newsics.com
ಶುಭೋದಯ
ನಿತ್ಯ ಪಂಚಾಂಗ
22 ಜುಲೈ 2024, ಸೋಮವಾರ
ದಿನ ವಿಶೇಷ:
* ಪೈ ಅಂದಾಜು ದಿನ
* ಬಾಜಿಪ್ರಭು ದೇಶಪಾಂಡೆ ಬಲಿದಾನ ದಿನ
***
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ- ದಕ್ಷಿಣಾಯನ
ದಿನಾಂಕ – 22/07/2024
ತಿಂಗಳು – ಜುಲೈ
ಬಣ್ಣ – ಬಿಳಿ
ವಾರ – ಸೋಮವಾರ
ತಿಥಿ – ಪ್ರಥಮಾ (ಪಾಡ್ಯ) 13:11:04
ಪಕ್ಷ – ಕೃಷ್ಣ
ನಕ್ಷತ್ರ – ಶ್ರವಣ 22:20:04
ಯೋಗ – ಪ್ರೀತಿ 17:56:52
ಕರಣ – ಕೌಲವ 13:11:04
ಕರಣ – ತೈತುಲ 23:48:01
ಋತು – ಗ್ರೀಷ್ಮ
ಸೂರ್ಯೋದಯ 06:04:10
ಸೂರ್ಯಾಸ್ತ 18:47:58
ಹಗಲಿನ ಅವಧಿ 12:43:47
ರಾತ್ರಿಯ ಅವಧಿ 11:16:27
ಚಂದ್ರಾಸ್ತ 06:43:35
ಚಂದ್ರೋದಯ 19:54:35
ರಾಹು ಕಾಲ 07:40 – 09:15 ಅಶುಭ
ಯಮಗಂಡ ಕಾಲ 10:51 – 12:26 ಅಶುಭ
ಗುಳಿಕ ಕಾಲ 14:02 – 15:37
ಅಭಿಜಿತ್ 12:01 – 12:52 ಶುಭ
ದುರ್ಮುಹೂರ್ತ 12:52 – 13:42 ಅಶುಭ
ದುರ್ಮುಹೂರ್ತ 15:24 – 16:15 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ನಮ್ಮ ಮನಸ್ಸಿಗೆ ಶಾಂತಿ – ನೆಮ್ಮದಿ ಬೇಕಿದ್ದರೆ, ಮತ್ತೊಬ್ಬರಲ್ಲಿನ ತಪ್ಪನ್ನು ಹುಡುಕುವ ಚಾಳಿಯನ್ನು ನಾವು ಬಿಡಬೇಕು.
***
ಇಂದಿನ ಇತಿಹಾಸ
ಜುಲೈ 22
—
ಪೈ ಅಂದಾಜು ದಿನ
ಪೈ ದಿನವು ಗಣಿತದ ಸ್ಥಿರ π (pi) ನ ವಾರ್ಷಿಕ ಆಚರಣೆಯಾಗಿದೆ. 3, 1, ಮತ್ತು 4 π ಯ ಮೊದಲ ಮೂರು ಪ್ರಮುಖ ಅಂಕೆಗಳು ಆಗಿರುವುದರಿಂದ ಪೈ ಡೇ ಮಾರ್ಚ್ 14 ರಂದು (3/14 ತಿಂಗಳ/ ದಿನ ದಿನಾಂಕ ಸ್ವರೂಪದಲ್ಲಿ) ಆಚರಿಸಲಾಗುತ್ತದೆ. 2009ರಲ್ಲಿ ಯುನೈಟೆಡ್ ಸ್ಟೇಟ್ಸ್ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಪೈ ದಿನದ ಹೆಸರನ್ನು ಬೆಂಬಲಿಸಿದರು. ಪೈ ಅಂದಾಜು ದಿನವನ್ನು ಜುಲೈ 22 ರಂದು (22/7 ದಿನ/ ತಿಂಗಳ ದಿನಾಂಕ ಸ್ವರೂಪದಲ್ಲಿ) ಆಚರಿಸಲಾಗುತ್ತದೆ. ಏಕೆಂದರೆ 22/7 ಭಾಗವು π ಯ ಸಾಮಾನ್ಯ ಅಂದಾಜಾಗಿದೆ. ಇದು ಆರ್ಕಿಮಿಡೀಸ್‌ನಿಂದ ಎರಡು ದಶಮಾಂಶ ಸ್ಥಳಗಳು ಮತ್ತು ದಿನಾಂಕಗಳಿಗೆ ನಿಖರವಾಗಿದೆ.
ಪ್ರಮುಖ ಘಟನೆಗಳು
* ಜುಲೈ 22, 1918 ರಂದು ಭಾರತದ ಮೊದಲ ಫೈಟರ್ ಪೈಲೆಟ್ ಇಂದ್ರ ಲಾಲ್ ರೈ ಯುದ್ಧದಲ್ಲಿ ನಿಧನರಾದರು.
* ಭದ್ರಗಿರಿ ಕೇಶವದಾಸರು – ಕೀರ್ತನ ಕಲೆಯನ್ನು ವಿಶ್ವದಾದ್ಯಂತ ಪ್ರಚುರಪಡಿಸಿದ ಕೀರ್ತಿ ಭದ್ರಗಿರಿ ಕೇಶವದಾಸರದು. ಅದ್ವೈತ ವೇದಾಂತ ಮತ್ತು ಯೋಗ ಗುರುವಾಗಿ, ಬರಹಗಾರರಾಗಿ, ಸಂಗೀತ ಸಂಯೋಜಕರಾಗಿ ಹಾಗೂ ಸರ್ವಧರ್ಮ ಸಮನ್ವಯಕಾರರಾಗಿ ಸಹಾ ಅವರು ಪ್ರಸಿದ್ಧರು. ಕೇಶವದಾಸರು 1934 ವರ್ಷದ ಜುಲೈ 22 ರಂದು ಮೈಸೂರಿನ ಬಳಿಯ ಭದ್ರಗಿರಿ ಎಂಬ ಗ್ರಾಮದಲ್ಲಿ ಜನಿಸಿದರು. ಕೇಶವದಾಸರು 6000ಕ್ಕೂ ಹೆಚ್ಚು ಹಾಡುಗಳನ್ನು ಬರೆದು, ಸಂಯೋಜಿಸಿ ಹಾಡಿದ್ದರಂತೆ. ಹರಿಕಥಾ ಕಲಾವಿಚಕ್ಷಣ, ಕೀರ್ತನ ಕೇಸರಿ, ಕೀರ್ತನ ನಾಟಕ ವಿಶಾರದ ಮುಂತಾದ ಅನೇಕ ಬಿರುದುಗಳು, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳೂ ಅವರಿಗೆ ಸಂದಿದ್ದವು.
* ದೇವೇಂದ್ರ ಜಿ. ಫಡ್ನವಿಸ್ – ಮಹಾರಾಷ್ಟ್ರದ 18ನೇ ಮುಖ್ಯಮಂತ್ರಿ ದೇವೇಂದ್ರ ಗಂಗಾಧರ್ ರಾವ್ ಫಡ್ನವಿಸ್ ಅವರು ಜುಲೈ 22, 1970 ರಂದು ಜನಿಸಿದರು.
* ಜುಲೈ 22, 1999 ರಂದು ಕರ್ನಾಟಕದ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ವಿಧಾನಸಭೆ ವಿಸರ್ಜಿಸುವಂತೆ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರಿಗೆ ಶಿಫಾರಸು ಮಾಡಿದರು.