newsics.com
ತಿರುಪತಿ: ಬೆಂಗಳೂರಿನ ಭಕ್ತರೊಬ್ಬರು ಶ್ರೀ ವೆಂಕಟೇಶ್ವರ ಅನ್ನ ಪ್ರಸಾದ ಟ್ರಸ್ಟ್‌ಗೆ 1 ಕೋಟಿ ರೂ. ದೇಣಿಗೆ ನೀಡಿದ್ದು, ಮತ್ತೊಬ್ಬ ಭಕ್ತರು ಬುಧವಾರ ವಜ್ರಗಳು ಮತ್ತು ವೈಜಯಂತಿ ಕಲ್ಲುಗಳಿಂದ ಕೂಡಿದ ಚಿನ್ನದ ಲಕ್ಷ್ಮಿ ಪೆಂಡೆಂಟ್ ಅನ್ನು ವೆಂಕಟೇಶ್ವರ ದೇವರಿಗೆ ನೀಡಿದ್ದಾರೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಯಾಣ್ ರಾಮನ್ ಕೃಷ್ಣಮೂರ್ತಿ ಅವರು ನೀಡಿರುವ ₹1ಕೋಟಿ ದೇಣಿಗೆಯನ್ನು ಭಕ್ತರಿಗೆ ಉಚಿತವಾಗಿ ನೀಡುವ ಅನ್ನ ಪ್ರಸಾದಕ್ಕೆ ಬಳಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೃಷ್ಣಮೂರ್ತಿ ಅವರು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಅವರಿಗೆ ದೇಣಿಗೆಯ ಚೆಕ್ ಅನ್ನು ಹಸ್ತಾಂತರಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಿರುಮಲ ವೆಂಕಟೇಶ್ವರ ದೇಗುಲವನ್ನು ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವೆಂದು ಪರಿಗಣಿಸಲಾಗಿದೆ.
https://www.newsics.com/2025/08/13/do-snakes-lurk-near-houses-during-the-rainy-season/