newsics.com
ಪ್ರತಿಯೊಂದು ಬಣ್ಣಗಳು ಕೂಡ ತನ್ನದೇ ಆದ ವಿಶೇಷತೆಯನ್ನು ಹೊಂದಿವೆ. ಒಂದೊಂದು ಬಣ್ಣವೂ ಒಂದೊಂದು ಸಂದೇಶವನ್ನು ಸಾರುತ್ತದೆ. ಆದರೆ ಅನೇಕ ಮಂದಿ ನೀಲಿ ಬಣ್ಣಗಳನ್ನು ಇಷ್ಟಪಡುತ್ತಾರೆ. ಆದರೆ ಬಣ್ಣಗಳ ಮೂಲಕ ವ್ಯಕ್ತಿಯ ಮನಸ್ಥಿತಿ ಮತ್ತು ಆಲೋಚನಾ ಕ್ರಮವನ್ನು ತಿಳಿಯಬಹುದು.
ಮನಃಶಾಸ್ತ್ರಜ್ಞರು ಹೇಳುವ ಪ್ರಕಾರ ಅವರ ಮನಸ್ಥಿತಿಯನ್ನು ಯಾರಿಗಾದರೂ ಇಷ್ಟವಾದ ಬಣ್ಣದಿಂದ ತಿಳಿಯಬಹುದು. ಬಣ್ಣವನ್ನು ಅವಲಂಬಿಸಿ, ಅವರು ಗಂಭೀರ ಸ್ವಭಾವದವರಾ ಅಥವಾ ಸೂಕ್ಷ್ಮ ಸ್ವಭಾವದವರ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಹುದು.
ಗುಲಾಬಿ ಬಣ್ಣಕ್ಕೆ ಸಾಮಾನ್ಯವಾಗಿ ಹುಡುಗಿಯರು ಆದ್ಯತೆ ನೀಡುತ್ತಾರೆ. ಮಕ್ಕಳು, ಯುವತಿಯರು ತೊಡುವ ಡ್ರೆಸ್ ನಿಂದ ಹಿಡಿದು ಬಳಸುವ ವಸ್ತುಗಳವರೆಗೆ ಗುಲಾಬಿ ಬಣ್ಣವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.
ಗುಲಾಬಿ ಬಣ್ಣವನ್ನು ಸಾಮಾನ್ಯವಾಗಿ ಹುಡುಗಿಯರ ಬಣ್ಣವೆಂದು ಪರಿಗಣಿಸಲಾಗುತ್ತದೆ. ನೀಲಿ ಬಣ್ಣವನ್ನು ಹುಡುಗನ ಬಣ್ಣವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಹುಡುಗರಿಗೆ ನೀಲಿ ಮತ್ತು ಹುಡುಗಿಯರು ಬಟ್ಟೆ ಅಥವಾ ಏನನ್ನಾದರೂ ಖರೀದಿಸಲು ಬಯಸಿದಾಗ ಗುಲಾಬಿ ಬಣ್ಣವನ್ನೇ ಆಯ್ಕೆ ಮಾಡುತ್ತಾರೆಹುಡುಗಿಯರಿಗೂ ಗುಲಾಬಿ ಬಣ್ಣಕ್ಕೂ ಏನು ಸಂಬಂಧ? ಹುಡುಗಿಯರಿಗೆ ಗುಲಾಬಿ ಬಣ್ಣ ಏಕೆ ಇಷ್ಟ? ಎಂದು ನೀವು ಎಂದಾದರೂ ಯೋಚಿಸಿದ್ದೀರಾ. ತಿಳಿಯಲು ಮುಂದೆ ಓದಿ.
