newsics.com
ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ತೆರಿಗೆ ನೋಟಿಸ್‌ಗಳಿಂದ ಕಂಗಲಾಗಿರುವ ಅಂಗಡಿ ಮಾಲೀಕರು ಇದೀಗ ಕೆರಳಿದ್ದಾರೆ. ಹೀಗಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆ ಕ್ರಮ ವಿರೋಧಿಸಿ ಮುಷ್ಕರ ನಡೆಸಲು ರಾಜ್ಯಕಾರ್ಮಿಕ ಪರಿಷತ್ ನಿರ್ಧರಿಸಿದೆ. ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟ್ ಮಾರಾಟ ಮಾಡುವುದನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ. ಜುಲೈ 23ರಿಂದ ಜುಲೈ 25ರವರೆಗೆ ಹಂತ ಹಂತವಾಗಿ ಅಂಗಡಿ ಬಂದ್ ಮಾಡಲಾಗುತ್ತದೆ. ಹೀಗಾಗಿ ಕಾರ್ಮಿಕ ಪರಿಷತ್ ಸದ್ಯ ಪ್ರತಿ ಅಂಗಡಿಗೂ ತೆರಳಿ ಕರಪತ್ರ ನೀಡುತ್ತಿದೆ. ಬಂದ್‌ಗೆ ಬಂಬಲಿಸಿ ಎಂದು ಮನವಿ ಮಾಡುತ್ತಿದೆ.
ವರ್ತಕರ ಹೋರಾಟ ಹೇಗಿರುತ್ತೆ? ಮುಷ್ಕರದ ವೇಳೆ ಏನೇನಿರಲ್ಲ?
ಜುಲೈ 25ರಂದು ಅಂಗಡಿ ಮುಂಗಟ್ಟು ಬಂದ್‌ಗೆ ವ್ಯಾಪಾರಸ್ಥರ ನಿರ್ಧಾರ.
ಜುಲೈ 23-24 ರಂದು ಹಾಲು ಮಾರಾಟ ಬಂದ್.
ಜುಲೈ 23-24 ರಂದು ಕಪ್ಪು ಪಟ್ಟಿ ಧರಿಸಿ ಹಾಲು ಇಲ್ಲದ ಕಾಫಿ, ಚಹಾ ಮಾತ್ರ ಮಾರಾಟ.
ಜುಲೈ 25 ರಂದು ಅಂಗಡಿ ಬಂದ್ ಮಾಡಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ.
ಪ್ರತಿಭಟನೆಯಲ್ಲಿ ಬೇಕರಿ, ಕಾಂಡಿಮೆಂಟ್ಸ್, ಕಾಫಿ-ಟೀ ಶಾಪ್, ಸಣ್ಣಪುಟ್ಟ ವ್ಯಾಪಾರಿಗಳು, ಕುಟುಂಬದವರು ಭಾಗಿಯಾಗಲಿದ್ದಾರೆ.
ಜುಲೈ 25 ರಂದು ಬೇಕರಿ, ಕಾಂಡಿಮೆಂಟ್ಸ್, ಕಾಫಿ-ಟೀ ಶಾಪ್, ಸಣ್ಣಪುಟ್ಟ ವ್ಯಾಪಾರಿಗಳ ವ್ಯವಹಾರ ಬಂದ್.
ಮುಷ್ಕರದ ವೇಳೆ ಏನೇನಿರುತ್ತೆ?
ಜುಲೈ 23-24ರಂದು ಹಾಲು ಹೊರತುಪಡಿಸಿ ಉಳಿದ ವಸ್ತುಗಳ ವ್ಯಾಪಾರ ಇರಲಿದೆ.
ಜುಲೈ 25 ರಂದು ಬೇಕರಿ, ಕಾಂಡಿಮೆಂಟ್ಸ್, ಕಾಫಿ-ಚಹಾ ಅಂಗಡಿಗಳು, ಸಣ್ಣಪುಟ್ಟ ವ್ಯಾಪಾರಿಗಳ ವ್ಯವಹಾರ ಬಂದ್ ಇರಲಿದ್ದು, ಉಳಿದಂತೆ ಇತರೆ ಎಲ್ಲಾ ಸೇವೆಗಳು ಲಭ್ಯವಿರಲಿವೆ.
BIKLU SHIVA CASE : ಬಿಕ್ಲು ಶಿವ ಹತ್ಯೆ ಕೇಸ್; ಶಾಸಕ ಬೈರತಿ ಬಸವರಾಜ್ ಅಣ್ಣನ ಮಗ ಅರೆಸ್ಟ್