newsics.com
ಭಾರತ ಮತ್ತು ಇಂಗ್ಲೆಂಡ್ ನಡುವೆ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೂರನೇ ಟೆಸ್ಟ್ ಪಂದ್ಯ ಉಭಯ ತಂಡಗಳ ಆಟಗಾರರ ಪ್ರದರ್ಶನದಿಂದ ಚರ್ಚೆಯಾಗಿದ್ದಕ್ಕಿಂತ ಹೆಚ್ಚಾಗಿ ಎರಡು ತಂಡಗಳ ಆಟಗಾರರು ಕಾಲ್ಕೆರದು ಜಗಳ ಮಾಡಿಕೊಂಡಿದ್ದಕ್ಕೆ ಸುದ್ದಿಯಲ್ಲಿದೆ.
ಟೆಸ್ಟ್ ಆರಂಭವಾದ ಮೊದಲ ದಿನದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಎರಡು ತಂಡಗಳ ಆಟಗಾರರ ನಡುವೆ ವಾಗ್ಯುದ್ಧ, ದೃಷ್ಟಿ ಯುದ್ಧಗಳು ನಡೆದಿದ್ದು, ಇದೀಗ ರವಿಂದ್ರ ಜಡೇಜಾ ಹಾಗೂ ಇಂಗ್ಲೆಂಡ್ ವೇಗಿ ಕಾರ್ಸೆ ನಡುವೆ ಕಿರಿಕ್ ನಡೆದಿದೆ.
ಭಾರತ ಬ್ಯಾಟಿಂಗ್‌ನ 35 ನೇ ಓವರ್‌ನ ಕೊನೆಯ ಎಸೆತದಲ್ಲಿ ಸಂಭವಿಸಿತು. ರವೀಂದ್ರ ಜಡೇಜಾ ವೇಗವಾಗಿ ಎರಡು ರನ್ ಗಳಿಸಲು ಓಡುತ್ತಿದ್ದಾಗ ಬ್ರೈಡನ್ ಕಾರ್ಸೆಗೆ ಡಿಕ್ಕಿ ಹೊಡೆಯುತ್ತಾರೆ. ಕಾರ್ಸೆ ಹಾಗೂ ಜಡೇಜಾ ಇಬ್ಬರೂ ಕೂಡ ಚೆಂಡಿನ್ನೇ ನೋಡುತ್ತಿದ್ದರಿಂದ ಈ ಘಟನೆ ಸಂಭವಿಸಿತು. ಜಡೇಜಾ ಮೊದಲ ರನ್ ಗಳಿಸುವ ವೇಳೆ ಕಾರ್ಸೆಗೆ ಡಿಕ್ಕಿ ಹೊಡೆದರು.ಈ ಡಿಕ್ಕಿಯ ನಂತರ, ಇಬ್ಬರು ಆಟಗಾರರ ನಡುವೆ ವಾಗ್ವಾದ ಪ್ರಾರಂಭವಾಯಿತು ಮತ್ತು ವಾತಾವರಣವು ಸ್ವಲ್ಪ ಸಮಯದೊಳಗೆ ಬಿಸಿಯಾಯಿತು. ಇಬ್ಬರ ನಡುವಿನ ವಾಗ್ವಾದವು ಎಷ್ಟು ಹೆಚ್ಚಾಯಿತೆಂದರೆ ಉಳಿದ ಆಟಗಾರರು ಸಹ ಮಧ್ಯಪ್ರವೇಶಿಸಿದರು.