20 ನೇ ಶತಮಾನದ ಆರಂಭದಲ್ಲಿ, ಬಟ್ಟೆ ಮತ್ತು ಆಟಿಕೆಗಳನ್ನು ಮಾರಾಟ ಮಾಡುವ ಅಂಗಡಿಗಳು ಮೊದಲಿಗೆ ಈ ರೀತಿ ಬಣ್ಣಗಳನ್ನು ವರ್ಗೀಕರಿಸಿದವು. ಅಂದರೆ ಅವರು ಮಾರಾಟ ಮಾಡುವಾಗ ಹುಡುಗರಿಗೆ ನೀಲಿ ಮತ್ತು ಹುಡುಗಿಯರಿಗೆ ಗುಲಾಬಿ ಎಂದು ನಿರ್ಧಾರ ಮಾಡುತ್ತಾರೆ. ಅದರಂತೆ ಮುಂತಾದ ವಸ್ತುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಒಂದು ಕಾಲದಲ್ಲಿ ಗುಲಾಬಿ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಹುಡುಗನ ಬಣ್ಣವೆಂದು ಪರಿಗಣಿಸಲ್ಪಟ್ಟಿತು . ವಿಕ್ಟೋರಿಯನ್ ಯುಗದಲ್ಲಿ, ರಾಣಿ ವಿಕ್ಟೋರಿಯಾ ಮತ್ತು ಅವಳ ಮಗ ಪ್ರಿನ್ಸ್ ಆರ್ಥರ್ ಸಾಮಾನ್ಯವಾಗಿ ಗುಲಾಬಿ ಬಣ್ಣದ ಬಿಳಿ ಬಟ್ಟೆಯನ್ನು ಧರಿಸಿದ್ದರು. ಹೀಗಾಗಿ ಆಗಿನ ಕಾಲದಲ್ಲಿಯೂ ಹುಡುಗರ ಬಣ್ಣ ಪಿಂಕ್ ಕೂಡ ಮೆಚ್ಚಿನ ಬಣ್ಣ ಆಗಿತ್ತು ಎನ್ನಲಾಗಿದೆ.
ಹುಡುಗಿಯರು ಪಿಂಕ್ ಕಲರ್ ಇಷ್ಟಪಡುವವರಲ್ಲಿ ಪ್ರೀತಿ ಮತ್ತು ಕಾಳಜಿ ಹೆಚ್ಚಿರುತ್ತದೆ ಎಂಬ ವರದಿಯೂ ಇದೆ. ಈ ಬಣ್ಣ ಇಷ್ಟ ಪಡುವವರು ಸಂಬಂಧಗಳಿಗೆ ಬೆಲೆ, ಮತ್ತೊಬ್ಬರ ಜೊತೆ ಮಾತನಾಡುವುದು ಇಷ್ಟವಾಗುತ್ತದೆ, ಏನೇ ಮಾಡಿದ್ರೂ ಹೃದಯಪೂರ್ವಕವಾಗಿ ಮಾಡುತ್ತಾರೆ ಎನ್ನಲಾಗಿದೆ. ಆದರೆ ಈ ಬಣ್ಣವನ್ನು ಒಷ್ಟಪಡುವವರ ಪ್ರಬುದ್ಧತೆಯ ಮಟ್ಟ ಸ್ವಲ್ಪ ಕಡಿಮೆ ಎಂದು ವರದಿಯಿದೆ.
ನೀಲಿ ಪುರುಷರ ಬಣ್ಣ ಎಂದೂ ಕರೆಯಲಾಗುತ್ತದೆ. ಅನೇಕ ಹುಡುಗರು ನೀಲಿ ಬಣ್ಣವನ್ನು ಇಷ್ಟಪಡುತ್ತಾರೆ. ನೀಲಿ ಬಣ್ಣ ನಂಬಿಕೆಯನ್ನು ಪ್ರತಿನಿಧಿಸುತ್ತದೆ ಎನ್ನಲಾಗಿದೆ. ಈ ಬಣ್ಣವನ್ನು ಇಷ್ಟಪಡುವವರು ಶಾಂತ ಸ್ವಭಾವದವರಾಗಿರುತ್ತಾರೆ. ಬೇರೆಯವರ ಬಗ್ಗೆ ಅಷ್ಟು ಸುಲಭವಾಗಿ ತಪ್ಪಾಗಿ ತಿಳಿಯುವುದಿಲ್ಲ ಎಂಬ ವರದಿಯಿದೆ.