Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಫೋನ್ ಮಿಸ್ ಆಗಿದೆಯಾ? ತಕ್ಷಣ ಈ ರೀತಿ ಮಾಡಿ
ಲೈಫ್‌ಸ್ಟೈಲ್

ಫೋನ್ ಮಿಸ್ ಆಗಿದೆಯಾ? ತಕ್ಷಣ ಈ ರೀತಿ ಮಾಡಿ

Share
3 Min Read
SHARE

newsics.com

ದಿನಾಲು ಎಷ್ಟೋ ಫೋನ್‌ಗಳು ಕಳ್ಳತನ ಆಗ್ತವೆ. ಹಲವು ಬಾರಿ ಫೋನ್ ಕಳೆದು ಹೋಗುತ್ತದೆ. ಒಮ್ಮೆ ಕಳೆದುಕೊಂಡ ಅಥವಾ ಕಳ್ಳತನವಾದ ಫೋನ್ ಮರಳಿ ಸಿಕ್ಕಿದ ಉದಾಹರಣೆ ಕಡಿಮೆ.

ಆದರೆ ಈಗ ಫೋನ್ ಎಲ್ಲದರ ಕೀಲಿ ಕೈ. ಬ್ಯಾಂಕ್ ಖಾತೆ, ವೈಯುಕ್ತಿಕ ಮಾಹಿತಿ ಸೇರಿದಂತೆ ಎಲ್ವೂ ಫೋನ್‌ನಲ್ಲೇ ಇದೆ. ಹೀಗಾಗಿ ಡೇಟಾ, ಖಾತೆ, ದುಡ್ಡು ಸೇರಿದಂತೆ ಎಲ್ಲವನ್ನೂ ಸುರಕ್ಷಿತವಾಗಿಡುವುದು ಸವಾಲಿನ ಕೆಲಸ.
ಫೋನ್ ಕಳೆದ ತಕ್ಷಣ ಪೊಲೀಸ್ ಸ್ಟೇಷನ್‌ಗೆ ದೂರು ನೀಡಿ. IMEI ನಂಬರ್ (*#06# ಡಯಲ್ ಮಾಡಿದ್ರೆ ಸಿಗಲಿದೆ ಅಥವಾ ಫೋನ್ ಬಿಲ್‌ನಲ್ಲಿ ದಾಖಲಾಗಿರುತ್ತದೆ) ಹೇಳಿ FIR ತಗೊಳ್ಳಿ. ಇದು ಫೋನ್ ಟ್ರ್ಯಾಕ್ ಮಾಡಿ ಬ್ಲಾಕ್ ಮಾಡೋಕೆ ಸಹಾಯ ಆಗ್ತದೆ.
ನಿಮ್ಮ ನೆಟ್‌ವರ್ಕ್ ಕಂಪನಿಗೆ (Jio, Airtel, Vi) ಕರೆ ಮಾಡಿ ಸಿಮ್ ಬ್ಲಾಕ್ ಮಾಡಿಸಿ. ಹೀಗೆ ಮಾಡಿದ್ರೆ ನಿಮ್ಮ ನಂಬರ್ ಯಾರೂ ಉಪಯೋಗಿಸ್ಲಿಕ್ಕೆ ಆಗಲ್ಲ. ಆಮೇಲೆ ಅದೇ ನಂಬರ್‌ನಲ್ಲಿ ಹೊಸ ಸಿಮ್ ತಗೋಬಹುದು..
www.ceir.gov.in ವೆಬ್‌ಸೈಟ್‌ನಲ್ಲಿ ನಿಮ್ಮ ಫೋನ್ ನಂಬರ್, IMEI ನಂಬರ್, ಫೋನ್ ಬಿಲ್, ಪೊಲೀಸ್ ದೂರಿನ ಪ್ರತಿ ನೀಡಿ ಫೋನ್ ಬ್ಲಾಕ್ ಮಾಡಿಸಿ. ಇದು ಫೋನ್ ಟ್ರ್ಯಾಕ್ ಮಾಡಿ ಬ್ಲಾಕ್ ಮಾಡೋಕೆ ಸಹಾಯ ಆಗ್ತದೆ.
https://www.google.com/android/find ವೆಬ್‌ಸೈಟ್‌ನಲ್ಲಿ ನಿಮ್ಮ Google ಖಾತೆಯಿಂದ ಲಾಗಿನ್ ಆಗಿ ಫೋನ್ ಟ್ರ್ಯಾಕ್ ಮಾಡಬಹುದು, ಲಾಕ್ ಮಾಡಬಹುದು ಅಥವಾ ಡೇಟಾ ಡಿಲೀಟ್ ಮಾಡಬಹುದು.
www.icloud.com/find ವೆಬ್‌ಸೈಟ್‌ನಲ್ಲಿ ನಿಮ್ಮ Apple IDಯಿಂದ ಲಾಗಿನ್ ಆಗಿ ಫೋನ್ ಟ್ರ್ಯಾಕ್ ಮಾಡಬಹುದು ಅಥವಾ ಬ್ಲಾಕ್ ಮಾಡಬಹುದು.
