newsics.com
ನಿರೂಪಕಿ, ನಟಿ ಅನುಶ್ರೀ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕೆಲ ವರ್ಷಗಳಿಂದ ಅನುಶ್ರೀ ಮದುವೆ ಯಾವಾಗ ಅನ್ನೋರಿಗೆ ಸಿಹಿಸುದ್ದಿ ಸಿಕ್ಕಿದೆ.
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಆಗಸ್ಟ್ 28ಕ್ಕೆ ಮದುವೆ ಆಗಲಿದ್ದಾರೆ. ಕೊಡಗು ಮೂಲದ ಕಾರ್ಪೋರೇಟ್ ಉದ್ಯಮಿ ಜೊತೆ ಅನುಶ್ರೀ ಮದುವೆ ನಡೆಯಲಿದೆ. ಇದು ಪಕ್ಕಾ ಅರೇಂಜ್ ಮ್ಯಾರೇಜ್ ಎನ್ನುತ್ತಿವೆ ಮೂಲಗಳು. ಕುಟುಂಬದವರು ನೋಡಿದ ಹುಡುಗನ ಜೊತೆ ಅನುಶ್ರೀ ವಿವಾಹ ಆಗುತ್ತಿದ್ದಾರಂತೆ. ಬೆಂಗಳೂರಿನಲ್ಲೇ ಈ ವಿವಾಹ ಗ್ರಾಂಡ್ಆಗಿ ನೆರವೇರಲಿದೆ ಎನ್ನಲಾಗುತ್ತಿದೆ
ಅನುಶ್ರೀ ಅವರು ಫ್ಯಾಮಿಲಿ ನೋಡಿದ ಹುಡುಗನನ್ನೇ ಮದುವೆ ಆಗುತ್ತಿದ್ದಾರೆ. ಬೆಂಗಳೂರಿನಲ್ಲಿ ಗ್ರಾಂಡ್ ಆಗಿ ಮದುವೆ ನಡೆಯಲಿದೆ.
ಈ ಬಗ್ಗೆ ಅನುಶ್ರೀ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಮುಂದಿನ ದಿನಗಳಲ್ಲಿ ಅವರು ಈ ಬಗ್ಗೆ ಮಾಹಿತಿ ರಿವೀಲ್ ಮಾಡೋ ಸಾಧ್ಯತೆ ಇದೆ. ಅನುಶ್ರೀ ವಿವಾಹದ ಕುರಿತು ಈ ಮೊದಲು ಸಾಕಷ್ಟು ವರದಿಗಳು ಹರಿದಾಡಿದ್ದವು. ಆದರೆ, ಯಾವುದೂ ನಿಜ ಆಗಿರಲಿಲ್ಲ. ಈಗ ಅವರ ವಿವಾಹದ ಬಗ್ಗೆ ಹೊಸ ಸುದ್ದಿ ಒಂದು ಹರಿದಾಡುತ್ತಿದ್ದು, ಈ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕಿದೆ.
ಕೊಲ್ಕತ್ತಾದಲ್ಲಿ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ : ಬಾಗಲಕೋಟೆಯ ಯುವಕ ಅರೆಸ್ಟ್