Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಭವಿಷ್ಯ ಹೇಳುವ ನೆಪದಲ್ಲಿ ಯುವಕನಿಗೆ ವಂಚಿಸಿದ ಡೋಂಗಿ ಬಾಬಾ
ಕರ್ನಾಟಕ

ಭವಿಷ್ಯ ಹೇಳುವ ನೆಪದಲ್ಲಿ ಯುವಕನಿಗೆ ವಂಚಿಸಿದ ಡೋಂಗಿ ಬಾಬಾ

Share
1 Min Read
SHARE

newsics.com

ಐಮ್ಯಾಕ್ಸ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಒಬ್ಬ ಡೋಂಗಿ ಬಾಬಾ ವಂಚಿಸಿದ ಘಟನೆ ಬೆಂಗಳೂರಿನ ಹೊರವಲಯವಾದ ಆನೇಕಲ್‌ನಲ್ಲಿ ನಡೆದಿದೆ.

ಐಮ್ಯಾಕ್ಸ್ ಸ್ಟೋರ್‌ನಲ್ಲಿ ಸಂತೋಷ್ ಕುಮಾರ್ ಒಬ್ಬನೇ ಕೆಲಸದಲ್ಲಿದ್ದಾಗ, ಒಬ್ಬ ವ್ಯಕ್ತಿ ತಲೆಯ ಮೇಲೆ ನವಿಲುಗರಿ ಇಟ್ಟುಕೊಂಡು, ಒಂದು ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಅಂಗಡಿಗೆ ಪ್ರವೇಶಿಸಿದ. ಈ ಡೋಂಗಿ ಬಾಬಾ, ಇಪ್ಪತ್ತೈದು ದಿನಗಳಲ್ಲಿ ನಿನ್ನ ಭವಿಷ್ಯ ಬದಲಾಗುತ್ತದೆ ಎಂದು ಸಂತೋಷ್‌ಗೆ ಕಥೆಯೊಡ್ಡಿದ. ಈ ಮಾತಿನಿಂದ ಆಕರ್ಷಿತನಾದ ಸಂತೋಷ್, ಆರಂಭದಲ್ಲಿ ಎರಡು ರೂಪಾಯಿಗಳನ್ನು ದಾನವಾಗಿ ನೀಡಿದ.

ಡೋಂಗಿ ಬಾಬಾ ತನ್ನ ವಂಚನೆಯ ತಂತ್ರವನ್ನು ಮುಂದುವರೆಸಿದ್ದು, ಎರಡು ರೂಪಾಯಿಯನ್ನು ರುದ್ರಾಕ್ಷಿಯಾಗಿ ಪರಿವರ್ತಿಸುವ ಕರಾಮತ್ತನ್ನು ತೋರಿಸಿದ ಬಾಬಾ, ನಂತರ ನೂರು ರೂಪಾಯಿಗಳನ್ನು ಪಡೆದು ಸಾಯಿಬಾಬಾ ವಿಗ್ರಹವೊಂದನ್ನು ಸಂತೋಷ್‌ಗೆ ನೀಡಿದ. ಈ ನಕಲಿ ಪವಾಡದಿಂದ ಆಕರ್ಷಿತನಾದ ಸಂತೋಷ್, ಬಾಬಾನ ಮಾತುಗಳನ್ನು ನಂಬಿದ. ಬಾಬಾ ಮುಂದೆ ತಲೆಯ ಮೇಲೆ ನವಿಲುಗರಿ ಇಟ್ಟು ಬ್ಲಾಕ್ ಮ್ಯಾಜಿಕ್ ಮಾಡುವುದಾಗಿ ಹೇಳಿದ್ದಾನೆ.

ಇದನ್ನು  ಬಳಸಿಕೊಂಡ ಬಾಬಾ, ಅಂಗಡಿಯ ಕ್ಯಾಷ್ ಬಾಕ್ಸ್‌ನಿಂದ 1,500 ರೂಪಾಯಿಗಳನ್ನು ಕದ್ದು, ಬಾಬಾ ಮಂತ್ರ ಮಾಡಿ ಕೊಡುವುದಾಗಿ ಹೇಳಿ, ಸಂತೋಷ್‌ನ ಕೈಯಿಂದಲೇ ಫಾಸ್ಟ್ರಾಕ್ ವಾಚ್‌ನ್ನು ಬಿಚ್ಚಿಸಿ, ತನ್ನ ಕೈಗೆ ಧರಿಸಿಕೊಂಡ. ಕೊನೆಗೆ, 1,500 ರೂಪಾಯಿ ಹಣ ಮತ್ತು ಫಾಸ್ಟ್ರಾಕ್ ವಾಚ್‌ನೊಂದಿಗೆ ಡೋಂಗಿ ಬಾಬಾ ಸ್ಥಳದಿಂದ ಪಾರಾರಿಯಾಗಿದ್ದಾನೆ. ಈ ಘಟನೆಯ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಘಟನೆಯ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.newsics.com/2025/08/02/kaffer-dam-collapses-due-to-heavy-rains/

TAGGED:#DongiBaba #cheated #man #pretext #fortune #banglore
Share This Article
Facebook Twitter Copy Link Print
Previous Article ಭಾರೀ ಮಳೆಯಿಂದ ಕಾಫರ್ ಅಣೆಕಟ್ಟು ಕುಸಿತ – ವಿಡಿಯೋ ನೋಡಿ
Next Article ಹಾಸ್ಟೆಲ್ನ 10 ನೇ ಮಹಡಿಯಿಂದ ಹಾರಿ ಜೀವ ಕಳೆದುಕೊಂಡ ಐಐಟಿ ವಿದ್ಯಾರ್ಥಿ

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಕರ್ನಾಟಕಪ್ರಮುಖ

Elephant in garbage dump ಎಂಎಂ ಹಿಲ್ಸ್‌ನ ಕಸದ ರಾಶಿಯಲ್ಲಿ ಆಹಾರ ಅರಸುತ್ತಿದೆ ಈ ಆನೆ! ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?