newsics.com
ವಿಜಯನಗರ: ಹರಿಹರದಿಂದ ಬಳ್ಳಾರಿಗೆ ತೆರಳುತ್ತಿದ್ದ KSRTC ಬಸ್ ಚಾಲಕನ ಮೇಲೆ ಪೊಲೀಸ್ ಸಿಬ್ಬಂದಿಯೊಬ್ಬರು ಚಪ್ಪಲಿಯಿಂದ ಹಲ್ಲೆ ಮಾಡಿರುವ ಘಟನೆ ವಿಜಯನಗರದ ಗಜಪುರ ಗ್ರಾಮದ ಬಳಿ ನಡೆದಿದೆ.
ಘಟನೆಯ ವಿವರ:
ಗಜಪುರ ಗ್ರಾಮದ ಬಳಿ KSRTC ಬಸ್‌ನ ಚಾಲಕ ರಾಮಲಿಂಗಪ್ಪ ಎಂಬುವವರು ತಮ್ಮ ಬಸ್‌ನ್ನು ಚಲಾಯಿಸುತ್ತಿದ್ದಾಗ, ಪೊಲೀಸ್ ಸಿಬ್ಬಂದಿಯ ಗಾಡಿಗೆ ಬಸ್ ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಿ ಚಾಲಕನ ಮೇಲೆ ದೌರ್ಜನ್ಯ ನಡೆಸಿದ್ದಾರೆ.
ರಾಮಲಿಂಗಪ್ಪನವರು ಕೈಮುಗಿದು ಕ್ಷಮೆ ಯಾಚಿಸಿದರೂ, ಪೊಲೀಸ್ ಸಿಬ್ಬಂದಿಯು ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ, ಸೋಶಿಯಲ್ ಮೀಡಿಯಾದಲ್ಕಿ ವಿಡಿಯೋ ವೈರಲ್ ಆಗುತ್ತಿವೆ.
ಪೊಲೀಸ್ ಸಿಬ್ಬಂದಿಯಿಂದ ಚಾಲಕನ ಮೇಲೆ ನಡೆದ ಈ ಹಲ್ಲೆಯ ಖಚಿತ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಪ್ರಾಥಮಿಕ ಮಾಹಿತಿಯ ಪ್ರಕಾರ, ರಾಮಲಿಂಗಪ್ಪನವರು ಚಲಾಯಿಸುತ್ತಿದ್ದ ಬಸ್‌ನಿಂದ ಡಿಕ್ಕಿಯಾಗಿರುವ ಆರೋಪದ ಮೇಲೆ ಈ ದೌರ್ಜನ್ಯ ನಡೆದಿದೆ ಎಂದು ತಿಳಿದುಬಂದಿದೆ. ಈ ಘಟನೆಯಿಂದ KSRTC ಸಿಬ್ಬಂದಿಗಳು ಮತ್ತು ಸ್ಥಳೀಯ ಜನತೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಕೂಡಲೇ ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ,ವ್ಯವಸ್ಥಾಪಕ ನಿರ್ದೇಶಕರಿಗೆ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಿರುತ್ತಾರೆ. ಅದರಂತೆ
ವ್ಯವಸ್ಥಾಪಕ ನಿರ್ದೇಶಕರು,ಕೆ ಎಸ್ ಆರ್ ಟಿ ಸಿ ರವರು ಖುದ್ದು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾತನಾಡಿ ಈ ಬಗ್ಗೆ ತ್ವರಿತ ಕ್ರಮ ತೆಗೆದುಕೊಳ್ಳುವಂತೆ ಕೋರಿರುತ್ತಾರೆ. ಅದರಂತೆ , ಹಲ್ಲೆ ಮಾಡಿದವರ ಮೇಲೆ FIR ದಾಖಲಾಗಿದೆ.
Dharmasthala Case Discussion: ಧರ್ಮಸ್ಥಳ ಕೇಸ್ ; ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?