newsics.com
ಇದು ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಆಗಿದೆ. ಆದ್ರೆ ಇದಕ್ಕೆ ಕೆಲವು ಷರತ್ತು ಕೂಡ ಇದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ಅವ್ರ ಇತ್ತೀಚಿನ ವರದಿಯ ಪ್ರಕಾರ, ಜಾಗತಿಕ ಭೌಗೋಳಿಕ ರಾಜಕೀಯ ಮತ್ತು ವ್ಯಾಪಾರದ ಅಪಾಯಗಳು ಕಡಿಮೆಯಾಗಿರುವ ಹಿನ್ನೆಲೆ ಚಿನ್ನದ ಬೆಲೆ ಕೂಡ ಇಳಿಕೆಯತ್ತ ಸಾಗಿದೆ.
ಚಿನ್ನದ ಬೆಲೆಗಳು ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಯುಎಸ್ ಡಾಲರ್ ಮತ್ತು ಖಜಾನೆ ಇಳುವರಿ ಹೆಚ್ಚಾದ್ರೂ, ಅವುಗಳ ಪರಿಣಾಮವು ಬೆಲೆಗಳನ್ನ ಕಡಿಮೆ ಮಾಡಬಹುದು ಎಂದಿದೆ. ಕೇಂದ್ರೀಯ ಬ್ಯಾಂಕ್ ಚಿನ್ನದ ಖರೀದಿ ಮತ್ತು ಚಿಲ್ಲರೆ ಹೂಡಿಕೆ ಬೇಡಿಕೆ ಕಡಿಮೆಯಾಗುವುದ್ರಿಂದ ಮಧ್ಯಮ ಅವಧಿಯಲ್ಲಿ ಚಿನ್ನದ ಬೆಲೆಗಳು ಕಡಿಮೆಯಾಗಬಹುದು ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತಿಳಿಸಿದೆ.
ಆದ್ರೆ, ಈಗ ಎಲ್ಲರ ಗಮನ ಸೆಳೆದಿರುವುದು ಚಿನ್ನದ ಇತ್ತೀಚಿನ ಬೆಲೆ ಏರಿಕೆ. ನವೆಂಬರ್ 3, 2022 ರಂದು ಕೆಳಮಟ್ಟಕ್ಕೆ ಇಳಿದ ನಂತರ, ಚಿನ್ನದ ಬೆಲೆ $1,429/ ಔನ್ಸ್ ನಿಂದ $3,287/ಔನ್ಸ್ ಗೆ ದ್ವಿಗುಣಗೊಂಡಿದೆ. ಇದು 30% ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರಕ್ಕೆ ಸಮನಾಗಿರುತ್ತದೆ.
ಚಿನ್ನದ ಬೆಲೆಗಳು ಹೊಸ ಗರಿಷ್ಠ ಮಟ್ಟವನ್ನು ತಲುಪುತ್ತಿರುವುದರಿಂದ, ಹೂಡಿಕೆದಾರರು ಸಂಭಾವ್ಯ ಅಪಾಯಗಳ ಬಗ್ಗೆ ಎಚ್ಚರದಿಂದಿದ್ದಾರೆ. ಆದ್ದರಿಂದ ವಿಶ್ವ ಚಿನ್ನ ಮಂಡಳಿಯು ಚಿನ್ನದ ಹಿಂದಿನ ಹಿಂಜರಿತಗಳನ್ನು ಪರಿಶೀಲಿಸಿದೆ ಮತ್ತು ಐತಿಹಾಸಿಕ ಮಾದರಿಗಳ ಆಧಾರದ ಮೇಲೆ ಮಧ್ಯಮದಿಂದ ದೀರ್ಘಾವಧಿಯ ಕುಸಿತದ ಕಾರಣಗಳನ್ನು ವಿಶ್ಲೇಷಿಸಿದೆ.
