Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ಯಾರಿಸ್‌ನಲ್ಲಿ ಇನ್ನೂ ನಿಯಂತ್ರಣಕ್ಕೆ ಸಿಗದ ಹಿಂಸಾಚಾರ: 300 ಮಂದಿ ಬಂಧನ,‌ ಜೋರಾಯ್ತು ‘ಬ್ಲಾಕ್‌ ಎವ್ರಿಥಿಂಗ್’ ಕೂಗು
ಪ್ರಮುಖವಿದೇಶ

ಪ್ಯಾರಿಸ್‌ನಲ್ಲಿ ಇನ್ನೂ ನಿಯಂತ್ರಣಕ್ಕೆ ಸಿಗದ ಹಿಂಸಾಚಾರ: 300 ಮಂದಿ ಬಂಧನ,‌ ಜೋರಾಯ್ತು ‘ಬ್ಲಾಕ್‌ ಎವ್ರಿಥಿಂಗ್’ ಕೂಗು

Share
2 Min Read
SHARE

newsics.com

ಪ್ಯಾರಿಸ್‌: ಯುವಕರ ಆಕ್ರೋಶಕ್ಕೆ ಉರುಳಿಬಿದ್ದ ನೇಪಾಳ ಸರ್ಕಾರದ ಕಡೆ ಜಗತ್ತಿನ ಗಮನ ಇರುವ ಹೊತ್ತಿನಲ್ಲಿ, ಫ್ರಾನ್ಸ್‌ನಲ್ಲಿ ಕೂಡ ಅಲ್ಲಿನ ಸರ್ಕಾರದ ವಿರುದ್ಧ ಜನ ದಂಗೆಯೆದ್ದಿದ್ದಾರೆ.

ಅಧ್ಯಕ್ಷ ಎಮಾನ್ಯುವಲ್‌ ಮ್ಯಾಕ್ರನ್‌ ಹಾಗೂ ಅವರಿಂದ ನೇಮಕ ಆಗುತ್ತಿರುವ ಪ್ರಧಾನಿಗಳ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ಆರಂಭವಾಗಿದ್ದು, 300ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಫ್ರಾನ್ಸ್‌ ನೂತನ ಪ್ರಧಾನಿ ಆಗಿ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೆಕೋರ್ನು ಅವರನ್ನು ಪ್ರಧಾನಿಯಾಗಿ ಮ್ಯಾಕ್ರನ್‌ ಮಂಗಳವಾರ ನೇಮಿಸಿದ್ದರು. ಈ ಮೂಲಕ, ಫ್ರಾನ್ಸ್‌ ಒಂದೇ ವರ್ಷದಲ್ಲಿ 4ನೇ ಪಿಎಂ ಕಾಣುವಂತಾಗಿದೆ.

ಈ ನಡುವೆ ಮ್ಯಾಕ್ರನ್‌ ಆಡಳಿತ, ಪದೇ ಪದೇ ಪ್ರಧಾನಿ ಬದಲಾವಣೆ ಮತ್ತು ಸರ್ಕಾರದ ಕ್ರಮಗಳಿಂದ ಜನ ಅಸಮಾಧಾನಗೊಂಡಿದ್ದಾರೆ. ದೇಶದ ಅರ್ಥಿಕ ಸ್ಥಿತಿ ಹದಗೆಟ್ಟಿದ್ದು, ಅದನ್ನು ಸುಧಾರಿಸಲು ಪಿಂಚಣಿ, ರಜೆ ಸೇರಿ ಜನರ ಹಲವು ಸವಲತ್ತು ಕಡಿತ ಮಾಡಿರುವ ಕೆಲವು ಕ್ರಮ ಕೈಗೊಂಡ ಬಗ್ಗೆ ಸಿಡಿದೆದ್ದಿದ್ದಾರೆ.

ಜನರು ‘ಬ್ಲಾಕ್‌ ಎವ್ರಿಥಿಂಗ್‌’ (ಎಲ್ಲವನ್ನೂ ಸ್ಥಗಿತಗೊಳಿಸಿ) ಪ್ರತಿಭಟನೆ ಆರಂಭಿಸಿದ್ದು, ವಿಧ್ವಂಸಕ ಕೃತ್ಯಗಳಿಗೆ ಕಾರಣರಾಗಿದ್ದಾರೆ. ರಾಜಧಾನಿ ಪ್ಯಾರಿಸ್‌ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆಗಳನ್ನು ತಡೆದು ಬೆಂಕಿ ಹಚ್ಚಲಾಗುತ್ತಿದೆ. ರೈಲು ಸಂಚಾರಕ್ಕೂ ಅನುವು ಮಾಡಿಕೊಡುತ್ತಿಲ್ಲ.

