newsics.com
ಪ್ರಸ್ತುತಮದುವೆ ಸಮಾರಂಭ ಅಂದರೆ ವೈಭವೋಪೇತವಾಗಿ, ಪ್ರೀ ವೆಡ್ಡಿಂಗ್ ಫೋಟೋ ಶುಟ್, ಪಾರ್ಟಿ, ಹಾಡು ಕುಣಿತ, ಪಟಾಕಿ ಸಿಡಿಸಿ, ಮೆರವಣಿಗೆ ಮಾಡುವುದು ಸಾಮಾನ್ಯವಾಗಿ ನಾವು ನೋಡುತ್ತಿರುತ್ತೇವೆ. ಆದರೆ, ಇದಕ್ಕೆಲ್ಲ ಭಿನ್ನವಾಗಿ, ಇಲ್ಲೊಂದು ಜೋಡಿ ಆಕಾಶದಲ್ಲಿ ಮದುವೆಯಾಗಿದ್ದರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು,ಸ್ಯಾಮ್ ಚುಯಿ ಮತ್ತು ಅವನ ಪತ್ನಿ ಫಿಯೋನಾ ಆಕಾಶದಲ್ಲಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಅವರು ಅರಬ್ ಎಮಿರೇಟ್ಸ್‌ನ ಫುಜೈರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಬೋಯಿಂಗ್ 747 ವಿಮಾನದಲ್ಲಿ ಸಾವಿರಾರು ಅಡಿ ಎತ್ತರದಲ್ಲಿ ಮದುವೆಯಾದರು. ಅವರ ಮದುವೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ದಲ್ಲಿ ಚುಯಿ ತನ್ನ ಪತ್ನಿ ಫಿಯೋನಾ ಜೊತೆ ರೆಡ್ ಕಾರ್ಪೆಟ್ ಮೇಲೆ ಕೈ ಕೈ ಹಿಡಿದು ನಡೆದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಬಿಳಿ ಬಣ್ಣದ ಉಡುಪಿನಲ್ಲಿರುವ ಈ ದಂಪತಿ ಆಕಾಶದಲ್ಲಿ ತಮ್ಮ ಮದುವೆಯ ಸ್ಥಳಕ್ಕೆ ಹೋಗುವಾಗ ನಗುತ್ತಾ ಕ್ಯಾಮೆರಾಗಳತ್ತ ಕೈ ಬೀಸಿದ್ದಾರೆ.ಇದು ನಮ್ಮ ಜೀವನದ ಅತ್ಯುತ್ತಮ ದಿನ ಎಂದು ವಿವರಿಸುತ್ತಾ, ಚುಯಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್, ಹಂಚಿಕೊಂಡಿದ್ದಾನೆ.
https://www.instagram.com/reel/DMFO4NPz1kR/?igsh=MW96M3oyM2xjMnNwYQ==