Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > boy rides a horse to school ಕುದುರೆ ಏರಿ ಶಾಲೆಗೆ ಹೋಗ್ತಾನೆ ಈ ಪುಟ್ಟ ಬಾಲಕ! ಒಂದು ದಿನವೂ ಶಾಲೆ ತಪ್ಪಿಸಿಲ್ಲ…
ದೇಶಪ್ರಮುಖವೈರಲ್

boy rides a horse to school ಕುದುರೆ ಏರಿ ಶಾಲೆಗೆ ಹೋಗ್ತಾನೆ ಈ ಪುಟ್ಟ ಬಾಲಕ! ಒಂದು ದಿನವೂ ಶಾಲೆ ತಪ್ಪಿಸಿಲ್ಲ…

Share
2 Min Read
SHARE

newsics.com

ಯುವರಾಜ್ ಮೂರನೇ ತರಗತಿಯ ವಿದ್ಯಾರ್ಥಿ. ಪ್ರತಿದಿನ ಕುದುರೆ ಮೇಲೆ ಶಾಲೆಗೆ ಬರುತ್ತಾನೆ. ಹೀಗಾಗಿ ಈ ಬಾಲಕ ಈಗ ಭಾರೀ ಫೇಮಸ್ ಆಗಿಬಿಟ್ಟಿದ್ದಾನೆ.

ಈ ಪುಟ್ಟ ಬಾಲಕ ಬಾರ್ಬಕಾರ ಗ್ರಾಮದಲ್ಲಿ ವಾಸಿಸುತ್ತಾನೆ. ಈ ಗ್ರಾಮವು ರಾಜಧಾನಿ ಗುವಾಹಟಿಯ ಬಳಿಯ ದಕ್ಷಿಣ ಕಾಮರೂಪ ಜಿಲ್ಲೆಯ ಅಸ್ಸಾಂ – ಮೇಘಾಲಯ ಗಡಿ ಭಾಗದಲ್ಲಿರುವ ಒಂದು ಪುಟ್ಟ ಹಳ್ಳಿ. ತೀರಾ ಗ್ರಾಮೀಣ ಪ್ರದೇಶ.

ಬಾರ್ಬಕಾರ ಗ್ರಾಮದಲ್ಲಿ ಸಾರಿಗೆ ಸೌಲಭ್ಯವಂತೂ ಇಲ್ಲವೇ ಇಲ್ಲ. ಕಾಲ್ನಡಿಗೆಯೇ ಇವರಿಗೆ ಇರುವ ಏಕೈಕ ಮಾರ್ಗ. ಯುವರಾಜ್ ದಕ್ಷಿಣ ಪಂತನ್ ಬುಡಕಟ್ಟು ಮಾಧ್ಯಮ ಇಂಗ್ಲಿಷ್ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸ ಮುಂದುವರಿಸಿದ್ದಾನೆ.

ಈ ಪುಟ್ಟ ಬಾಲಕ ಓದುತ್ತಿರುವ ಶಾಲೆ ಆತನ ಮನೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿದೆ.
ಆತನ ಗ್ರಾಮಕ್ಕೂ ಶಾಲೆಯ ನಡುವೆ ದಟ್ಟ ಕಾನನ. ಕಾನನದ ಮಧ್ಯ ಇರುವ ಸುಂದರ ರಸ್ತೆ.. ಆ ಸುಂದರ ರಸ್ತೆಯಲ್ಲಿ ಕುದರೆ ಏರಿ ಬರ್ತಾನೆ ಈ ಪುಟ್ಟ ಯುವರಾಜ. ಈ ಯುವರಾಜ ಒಂದೇ ಒಂದು ದಿನವೂ ಶಾಲೆ ತಪ್ಪಿಸದೇ ತರಗತಿಗಳಿಗೆ ಹಾಜರಾಗುತ್ತಾನೆ.

