newsics.com
ದಾವಣಗೆರೆ: ಮಕ್ಕಳಾಗಲಿಲ್ಲ ಅನ್ನೋ ಕೊರಗಿಗೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿಯಲ್ಲಿ ನಡೆದಿದೆ.
ಷಣ್ಮುಖಪ್ಪ (62) ಇಂದ್ರಮ್ಮ(50) ಮೃತ ದುರ್ದೈವಿಗಳು.ಮಕ್ಕಳಾಗಲಿಲ್ಲ ಅನ್ನೋ ಕೊರಗಿಗೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಷಣ್ಮುಖಪ್ಪ ಹಾಗೂ ಇಂದ್ರಮ್ಮ ಅವರು ಮದುವೆಯಾಗಿ 30 ವರ್ಷ ಕಳೆದಿತ್ತು. ಮಕ್ಕಳಾಗದೇ ಒತ್ತಡಕ್ಕೆ ಒಳಗಾಗಿದ್ದ ದಂಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ಮಕ್ಕಳ ಚಿಂತೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ದಂಪತಿ ವಿಷಪೂರಿತ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.