newsics.com
ಪುಟ್ಟ ಹುಡುಗಿಯ ಕ್ಯಾನ್ಸರ್ ಗುಣ ಮಾಡಿದ ವೈದ್ಯರಿಗೆ ತನ್ನ ಕೈಯಾರೆ ಮಾಡಿದ ಉಡುಗೊರೆಯನ್ನು ನೀಡಿದ್ದು, ಈ ಬಗ್ಗೆ ವೈದ್ಯರು ಭಾವುಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ಛತ್ತೀಸ್ಗಢದ ಮಕ್ಕಳ ವೈದ್ಯರಾದ ಡಾ. ತನ್ಮಯ್ ಮೋತಿವಾಲಾ ಅವರ ಮದುವೆಗೆ ಬರಲು ಸಾಧ್ಯವಾಗದ ಕಾರಣ ಈ ಪುಟ್ಟ ಹುಡುಗಿ ತಾನೇ ಕೈಯಿಂದ ಮಾಡಿದ ಉಡುಗೊರೆಯನ್ನು ನೀಡಿದ್ದಾಳೆ. ಈ ಬಗ್ಗೆ ಎಕ್ಸ್ನಲ್ಲಿ ವಿವರಿಸಿದ್ದಾರೆ. ‘ನನ್ನ ಹೃದಯ ತುಂಬಿ ಬಂದಿದೆ. ಇಂದು ಸಂತೋಷದ ಕಣ್ಣೀರು ಬಂತು. ನನಗೆ ತುಂಬಾ ಖುಷಿ ನೀಡಿದ ಉಡುಗೊರೆ ಒಂದು ನಮ್ಮ ಮನೆಗೆ ಬಂದಿತು. ನಾನು ಅವಳನ್ನು ನನ್ನ ಮದುವೆಗೆ ಆಹ್ವಾನಿಸಿದ್ದೆ ಆದರೆ ಅವಳಿಗೆ ಮದುವೆಗೆ ಬರಲು ಸಾಧ್ಯವಾಗಿಲ್ಲ. ಬದಲಾಗಿ, ಅವಳು ನನಗೆ ಸುಂದರವಾದ ತಾನೇ ಕೈಯಾರ ಮಾಡಿದ ಉಡುಗೊರೆಗಳನ್ನು ಕಳುಹಿಸಿದಳು. ಖುಷಿ ನನ್ನ ರೋಗಿ, ಆದರೆ ಅದಕ್ಕಿಂತ ಹೆಚ್ಚಾಗಿ, ಅವಳು ಆತ್ಮೀಯ ಸ್ನೇಹಿತೆ. ಧೈರ್ಯಶಾಲಿ ಕ್ಯಾನ್ಸರ್ ನಿಂದ ಬದುಕುಳಿದವಳು. ಜೀವನದ ಬಗ್ಗೆ ನನಗೆ ಎಂದಿಗಿಂತಲೂ ಹೆಚ್ಚು ಕಲಿಸಿದ ಮಗು’ ಎಂದು ಹೇಳಿದ್ದಾರೆ.
2022ರಲ್ಲಿ ಆಕೆ ನಮ್ಮ ಆಸ್ಪತ್ರೆಗೆ ಕ್ಯಾನ್ಸರ್ ರೋಗಿಯಾಗಿ ಬಂದಿದ್ದಳು. ಎದೆಯಲ್ಲಿ ಗೆಡ್ಡೆಯಾಗಿ, ಭಾರದ ಹೃದಯದಿಂದ ಆಸ್ಪತ್ರೆಗೆ ಬಂದಿದ್ದಳು ಈ ಐದು ವರ್ಷದ ಖುಷಿ. ನಾನು ಅವಳೊಂದಿಗೆ ಮಾತನಾಡಲು, ತಮಾಷೆ ಮಾಡಲು, ನನ್ನ ಫೋನ್ನಲ್ಲಿ ಕಾರ್ಟೂನ್ಗಳನ್ನು ತೋರಿಸಲು, ಅವಳಿಗೆ ಕಚಗುಳಿ ಇಡಲು ಒಂದು ಗಂಟೆ ಅಲ್ಲಿ ಕುಳಿತಿದ್ದೆ. ಸಮಯ ಕಳೆದಂತೆ ಬಾಂಧವ್ಯ ಬೆಳೆಯಿತು.ಕಾಲಾನಂತರದಲ್ಲಿ ನಾನು ಸಂಜೆ ಆಸ್ಪತ್ರೆಗೆ ಬರುವಾಗ ನಮ್ಮ ಕೈಹಿಡಿದು ಮಾತನಾಡಿಸುತ್ತಾಳೆ. ನಾನು ಕೆಲಸ ಮಾಡುವಾಗ ಅವಳು ನನ್ನ ಇಯರ್ಫೋನ್ಗಳನ್ನು ಬಳಸಿ ಹಾಡುಗಳನ್ನು ಕೇಳುತ್ತಿದ್ದಳು ಎಂದು ವೈದ್ಯರು ನೆನಪಿಸಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.