ನಿಮ್ಮ ಫೋನ್ ನಂಬರ್‌ಗೆ ಲಿಂಕ್ ಆಗಿರೋ ಬ್ಯಾಂಕ್ ಖಾತೆಗಳು, UPI ಆಯಪ್‌ಗಳು (Paytm, Google Pay), ಇಮೇಲ್, ಸೋಶಿಯಲ್ ಮೀಡಿಯಾ ಖಾತೆಗಳ ಪಾಸ್‌ವರ್ಡ್‌ಗಳನ್ನು ತಕ್ಷಣ ಬದಲಾಯಿಸಿ. Paytm ಖಾತೆ ಬ್ಲಾಕ್ ಮಾಡೋಕೆ Paytm ಪೇಮೆಂಟ್ಸ್ ಬ್ಯಾಂಕ್ ಗ್ರಾಹಕ ಸೇವೆಗೆ (0120-4456456) ಕರೆ ಮಾಡಿ.
ಫೋನ್ ವಿಮೆ, ಟ್ರ್ಯಾಕಿಂಗ್ ಆಯಪ್‌ಗಳನ್ನು ಮೊದಲೇ Google Find My Device ಅಥವಾ Cerberus ರೀತಿಯ ಟ್ರ್ಯಾಕಿಂಗ್ ಆಯಪ್‌ಗಳನ್ನು ಇನ್‌ಸ್ಟಾಲ್ ಮಾಡಿ ಆಯಕ್ಟಿವೇಟ್ ಮಾಡ್ಕೊಂಡ್ರೆ ಒಳ್ಳೆಯದು. ಫೋನ್‌ಗೆ ವಿಮೆ ಇದ್ರೆ, ವಿಮಾ ಕಂಪನಿಗೆ ಕರೆ ಮಾಡಿ ಕ್ಲೈಮ್ ಮಾಡಿ.
ಮೋಸಗಾರರು ನಿಮ್ಮ ಫೋನ್ ನಂಬರ್‌ ಅನ್ನು ಅವರ ಹತ್ತಿರ ಇರೋ ಹೊಸ ಸಿಮ್‌ಗೆ ಬದಲಾಯಿಸ್ತಾರೆ. ಇದಕ್ಕೆ ಅವರು ನಿಮ್ಮ ವೈಯಕ್ತಿಕ ಮಾಹಿತಿ (ಹುಟ್ಟಿದ ದಿನಾಂಕ, ಆಧಾರ್, ವಿಳಾಸ) ತಿಳ್ಕೊಳ್ತಾರೆ. ನೆಟ್‌ವರ್ಕ್ ಕಂಪನಿಗೆ “ಸಿಮ್ ಕಳೆದುಹೋಗಿದೆ” ಅಂತ ಸುಳ್ಳು ಹೇಳಿ ನಿಮ್ಮ ನಂಬರ್‌ ಅನ್ನು ಹೊಸ ಸಿಮ್‌ಗೆ ಬದಲಾಯಿಸ್ತಾರೆ. ಹೀಗೆ ನಿಮ್ಮ ನಂಬರ್‌ಗೆ ಬರೋ OTPಗಳು ಅವರಿಗೆ ಬರ್ತವೆ. ಇವುಗಳನ್ನು ಬಳಸಿ ಬ್ಯಾಂಕ್ ಖಾತೆಗಳು, ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳು, ಆನ್‌ಲೈನ್ ಖಾತೆಗಳನ್ನು ದೋಚುತ್ತಾರೆ.
ಒಂದು ಸಿಮ್ 90 ದಿನಗಳಿಗಿಂತ ಹೆಚ್ಚು ಬಳಸದಿದ್ರೆ ಅದು ನಿಷ್ಕ್ರಿಯ ಆಗಿ ಹೊಸಬರಿಗೆ ನೀಡಲಾಗುತ್ತದೆ. TRAI ನಿಯಮಗಳ ಪ್ರಕಾರ ಮೊದಲು ಬಳಸಿದವರ ಡೇಟಾ ಎಲ್ಲವನ್ನೂ ಅಳಿಸಬೇಕು. ಆದ್ರೆ, ತಾಂತ್ರಿಕ ಸಮಸ್ಯೆಗಳಿಂದ ಕೆಲವೊಮ್ಮೆ ಹಳೆಯ ಸಂದೇಶಗಳು, ಸಂಪರ್ಕಗಳು ಹೊಸಬರಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದು ಗೌಪ್ಯತೆಗೆ ಅಪಾಯ.
ಮೋಸಗಾರರು ನಕಲಿ ಆಧಾರ್, ಪ್ಯಾನ್ ಕಾರ್ಡ್ ಬಳಸಿ ಹಲವು ಸಿಮ್ ಕಾರ್ಡ್‌ಗಳನ್ನು ಖರೀದಿಸಿ, OTPಗಳನ್ನು ರಚಿಸಲು ಅವುಗಳನ್ನು ಮಾರಾಟ ಮಾಡ್ತಾರೆ.‌
