKannada/YouTube
newsics.com
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಲ್ಲಿರುವ ಆರೋಪಿ, ನಟ ದರ್ಶನ್ ತೂಗುದೀಪ ಅವರು ಮೂಲಸೌಕರ್ಯಕ್ಕಾಗಿ ಪರದಾಡುತ್ತಿದ್ದಾರೆ.
ಈ ವಿಚಾರ ಹೆಚ್ಚು ಸದ್ದು ಮಾಡುತ್ತಿದ್ದಂತೆ ಇದೀಗ ದರ್ಶನ್ ಜೈಲೊಳಗಿನ ಪರದಾಟ ಕುರಿತು ಯುವತಿಯೊಬ್ಬಳು ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.
ದರ್ಶನ್ ಜೈಲಿನಲ್ಲಿ ಬೆಡ್ ಗಾಗಿ ಪರದಾಡಿದ್ದು ಗೊತ್ತೇ ಇದೆ. ಇದೇ ಬೆಡ್ ವಿಚಾರ ಮುಂದಿಟ್ಟುಕೊಂಡು ಯುವತಿಯೊಬ್ಬರು ಜ್ಯೂಸ್ ಕುಡಿಯುತ್ತ ಮಾತನಾಡಿರುವ ವಿಡಿಯೋವನ್ನು ಮೂವಿ ಮ್ಯಾಜಿಕ್ ನ್ಯೂಸ್ ಪೋಸ್ಟ್ ಮಾಡಿದೆ.
ಅಸಲಿಗೆ ಯುವತಿ ಹೇಳಿದ ಮಾತು ತಮಾಷೆ ಅನ್ನಿಸಿದರೆ ದರ್ಶನ್ ಅವರು ಈ ಪರಿಸ್ಥಿತಿಗೆ ಬರಲು ಅದೇ ಕಾರಣ ಎನ್ನಲಾಗಿದೆ.
ವಿಡಿಯೋದಲ್ಲಿ ಏನಿದೆ?
ಚಾಪ್ಲಿನ್ ಚಾಪ್ಲಿನ್ ಪಾಠವನ್ನು ರಿಂದ ರಷ್ಟು”ಏನು ದರ್ಶನ್‌ಗೆ ಜೈಲಲ್ಲಿ ಬೆಡ್ಲ ಚಾಪ್ಲಿನ್ ಇರೋವಾಗ ಯಾರ ಜತೆ ಬೆಡ್ ಹತ್ತಬೇಕು, ಹತ್ತಬಾರದು ಎಂದು ಯೊಚಿಸಿ ಜೀವನ ಮಾಡಿದ್ದರೆ. ಇವತ್ತು ಜೈಲಲ್ಲಿ ಬೆಡ್ ಗೆ ಪರದಾಡೋ ದಿನ ಬರುತ್ತಿರಲಿಲ್ಲ’ ಎಂದು ಆ ಯುವತಿ ಹೇಳಿದ್ದಾರೆ. ಈ ಮೂಲಕ ಪತ್ನಿ ವಿಜಯಲಕ್ಷ್ಮೀ ಅವರು ಇರುವಾಗ ಮತ್ತೊಬ್ಬರ ಜತೆ ರಿಲೇಷನ್‌ಶಿಪ್ ಬೆಳೆಸಿದ್ದರಿಂದಲೇ ದರ್ಶನ್ ಜೀವನ ಈ ಸ್ಥಿತಿಗೆ ಬಂದು ನಿಂತಿದೆ ಎಂದು ವಿಡಿಯೋದಲ್ಲಿ ಮಾರ್ಮಿಕವಾಗಿ ಯುವತಿ ಹೇಳಿದ್ದಾರೆ.
ಆಯುರ್ವೇದದ ಪ್ರಕಾರ ಹಾಸಿಗೆ ಇಲ್ಲದೇ ಫ್ಲಾಟ್ ಸರ್ಫೇಸ್ ಮೇಲೆ (ನೆಲ) ಮಲಗಿದರೆ ಬೆನ್ನು ನೋವು ವಾಸಿಯಾಗುತ್ತಂತೆ. ಅಣ್ಣಂಗೆ ಬೆನ್ನು ನೋವು ವಾಸಿಯಾಗಬೇಕು. ಅದು ಮುಖ್ಯ’ ಎಂದ ಯುವತಿಯ ಮಾತಿನ ವಿಡಿಯೋ ವೈರಲ್ ಆಗುತ್ತಿದೆ. ಪತ್ನಿ ಬಿಟ್ಟು ಪವಿತ್ರಾಗೌಡ ಸಹವಾಸ ಮಾಡಿ ಜೈಲಲ್ಲಿ ಬೆಡ್‌ಗೆ ಪರದಾಡುತ್ತಿರುವ ನಟ ದರ್ಶನ್‌ಗೆ ಬಗ್ಗೆ ವ್ಯಂಗ್ಯವಾಡಿದ್ದಾರೆ.
https://www.instagram.com/reel/DPqv9i2k3fl/?igsh=bm4yMzVoNXljaXBi
ಸಿಎಂ ವಿರುದ್ಧ ಡಿಕೆಶಿ ಮಾಟ ಮಾಡಿಸಿ ಕೋಣ, ಹಂದಿ ಬಲಿ ಕೊಟ್ಟಿದ್ದಾರೆ: ಮುನಿರತ್ನ ಗಂಭೀರ ಆರೋಪ!