newsics.com
ಒಮ್ಮೊಮ್ಮೆ ಸಂಬಂಧಗಳು ಎಷ್ಟೇ ಗಟ್ಟಿಯಾಗಿದ್ದರೂ ಸಹ ಕ್ಲಿಷ್ಟಕರವಾಗಿ ಬದಲಾಗಬಹುದು. ಅಂತಹ ಸನ್ನಿವೇಶಗಳು ಆಸಕ್ತಿದಾಯಕವೆಂದು ತೋರುತ್ತದೆಯಾದರೂ ಬಹಳಷ್ಟು ನೋವುಂಟು ಮಾಡುತ್ತದೆ. ಇಂತಹದ್ದೇ ದುರಂತ ಕಹಾನಿಗಳು ಸ್ಟಾರ್ ಕ್ರಿಕೆಟಿಗನ ಜೀವನದಲ್ಲೂ ನಡೆದಿದೆ ಎಂದರೆ ನಂಬಲು ಸಾಧ್ಯವೇ? ಹೌದು ಅಂತಹ ಘಟನೆ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಜೀವನದಲ್ಲಿ ನಡೆದಿದೆ.
2007 ರಲ್ಲಿ ದಿನೇಶ್ ಕಾರ್ತಿಕ್ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದ ಮೂರು ವರ್ಷಗಳ ನಂತರ, ಅವರು ತಮ್ಮ ಬಾಲ್ಯದ ಗೆಳತಿ ನಿಕಿತಾ ವಂಜಾರಾ ಅವರನ್ನು ವಿವಾಹವಾದರು. ಸುಮಾರು 5 ವರ್ಷಗಳ ಕಾಲ ಚೆನ್ನಾಗಿದ್ದ ದಾಂಪತ್ಯ 2012 ರಲ್ಲಿ ವಿಚ್ಛೇದನದ ಮೂಲಕ ಕೊನೆಗೊಂಡಿತು.
ದಿನೇಶ್ ಮತ್ತು ನಿಕಿತಾ ಅವರ ದಾಂಪತ್ಯದಲ್ಲಿ ತುಂಬಾ ಸಂತೋಷವಾಗಿದ್ದರು. ಆದರೆ ಈ ಮಧ್ಯೆ ದಿನೇಶ್ ಕಾರ್ತಿಕ್ ಜೀವನಕ್ಕೆ ಮುಳ್ಳಾಗಿದ್ದು ಅವರ ಸ್ನೇಹಿತ ಮುರಳಿ ವಿಜಯ್. ಈತನ ಜೊತೆಯೇ ವಿವಾಹೇತರ ಸಂಬಂಧ ಹೊಂದಿದ್ದ ಮುರಳಿ ನಿಕಿತಾ, ಆತನಿಂದಲೇ ಗರ್ಭಿಣಿಯಾಗಿದ್ದಳು.
ಈ ಕರಾಳ ಘಟನೆಯಿಂದ ದಿನೇಶ್ ಕಾರ್ತಿಕ್ ಕುಗ್ಗಿ ಹೋಗಿದ್ದರು. ಖಿನ್ನತೆಗೆ ಜಾರಿದ್ದ ಅವರು ಜೀವನವನ್ನೇ ಕೊನೆಗೊಳಿಸುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಅವರ ಬದುಕಿಗೆ ಆಶಾಕಿರಣವಾಗಿ ಬಂದಿದ್ದು ದೀಪಿಕಾ ಪಲ್ಲಿಕಲ್.2015 ರಲ್ಲಿ ಇಬ್ಬರೂ ವಿವಾಹವಾದರು.. ಸದ್ಯ ಇಬ್ಬರಿಗೂ ಇಬ್ಬರು ಅವಳಿ ಮಕ್ಕಳಿದ್ದಾರೆ… ನಿಕಿತಾ ಜೊತೆಗಿನ ವಿಚ್ಚೇದನದ ನಂತರ, ದೀಪಿಕಾ ದಿನೇಶ್ ಕಾರ್ತಿಕ್ ಅವರ ಜೀವನವನ್ನು ಸುಧಾರಿಸಿದರು.. ಇಂದು ಇಬ್ಬರೂ ತಮ್ಮ ಕುಟುಂಬ ಜೀವನದಲ್ಲಿ ತುಂಬಾ ಸಂತೋಷವಾಗಿದ್ದಾರೆ.
https://www.newsics.com/2025/08/06/when-is-the-2nd-lunar-eclipse-of-this-year/