newsics.com
ಸಮಂತಾ ಅಂದ್ರೆ ತೆಲುಗು ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ, ಇಡೀ ಇಂಡಿಯಾ ಪೂರ್ತಿ ಹೆಸರು ಇದ್ದು ಭಾರಿ ದೊಡ್ಡ ಅಭಿಮಾನಿ ಬಳಗ ಕೂಡ ನಟಿ ಸಮಂತಾ ಅವರ ಬೆನ್ನಿಗೆ ಇದೆ. ಅದರಲ್ಲೂ ನಟಿ ಸಮಂತಾ ಅವರಿಗೆ ಕನ್ನಡ ನಾಡು ಅಂದ್ರೆ ನಮ್ಮ ಕರ್ನಾಟಕ ರಾಜ್ಯದಲ್ಲೂ ಭಾರಿ ದೊಡ್ಡ ಅಭಿಮಾನಿಗಳಿದ್ದು, ನಟಿ ಸಮಂತಾ ಅವರನ್ನು ಆರಾಧಿಸುತ್ತಾರೆ ಅಭಿಮಾನಿಗಳು.
ಇದೀಗ ನಟಿ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಧಿಮೋರ್ ಸಂಬಂಧದ ಕುರಿತು ವದಂತಿ ಹೆಚ್ಚುತ್ತಿದೆ.ಫೋಟೊಗಳು ಕೂಡ ಈಗಾಗಲೇ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿದೆ. ಅದರ ಬೆನ್ನಲ್ಲೆ ಎರಡನೇ ಮದುವೆಯ ದಿನಾಂಕ ಕೂಡ ನಿಗದಿಯಾಗಿದ್ದು ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ನಟಿ ಸಮಂತಾ ಅವರು ಶೀಘ್ರವೇ ಮರು ವಿವಾಹವಾಗಲಿದ್ದಾರೆ ಎಂಬ ಗಾಸಿಪ್ ಹರಿದಾಡಿದೆ. ಈ ಮೂಲಕ ಅವರ ಮದುವೆ ಡೇಟ್ ಕೂಡ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದ್ದು ಇದೀಗ ಹೊಸ ಕುತೂಹಲಕ್ಕೆ ಕಾರಣವಾಗಿದೆ.
ಸಮಂತಾ ಮತ್ತು ರಾಜ್ ನಿಡಿಮೋರು ಮದುವೆ ಸಂಬಂಧದಲ್ಲಿ ಒಂದಾಗಲಿದ್ದಾರೆ ಎಂದು ತೋರುತ್ತದೆ. ಆಗಸ್ಟ್‌ನಲ್ಲಿ ಅವರ ಮದುವೆ ನಡೆಯಲಿದೆ ಎಂಬ ವದಂತಿ ಇದ್ದರೂ, ಸಮಂತಾ ಅಕ್ಟೋಬರ್‌ನಲ್ಲಿ ಮದುವೆಯಾಗಲು ಆಸಕ್ತಿ ತೋರಿಸುತ್ತಿದ್ದಾರಂತೆ.ಅಕ್ಟೋಬರ್ 6 ರಂದು ಸಮಂತಾ ಮದುವೆಯಾಗಲು ಪ್ಲಾನ್ ಮಾಡುತ್ತಿದ್ದಾರೆ. ಚೈತುಗೆ ದೊಡ್ಡ ಶಾಕ್ ನೀಡಲು ಸಮಂತಾ ಪ್ಲಾನ್ ಮಾಡಿದ್ದಾರೆ ಎಂಬ ಸುದ್ದಿ ಜೋರಾಗಿದೆ. ಅಕ್ಟೋಬರ್ 6 ರಂದು ಸಮಂತಾ-ನಾಗ ಚೈತನ್ಯ ಮದುವೆಯೂ ನಡೆಯಿತು. ಅದಕ್ಕಾಗಿಯೇ ಸಮಂತಾ ಈ ದಿನಾಂಕವನ್ನು ನಿಗದಿಪಡಿಸಿದ್ದು, ರಾಜ್-ಸಮಂತಾ ಯಾವುದೇ ಗಡಿಬಿಡಿಯಿಲ್ಲದೆ ಸರಳ ಚರ್ಚ್‌ನಲ್ಲಿ ಒಂದಾಗಲಿದ್ದಾರೆ ಎಂದು ವರದಿಯಾಗಿದೆ.
https://www.newsics.com/2025/07/23/they-are-being-abused-in-their-own-home/