ಬೇಡಿಕೆಯ ಬದಲಾವಣೆಯಿಂದ ದೀರ್ಘಾವಧಿಯ ಕುಸಿತ ಉಂಟಾಗಬಹುದು, ಸಾಂಸ್ಥಿಕ ಮತ್ತು ಚಿಲ್ಲರೆ ಹೂಡಿಕೆದಾರರಿಂದ ಚಿನ್ನದ ಹೂಡಿಕೆ ಬೇಡಿಕೆ ಗಮನಾರ್ಹವಾಗಿ ಕುಸಿಯುತ್ತದೆ. ಪೂರೈಕೆ ವೇಗವಾಗಿ ಬೆಳೆಯುತ್ತದೆ ಎಂದು ವಿಶ್ವ ಚಿನ್ನದ ಮಂಡಳಿ ತನ್ನ ವರದಿಯಲ್ಲಿ ತಿಳಿಸಿದೆ
ಮತ್ತೊಂದೆಡೆ, ಇತ್ತೀಚಿನ ವರದಿಯು ಬೆಲೆಗಳ ಏರಿಕೆಯನ್ನ ತೋರಿಸಿದೆ. ಏಪ್ರಿಲ್ ನಂತರ, ಡಿಸೆಂಬರ್ ನಲ್ಲಿ ಚಿನ್ನದ ಬೆಲೆ ಮತ್ತೆ 1 ಲಕ್ಷ ರೂಪಾಯಿಗಳ ಮಟ್ಟವನ್ನು ತಲುಪುತ್ತದೆ ಎಂದು ಆ ವರದಿ ಹೇಳುತ್ತದೆ. ಈ ವರ್ಷ, ಯುಎಸ್ ಸುಂಕಗಳು, ಆಪರೇಷನ್ ಸಿಂಧೂರ್ ಮತ್ತು ಇರಾನ್-ಇಸ್ರೇಲ್ ಯುದ್ಧದ ನಡುವೆಯೂ ಚಿನ್ನವು ಉತ್ತಮ ಲಾಭವನ್ನು ನೀಡಿದೆ.
ಐಸಿಐಸಿಐ ಬ್ಯಾಂಕ್ ಗ್ಲೋಬಲ್ ಮಾರ್ಕೆಟ್ಸ್ ವರದಿಯ ಪ್ರಕಾರ, ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯ ಈ ಪ್ರವೃತ್ತಿ 2025 ರ ದ್ವಿತೀಯಾರ್ಧದಲ್ಲಿ ಮುಂದುವರಿಯಬಹುದು. ಅಂತಹ ಪರಿಸ್ಥಿತಿಯಲ್ಲಿ, ವರ್ಷದ ಅಂತ್ಯದ ವೇಳೆಗೆ, ಚಿನ್ನದ ಬೆಲೆ ಮತ್ತೆ 10 ಗ್ರಾಂಗೆ 1,00,000 ರೂಪಾಯಿಗಳ ಮಟ್ಟವನ್ನು ತಲುಪಬಹುದು ಎನ್ನಲಾಗ್ತಿದೆ. ಮಧ್ಯಮದಲ್ಲಿ ಕೊಂಚ ಇಳಿಕೆ ಕಾಣುವ ಸಾಧ್ಯತೆ ಇದೆ.
ಕೆಲವೇ ದಿನಗಳಲ್ಲಿ ಅಥವಾ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು 55,000 ಸಾವಿರ ರೂಪಾಯಿಯಿಂದ 70,000 ಸಾವಿರ ರೂಪಾಯಿ ಒಳಗೆ ಕುಸಿತ ಕಾಣಲಿದೆ ಎಂದು ಹೇಳಲಾಗಿದೆ. ಇದಕ್ಕೆ ಮುಖ್ಯ ಕಾರಣ ಆರ್‌ಬಿಐನ ನಿರ್ಧಾರ ಎಂದು ಹೇಳಲಾಗ್ತಿದೆ.
Gold Rate Today Bangalore: ಚಿನ್ನದ ಬೆಲೆ ಏರಿಕೆ; ಇಂದು ಗೋಲ್ಡ್ ರೇಟ್ ಎಷ್ಟಿದೆ?