Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕಾಳಸಂತೆಯಲ್ಲಿ ದಸರಾ ಪಾಸ್ ಮಾರಾಟ; ಎಲ್ಲೆಡೆ ಜನರ ಪರದಾಟ, ನೂಕುನುಗ್ಗಲು, ಯುವತಿ ಅಸ್ವಸ್ಥ, ಓರ್ವ ಪೊಲೀಸ್ ವಶಕ್ಕೆ
ಕರ್ನಾಟಕದೇಶಪ್ರಮುಖ

ಕಾಳಸಂತೆಯಲ್ಲಿ ದಸರಾ ಪಾಸ್ ಮಾರಾಟ; ಎಲ್ಲೆಡೆ ಜನರ ಪರದಾಟ, ನೂಕುನುಗ್ಗಲು, ಯುವತಿ ಅಸ್ವಸ್ಥ, ಓರ್ವ ಪೊಲೀಸ್ ವಶಕ್ಕೆ

Share
1 Min Read
SHARE

Subscribe NewsicsKannada/ YouTube

newsics.com

ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಪಾಸುಗಳು ಕಾಳಸಂತೆಯಲ್ಲಿ ಮಾರಾಟವಾದವು. ಜಗನ್ಮೋಹನ ಅರಮನೆ ಎದುರಿನ ಬ್ರಹ್ಮಪುರಿ ಗೇಟ್ ಬಳಿ ಕೆಲ ವ್ಯಕ್ತಿಗಳು, ಸಿನಿಮಾದ ಬ್ಲಾಕ್ ಟಿಕೆಟ್ ಮಾರಾಟ ಮಾಡುವಂತೆ ದಸರಾ ಪಾಸ್‌ಗಳನ್ನು 2 ಸಾವಿರ ರೂ.ನಿಂದ ಐದು ಸಾವಿರ ರೂ.ವರೆಗೆ ಮಾರಾಟ ಮಾಡಿ, ತಮ್ಮ ಜೇಬನ್ನು ಹಣದಿಂದ ತುಂಬಿಸಿಕೊಂಡರು. ಕೆಲವರು ಚೌಕಾಸಿ ಮಾಡಿ ಪಾಸ್‌ಗಳನ್ನು ಖರೀದಿಸಿ, ಜಂಬೂಸವಾರಿ ನೋಡಲು ಹೋದರು.

ಗೇಟ್‌ಗಳ ಬಳಿ ಜನರ ನೂಕುನುಗ್ಗಲು

ಅರಮನೆಯ ಸುತ್ತಲೂ ಇರುವ ಕೆಲ ಗೇಟ್‌ಗಳನ್ನು ಇತಿಂತಹವರಿಗೆ ಪ್ರವೇಶವೆಂದು ನಿಗದಿಪಡಿಸಲಾಗಿದೆ. ಹಾಗಾಗಿ ಪಾಸ್ ಇದ್ದವರಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗುತ್ತಿತ್ತು. ಉಳಿದವರನ್ನು ಅಲ್ಲಿಂದ ವಾಪಸ್ ಕಳುಹಿಸಲಾಗುತ್ತಿತ್ತು. ಆದರೂ ಎಲ್ಲಾ ಗೇಟ್‌ಗಳ ಮುಂದೆ ಪಾಸ್ ಹಿಡಿದ ಜನರು ಪ್ರವಾಹದಂತೆ ನುಗ್ಗಿ ಬಂದಿದ್ದರಿಂದ, ಅವರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ನಡೆಸಿದರು.

ಪಾಸ್ ಇದ್ದರೂ ಒಳಗೆ ಕಳುಹಿಸಲು ಪರದಾಡಿದರು. ಪಾಸ್ ಇದ್ದ ಜನರು ಪೊಲೀಸರ ಜತೆ ವಾಗ್ವಾದ, ಮಾತಿನ ಚಕಮಕಿ ನಡೆಸಿದರು.

ಬ್ರಹ್ಮಪುರಿ ಗೇಟ್ ಮುಂದಿರುವ ಪೊಲೀಸರು ತಾಳ್ಮೆ ಕಳೆದುಕೊಂಡು ಅನಾಗರಿಕರಂತೆ ಜನರ ವರ್ತಿಸಿದರು. ಮೂರ್ನಾಲ್ಕು ಪತ್ರಕರ್ತರು ಒಳಗೆ ಬಿಡಲು ಗೋಗರೆದರೂ ಬಿಡಲಿಲ್ಲ. ಈ ವೇಳೆ ನೂಕು ನುಗ್ಗಲಿನಲ್ಲಿ ಹಲವು ಜನರು ಸುಸ್ತಾದರು. ಯುವತಿಯೊಬ್ಬಳು ಅಸ್ವಸ್ಥಳಾದಳು. ಕೂಡಲೇ ಆಕೆಗೆ ಚಿಕಿತ್ಸೆ ನೀಡಲಾಯಿತು.

ನಕಲಿ ಪಾಸ್‌ನಿಂದ ಒಳಗೆ ಬಂದ ವ್ಯಕ್ತಿ ಪೊಲೀಸ್ ವಶಕ್ಕೆ

ದಸರಾ ಜಂಬೂಸವಾರಿ, ಟಾರ್ಚ್‌ಲೈಟ್ ಪರೇಡ್‌ನ ಪಾಸ್‌ಗಳನ್ನು ನಕಲು ಮಾಡಿ ಮಾರಾಟ ಮಾಡಿರುವುದು ಕೂಡ ಕಂಡು ಬಂದಿದೆ. ಅಲ್ಲದೆ ಕಲರ್ ಜೆರಾಕ್ಸ್ ಮೂಲಕ ದಸರಾ ಪಾಸ್‌ಗಳನ್ನು ನಕಲು ಮಾಡಿಕೊಂಡು ಅರಮನೆಯೊಳಗೆ ಹಲವು ಮಂದಿ ಪ್ರವೇಶಿಸಿದ್ದಾರೆ. ಇವರಲ್ಲಿ ವ್ಯಕ್ತಿಯೊಬ್ಬ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಕೂಡಲೇ ಆತನ ತಪಾಸಣೆ ನಡೆಸಿದ ಪೊಲೀಸರು, ವಶಕ್ಕೆ ತೆಗೆದುಕೊಂಡರು.

Kantara- 3: ಕನ್ಫರ್ಮ್ ಆಯ್ತು ಕಾಂತಾರ’ ಪಾರ್ಟ್-3!

TAGGED:a young woman falls illDasara pass sale in Kalasante; People rushing everywhereone policeman taken into custody
Share This Article
Facebook Twitter Copy Link Print
Previous Article ಮಕ್ಕಳ ಮುಂದೆ ಪಾಲಕರು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ
Next Article ವಿಶ್ವ ವಿಖ್ಯಾತ ಜಂಬೂ ಸವಾರಿಗೆ ಸಿಎಂ ಚಾಲನೆ;ಚಾಮುಂಡೇಶ್ವರಿಯ ಉತ್ಸವ ಮೂರ್ತಿ ಹೊತ್ತು ಸಾಗಿದ ಅಭಿಮನ್ಯು

Popular Posts

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

You Might Also Like

ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?