newsics.com
ಹೈದರಾಬಾದ್ : ಬೆಂಗಳೂರಿನ ಬಿಜೆಪಿ ಮುಖಂಡರಾದ ಕಾಡುಗೋಡು ವೀರಸ್ವಾಮಿ ರೆಡ್ಡಿ ಹಾಗೂ ಪುತ್ರ ಪ್ರಶಾಂತ್ ರೆಡ್ಡಿಯನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ನಡೆದಿದೆ.
ಚೆಕ್ ಬೌನ್ಸ್ ಪ್ರಕರಣ ಸಂಬಂಧ ಕೋರ್ಟ್ ಗೆ ತೆರಳುವಾಗ ಕಾಡುಗುಡಿಯ ವೀರಸ್ವಾಮಿ ರೆಡ್ಡಿ ಹಾಗೂ ಪುತ್ರ ಪ್ರಶಾಂತ್ ರೆಡ್ಡಿಯನ್ನ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಲಾಗಿದೆ. ವೈಯಕ್ತಿಕ ದ್ವೇಷಕ್ಕೆ ಈ ಹತ್ಯೆ ನಡೆದಿರಬಹುದೆಂದು ಶಂಕಿಸಲಾಗಿದೆ.
ಕಾರ್ಪೊರೇಷನ್ ಚುನಾವಣೆಗೆ ನಿಲ್ಲೋದಕ್ಕೆ ವೀರಸ್ವಾಮಿ, ಪ್ರಶಾಂತ್ ಸಿದ್ಧತೆ ನಡೆಸಿದ್ದರು.ಆಂಧ್ರದ ಬಾಪೆಟ್ಲ ಜಿಲ್ಲೆಯ ಚೆಕ್ ಬೌನ್ಸ್ ಕೇಸ್ ದಾಖಲಾಗಿತ್ತು