newsics.com
ಬದಲಾಗುತ್ತಿರುವ ಹವಾಮಾನದಿಂದಾಗಿ ಋತುಮಾನದ ರೋಗಗಳ ಅಪಾಯವು ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಹೆಚ್ಚಿನವರಲ್ಲಿ ಜ್ವರ ಶೀತದಂತಹ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಆದರೆ ಹೆಚ್ಚಿನವರು ಕಾಫಿ ಹಾಗೂ ಟೀ ಸೇವನೆ ಮಾಡಿ ಸ್ವಲ್ಪ ರಿಲ್ಯಾಕ್ಸ್ ಆಗಿಸಿಕೊಳ್ಳುತ್ತಾರೆ. ಆದರೆ ತಜ್ಞರು ಜ್ವರವಿದ್ದಾಗ ಕಾಫಿಯಲ್ಲಿರುವ ಕೆಫೀನ್ ಅಂಶ ಹೆಚ್ಚಾಗಿ ಇರುವ ಕಾರಣ ಕಾಫಿ ಸೇವನೆ ತ್ಯಜಿಸುವುದು ಉತ್ತಮ ಎನ್ನುವ ಸಲಹೆ ನೀಡುತ್ತಾರೆ.
ಜ್ವರವಿದ್ದಾಗ ಕಾಫಿ ಸೇವನೆ ಒಳ್ಳೆಯದಲ್ಲ ಏಕೆ?
ಜ್ವರ ಬಂದಾಗ ದೇಹವು ಸಹಜವಾಗಿ ಆಯಾಸಗೊಳ್ಳುತ್ತದೆ. ಈ ಸಮಯದಲ್ಲಿ ದೇಹಕ್ಕೆ ವಿಶ್ರಾಂತಿ ಅಗತ್ಯವಾಗಿ ಬೇಕು. ಈ ಸಮಯದಲ್ಲಿ ನೀವೇನಾದ್ರೂ ಕಾಫಿ ಸೇವನೆ ಮಾಡಿದ್ರೆ ಇದರಲ್ಲಿರುವ ಕೆಫೀನ್ ಅಂಶವು ದೇಹವನ್ನು ಎಚ್ಚರವಾಗಿರುವಂತೆ ಮಾಡುತ್ತದೆ. ಆದರೆ ಕಾಫಿ ಟೀ ಸೇರಿದಂತೆ ಸೇರಿದಂತೆ ಪಾನೀಯಗಳ ಸೇವನೆಯೂ ನಿಮ್ಮ ದೇಹವು ವಿರುದ್ಧವಾಗಿ ಪ್ರತಿಕ್ರಿಯಿಸಬಹುದು.
ಇನ್ನು ಈ ಕಾಫಿಯಲ್ಲಿರುವ ಕೆಫೀನ್ ನಿಮಗೆ ನಿದ್ರೆ ಮಾಡಲು ಸಹಾಯ ಮಾಡುವುದಿಲ್ಲ. ಇದು ದೇಹದಲ್ಲಿ ನಿರ್ಜಲೀಕರಣಕ್ಕೂ ಕಾರಣವಾಗುತ್ತದೆ. ಆದರೆ ಆರೋಗ್ಯ ಹದಗೆಟ್ಟಾಗ ನೀರಿನಂಶವನ್ನು ಕಾಯ್ದುಕೊಳ್ಳುವುದು ಮುಖ್ಯ. ಆದರೆ ಈ ಕಾಫಿ ಸೇವನೆ ಹೆಚ್ಚು ಮೂತ್ರ ವಿಸರ್ಜನೆ ಮಾಡುವಂತೆ ಮಾಡಬಹುದು. ಈ ಕಾರಣದಿಂದ ಈ ಸಮಯದಲ್ಲಿ ಕಾಫಿ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ.
ಹೀಗಾಗಿ ಜ್ವರ ಬಂದ ಸಂದರ್ಭದಲ್ಲಿ ವಿಶ್ರಾಂತಿಯೊಂದಿಗೆ ನಿದ್ರೆಯನ್ನು ಉತ್ತೇಜಿಸುವ ಪೌಷ್ಟಿಕ ಆಹಾರ ಸೇವಿಸುವುದು ಅಗತ್ಯ. ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರ ಸೇವನೆ, ಬೆಚ್ಚಗಿನ ನೀರು ಅಥವಾ ಗಂಜಿ ಕುಡಿಯುವ ಅಭ್ಯಾಸವಿರಲಿ. ಕೆಫೀನ್ ಅಂಶ ಹೊಂದಿರುವ ಪಾನೀಯಗಳ ಸೇವನೆ ಆದಷ್ಟು ತಪ್ಪಿಸಿ ಎಂದು ತಜ್ಞರು ಹೇಳುತ್ತಾರೆ.
ಸೋಷಿಯಲ್ ಮೀಡಿಯಾ ಬ್ಯಾನ್ ಖಂಡಿಸಿ ಬೃಹತ್ ಪ್ರತಿಭಟನೆ ; 20 ಮಂದಿ ಸಾವು, 250 ಜನರಿಗೆ ಗಾಯ