ಫೋನ್ ಕಳೆದ ತಕ್ಷಣ ನೆಟ್‌ವರ್ಕ್ ಕಂಪನಿಗೆ ಕರೆ ಮಾಡಿ ಸಿಮ್ ಬ್ಲಾಕ್ ಮಾಡಿಸಿ. ಹೊಸ ಸಿಮ್ ತಗೊಂಡಾಗ ಬ್ಯಾಂಕ್ ಖಾತೆಗಳು, UPI ಆಯಪ್‌ಗಳನ್ನು ಹೊಸ ನಂಬರ್‌ಗೆ ಲಿಂಕ್ ಮಾಡಿ. ಬಯೋಮೆಟ್ರಿಕ್ ಪರಿಶೀಲನೆ DoT ಸಿಮ್ ಬದಲಾಯಿಸಲು ಬಯೋಮೆಟ್ರಿಕ್ ಪರಿಶೀಲನೆ, 24 ಗಂಟೆಗಳ SMS ನಿಷೇಧದಂತಹ ನಿಯಮಗಳನ್ನು ಹಾಕಿದೆ. ಇದು ಸಿಮ್ ಸ್ವಾಪ್ ಮೋಸಗಳನ್ನು ಕಡಿಮೆ ಮಾಡುತ್ತದೆ.
KYM, ASTR ಸೇವೆಗಳು
KYM: ನಿಮ್ಮ ಫೋನ್ IMEI ನಂಬರ್ ಪರಿಶೀಲಿಸಲು ಈ ಸೇವೆ ಬಳಸಿ.
ASTR: ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್‌ಗಳನ್ನು ತಿಳಿದುಕೊಳ್ಳಲು, ಮೋಸದ ಸಿಮ್‌ಗಳನ್ನು ಬ್ಲಾಕ್ ಮಾಡಲು ಇದು ಉಪಯುಕ್ತ.
ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ಹಂಚಿಕೊಳ್ಳಬೇಡಿ : ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ವಿವರಗಳು, OTPಗಳನ್ನು ಯಾರಿಗೂ ಹಂಚಿಕೊಳ್ಳಬೇಡಿ. ಅನುಮಾನಾಸ್ಪದ ಕರೆಗಳು, ಸಂದೇಶಗಳನ್ನು ಸಂಚಾರ್ ಸಾಥಿ ವೆಬ್‌ಸೈಟ್ (www.sancharsaathi.gov.in) ನಲ್ಲಿ ವರದಿ ಮಾಡಿ.

15 ವರ್ಷದ ಬಾಲಕಿ ಮೈಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು

TAGGED:What to do immediately if you lose your phone?; Follow these tips to release tension
Share This Article
Facebook Twitter Copy Link Print
Previous Article Life style ಎರಡೇ ನಿಮಿಷದಲ್ಲಿ ನಿದ್ರೆಗೆ ಜಾರುವ ಮಿಲಿಟರಿ ಟ್ರಿಕ್; ತುಂಬಾ ಜನಕ್ಕೆ ಸೂಪರ್ ರಿಸಲ್ಟ್ ಸಿಕ್ಕಿದೆ!
Next Article ಹೆಣ್ಣು ಸಿಗ್ತಿಲ್ಲವೆಂದು ಮನನೊಂದು ಹೋಂಗಾರ್ಡ್ ಆತ್ಮಹತ್ಯೆ

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?