newsics.com
ಕಲಬುರಗಿ: ಜೈನ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳು, ಮುಸ್ಲಿಂ ಸಮುದಾಯದ ಯುವಕನ ಜೊತೆ ನಾಪತ್ತೆಯಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಬಿಎಸ್ಸಿ (BSc) ಪದವಿ ಓದುತ್ತಿರುವ ಜೈನ ಯುವತಿ, ಡ್ರೈವರ್ ವೃತ್ತಿ ಮಾಡುತ್ತಿದ್ದ ಮುಸ್ಲಿಂ ಯುವಕನ ಜೊತೆ ನಾಪತ್ತೆಯಾಗಿದ್ದಾಳೆ.
ಮುಸ್ಲಿಂ ಯುವಕನ ಮೇಲೆ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಬಿಎಸ್ಸಿ ಪದವಿ ಓದುತ್ತಿರುವ ಜೈನ ಯವತಿ ತಲೆ ಕೆಡಿಸಿ, ಲವ್ ಜಿಹಾದ್ ಮಾಡಲಾಗಿದೆ ಅಂತ ಆಕೆಯ ಹೆತ್ತವರು ಆರೋಪಿಸಿದ್ದಾರೆ.ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೊಬ್ಬುರ ಗ್ರಾಮದ ಯುವತಿಯನ್ನು ಅದೇ ಗ್ರಾಮದ ಡ್ರೈವರ್ ಮಶಾಕ್ ಎಂಬಾತ ಪ್ರೀತಿಸುತ್ತಿದ್ದ. ಕಳೆದ ಜುಲೈ 29 ರಂದು ಯುವತಿಯನ್ನ ಕರೆದುಕೊಂಡು ಮುಸ್ಲಿಂ ಯುವಕ ಮಶಾಕ್ ಎಸ್ಕೇಪ್ ಆಗಿದ್ದಾನಂತೆ. ಯುವತಿ ಕಾಲೇಜಿನ ಬಳಿಯಿಂದಲೇ ಕರೆದೊಯ್ದ ಮಶಾಕ್, ಬಳಿಕ ನಾಪತ್ತೆಯಾಗಿದ್ದಾನೆ. ಇದಾಗಿ ಎಂಟು ದಿನ ಕಳೆದರೂ ಯುವತಿಯ ಪತ್ತೆ ಇಲ್ಲ. ಹೀಗಾಗಿ ಆಕೆಯ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.
https://www.newsics.com/2025/08/07/heavy-rains-in-23-districts-including-coastal-areas/