ದಂಗೆ ತಡೆಯಲು ಬಂದ ಪೊಲೀಸರೊಂದಿಗೂ ಪ್ರತಿಭಟನಾಕಾರರು ಸಂಘರ್ಷಕ್ಕಿಳಿದಿದ್ದಾರೆ. ಈ ಆಂದೋಲನಕ್ಕೆ ಯಾವುದೇ ನಾಯಕ ಅಥವಾ ಸಂಘಟನೆ ಮುಂದಾಳತ್ವ ವಹಿಸಿಲ್ಲವಾದ್ದರಿಂದ, ಇದನ್ನು ಹತ್ತಿಕ್ಕಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಪೊಲೀಸರು ಅಶ್ರುವಾಯು ಬಳಸಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸುತ್ತಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ದಂಗೆಯ ಬಗ್ಗೆ ಮಾತನಾಡಿರುವ ಆಂತರಿಕ ಸಚಿವ ಬ್ರುನೋ, ‘ರೆನ್ನೆಸ್‌ ನಗರದಲ್ಲಿ ಬಸ್‌ಗೆ ಬೆಂಕಿ ಹಚ್ಚಿ ವಿದ್ಯುತ್ ತಂತಿಗೆ ಹಾನಿ ಮಾಡಲಾಗಿದೆ. ರೈಲು ಮಾರ್ಗವೊಂದು ಸ್ಥಗಿತಗೊಂಡಿದೆ. ಬ್ಯಾರೀಕೇಡ್‌ಗಳನ್ನು ಮುರಿದು ಮುನ್ನುಗ್ಗುತ್ತಿರುವ ಪ್ರತಿಭಟನಾಕಾರರನ್ನು ತಡೆಯಲು 80,000 ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದು ಹೇಳಿದ್ದಾರೆ.

ಸರ್ಕಾರಿ ರಜೆಗಳ ಕಡಿತ, ಪಿಂಚಣಿ ಸ್ಥಗಿತದಂತಹ ಕಠಿಣ ಕ್ರಮಗಳಲ್ಲದೆ ಆರ್ಥಿಕ ಮುಗ್ಗಟ್ಟಿನ ಕಾರಣ ನೀಡಿ ಜನರ ಹಲವು ಸವಲತ್ತುಗಳನ್ನು ಸರ್ಕಾರ ಕಡಿತ ಮಾಡಿರುವ ಕಾರಣ ಜನರು ರೊಚ್ಚಿಗೆದ್ದಿದ್ದಾರೆ. ಹೀಗಾಗಿ ‘ನಮಗೆ ಸಮಸ್ಯೆಯಿರುವುದು ಮ್ಯಾಕ್ರನ್‌ನಿಂದ’ ಎಂದು ಅವರ ರಾಜೀನಾಮೆಗೂ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ದೇಶದಲ್ಲಿ ಕಳೆದ 2 ವರ್ಷದಲ್ಲಿ 4ನೇ ಪ್ರಧಾನಿ ಹುದ್ದೆಗೇರಿದ್ದು, ರಾಜಕೀಯ ಅಸ್ಥಿರತೆ ಬಗ್ಗೆ ಜನಾಕ್ರೋಶವಿತ್ತು. ಜತೆಗೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.

Gold Rate ಮಹಿಳೆಯರ ಪಿತ್ತ ನೆತ್ತಿಗೇರಿಸಿದ ಚಿನ್ನ: ಮತ್ತೆ ಗಗನಕ್ಕೇರಿದ ಬಂಗಾರದ ಬೆಲೆ

TAGGED:'Black Everything' chants riseViolence still out of control in Paris: 300 arrested
Share This Article
Facebook Twitter Copy Link Print
Previous Article ನೀರಿಗಾಗಿ ಜಗಳ: ಬೊಲೆರೊ ವಾಹನ ಹತ್ತಿಸಿ ವ್ಯಕ್ತಿಯ ಭೀಕರ ಕೊ*ಲೆ
Next Article ಸೋನಿಯಾ ಗಾಂಧಿಗೆ ರಿಲೀಫ್ ; FIR ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?