Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡ ನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್. ಇತ್ತೀಚೆಗಷ್ಟೇ ತೆರೆಗೆ ಬಂದ ಕೊತ್ತಲವಾಡಿ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಪುಷ್ಪ ಅರುಣ್ ಕುಮಾರ್ ಕನ್ನಡ ಚಿತ್ರರಂಗವನ್ನ ಪ್ರವೇಶಿಸಿದರು.
ಕೊತ್ತಲವಾಡಿ ಸಿನಿಮಾ ನಿರೀಕ್ಷಿತ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ. ಆದರೂ ಪುಷ್ಪ ಅರುಣ್ ಕುಮಾರ್ ಎದೆಗುಂದಿಲ್ಲ. ಇದೀಗ ಪುಷ್ಪ ಅವರು ಎರಡನೇ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಎರಡನೇ ಕನ್ನಡ ಸಿನಿಮಾ ನಿರ್ಮಾಣ ಮಾಡುವುದಾಗಿ ಪುಷ್ಪ ಘೋಷಣೆ ಮಾಡಿದ್ದಾರೆ.
ವಿಜಯದಶಮಿಯಂದು ಪುಷ್ಪ ಅವರು ತಮ್ಮ ನಿರ್ಮಾಣದ ಎರಡನೇ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಮೊದಲ ನಿರ್ಮಾಣದ ಕೊತ್ತಲವಾಡಿ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀರಾಜ್ ಅವರೆ, ಪುಷ್ಪ ಅವರು ನಿರ್ಮಿಸುತ್ತಿರುವ ಎರಡನೇ ಸಿನಿಮಾ ಅನ್ನೂ ನಿರ್ದೇಶನ ಮಾಡಲಿದ್ದಾರೆ. ಅದು ಮಾತ್ರವೇ ಅಲ್ಲದೆ, ಕೊತ್ತಲವಾಡಿ ಸಿನಿಮಾಕ್ಕೆ ಕೆಲಸ ಮಾಡಿದ್ದ ಬಹುತೇಕ ತಂತ್ರಜ್ಞರು ಪುಷ್ಪ ಅವರ ಎರಡನೇ ಸಿನಿಮಾನಲ್ಲಿಯೂ ಕೆಲಸ ಮಾಡಲಿದ್ದಾರೆ. ಆದರೆ ಕಲಾವಿದರು ಮಾತ್ರ ಕತೆಗೆ ತಕ್ಕಂತೆ ಬದಲಾಗಲಿದ್ದಾರೆ.
ಪುಷ್ಪ ಅವರ ‘ಪಿಎ’ ಪ್ರೊಕ್ಷನ್ನ ಎರಡನೇ ಸಿನಿಮಾ ಇದಾಗಲಿದ್ದು, ಮೊದಲ ಸಿನಿಮಾಕ್ಕಿಂತಲೂ ಭಿನ್ನವಾದ ಕತೆಯುಳ್ಳ ಸಿನಿಮಾ ಅನ್ನು ನಿರ್ಮಿಸಲು ಪುಷ್ಪ ಅರುಣ್ಕುಮಾರ್ ಮುಂದಾಗಿದ್ದಾರೆ.