newsics.com
ಗುಜರಾತ್: ಕಾರಿನೊಳಗೆ ಸಿಲುಕಿ ಇಬ್ಬರು ಮಕ್ಕಳು ಉಸಿರುಗಟ್ಟಿ ಮೃತಪಟ್ಟ ಘಟನೆ ಭಾವನಗರ ಜಿಲ್ಲೆಯ ತಲಾಜಾ ತಾಲೂಕಿನ ಪಾವ್ತಿ ಎಂಬ ಗ್ರಾಮದಲ್ಲಿ ನಡೆದಿದೆ. ತನ್ವಿ (5.5 ವರ್ಷ) ಮತ್ತು ಹಿತ್ (4) ಮೃತಪಟ್ಟ ಮಕ್ಕಳು ಎಂದು ತಿಳಿದು ಬಂದಿದೆ.
ಮನೆಯ ಹೊರಗೆ ಆಟವಾಡುತ್ತಿದ್ದ ಮಕ್ಕಳು ಆಟ ಆಡುತ್ತಾ ಅಂಗಳದಲ್ಲಿ ನಿಲ್ಲಿಸಿದ್ದ ಲಾಕ್ ಮಾಡದೆ ಇದ್ದ ಕಾರಿನೊಳಗೆ ಪ್ರವೇಶಿಸಿದ್ದಾರೆ. ಕಾರಿನ ಬಾಗಿಲುಗಳು ಸ್ವಯಂಚಾಲಿತವಾಗಿ ಲಾಕ್ ಆಗಿದ್ದು ಅವರು ಹೊರಬರಲು ಸಾಧ್ಯವಾಗಿಲ್ಲ. ಒಳಗೆ ಹೋದ ನಂತರ ಕಾರಿನ ಆಟೋ-ಲಾಕ್ ವ್ಯವಸ್ಥೆಯಿಂದ ಸಿಕ್ಕಿಹಾಕಿಕೊಂಡಿರಬಹುದು ಎಂದು ಹೇಳಲಾಗಿದೆ. ಸಂಜೆ ಮಕ್ಕಳು ಕಾಣದಿದ್ದಾಗ ಹುಡುಕಾಟ ನಡೆಸಿದಾಗ ಕಾರಿನೊಳಗೆ ಪತ್ತೆಯಾಗಿವೆ. .
ತಕ್ಷಣ ಕಾರಿನ ಕಿಟಕಿಗಳನ್ನು ಒಡೆದು ಮಕ್ಕಳನ್ನು ಹೊರತಂದ ಪೋಷಕರು, ತಲಾಜಾ ತಾಲೂಕಿನ ರೆಫರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಕ್ಕಳ ತಪಾಸಣೆ ನಡೆಸಿದ ವೈದ್ಯರು ಬಳಿಕ ಮೃತಪಟ್ಟಿರುವುದಾಗಿ ಖಚಿತಪಡಿಸಿದರು.