ಯುವರಾಜ್ ನನ್ನು ಶಾಲೆಗೆ ಕರೆತರಲು ಶಾಲಾ ಬಸ್ ಅಥವಾ ವ್ಯಾನ್ ವ್ಯವಸ್ಥೆ ಅಂತೂ ಇಲ್ಲವೇ ಇಲ್ಲ. ಆದರೆ ಅವರ ಬಳಿ ಡಾ. ಭೂಪೇನ್ ಹಜಾರಿಕಾ, ಕಿಶೋರ್ ಕುಮಾರ್ ಮತ್ತು ಆಶಾ ಭೋಸ್ಲೆ ಹಾಡಿದ ‘ಪಕ್ಕಿರಾಜ್’ನಂತಹ ಕುದುರೆ ಇದೆ.

ಯುವರಾಜ್ ಪ್ರತಿದಿನ ನಾಲ್ಕು ಕಿಲೋಮೀಟರ್ ಸವಾರಿ ಮಾಡಿ ದೂರದ ಬೆಟ್ಟ ಮತ್ತು ಅರಣ್ಯ ಪ್ರದೇಶದಿಂದ ಶಾಲೆಗೆ ಒಬ್ಬಂಟಿಯಾಗಿಯೇ ಹೋಗುತ್ತಾನೆ.
ಈ ಪುಟ್ಟ ಯುವರಾಜ್ ತನ್ನ ಶಾಲಾ ಚೀಲವನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಶಾಲೆಗೆ ಬಂದಾಗ, ಎಲ್ಲರೂ ಅವನತ್ತ ಒಂದು ಬಾರಿ ನೋಡಿಯೇ ನೋಡುತ್ತಾರೆ.

ಆತನ ರಾಜ ಗಾಂಭೀರ್ಯಕ್ಕೆ ಮನಸೋಲದವರೇ ಇಲ್ಲ ಬಿಡಿ.. ಶಾಲೆ ಮುಗಿದ ನಂತರ ಮಗು ತನ್ನ ಪ್ರೀತಿಯ ಕುದುರೆಯ ಮೇಲೇರಿ ಮನೆಗೆ ಮರಳುತ್ತಾನೆ. ಅದು ಥೇಟ್ ರಾಜ ಗಾಂಭೀರ್ಯದಿಂದಲೇ ಅನ್ನುವುದು ಮತ್ತೊಂದು ವಿಶೇಷ.

ನಿಷ್ಠೆಯಿಂದ ಶಾಲೆಗೆ ಹೋಗುವುದು ಅಷ್ಟೇ ಅಲ್ಲ , ತನ್ನನ್ನು ನಿತ್ಯವೂ ಶಾಲೆಗೆ ಕರೆದುಕೊಂಡು ಬರುವ ಹಾಗೂ ಮರಳಿ ಸುರಕ್ಷಿತವಾಗಿ ಬಿಡುವ ಕುದುರೆಗೆ ವಿಶ್ರಾಂತಿ ನೀಡಿ ಆಹಾರವನ್ನು ನೀಡುವುದು ಎಂದಿನ ಕಾಯಕವಾಗಿದೆ.
ರಾಜಗಾಂಭೀರ್ಯದ ಯುವರಾಜ್ ರಭಾನ ಆಸೆ ಏನೆಂದರೆ, ಚೆನ್ನಾಗಿ ಅಭ್ಯಾಸ ಮಾಡಿ ಪೊಲೀಸ್ ಆಗುವುದಂತೆ. ಅಂದ ಹಾಗೆ ಈತನಿಗೆ ಪೊಲೀಸರು ಎಂದರೆ ಎಲ್ಲಿಲ್ಲದ ಪ್ರೀತಿ. ಇದೇ ಪ್ರೀತಿ ಈತನನ್ನು ತಾನೊಬ್ಬ ಪೊಲೀಸ್ ಆಗಬೇಕು ಎಂಬ ಆಸೆ ಚಿಗುರೊಡೆಯುವಂತೆ ಮಾಡಿದೆಯಂತೆ.

TAGGED:This little boy rides a horse to school.
Share This Article
Facebook Twitter Copy Link Print
Previous Article ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಕ್ಕೆ ಹಕ್ಕಿ ಡಿಕ್ಕಿ
Next Article Amit Mishra announces retirement ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ ಭಾರತದ ಅಮಿತ್ ಮಿಶ್ರಾ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?