Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಮೈಸೂರು ದಸರಾದ ಪ್ರಮುಖ ಆಕರ್ಷಣೆ , ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಜಂಬೂ ಸವಾರಿ ವೀಕ್ಷಿಸಲು ಈಗಾಗಲೇ ದೇಶ-ವಿದೇಶ ಹಾಗೂ ರಾಜ್ಯದ ನಾನಾ ಭಾಗಗಳಿಂದ ಜನರು ಮೈಸೂರಿಗೆ ಬಂದಿದ್ದಾರೆ.
ವಿಜಯದಶಮಿ ದಿನವಾದ ಇಂದು ಮದ್ಯಾಹ್ನ 1 ಗಂಟೆಯಿಂದ 1.18 ರವರೆಗೆ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಶುಭ ಧನುರ್ ಲಗ್ನದಲ್ಲಿ ನಂದಿದ್ವಜದ ಪೂಜೆ ನಡೆಯಲಿದೆ. ಅರಮನೆಯ ಬಲರಾಮ ದ್ವಾರದ ಬಳಿ ನಂದಿಧ್ವಜದ ಪೂಜೆ ನೆರವೇರಿಸಲಾಗುವುದು.
ಆರನೇ ಬಾರಿ ಕ್ಯಾಪ್ಟನ್ ಅಭಿಮನ್ಯು 750 ಕೆಜಿ ತೂಕದ ಅಂಬಾರಿಯನ್ನು ಹೊರಲಿದ್ದಾನೆ. ಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಪೂಜೆ ಇರಲಿದೆ. ಆನಂತರ ಜಂಬೂ ಸವಾರಿ ಎರಡು ಗಂಟೆ ತಡವಾಗಿ ಅಂಬಾರಿ ಹೊತ್ತು ಅಭಿಮನ್ಯು ಮೆರವಣಿಗೆ ಸಾಗಲಿದೆ.
ಸಂಜೆ 4:42 ರಿಂದ 5.06 ರೊಳಗೆ ಜಂಬೂಸವಾರಿಗೆ ಚಾಲನೆ ನೀಡಲಾಗುವುದು. ಶುಭ ಕುಂಭಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ಗಣ್ಯರು ಸೇರಿದಂತೆ ಲಕ್ಷಾಂತರ ಜನ ಜಂಬೂ ಸವಾರಿ ಮೆರವಣಿಗೆ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.