newsics.com
ಇಂಗ್ಲೆಂಡ್ ವಿರುದ್ಧ ಭಾರತದ ಐತಿಹಾಸಿಕ ಗೆಲುವಿನೊಂದಿಗೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ 2025-27 ಪಾಯಿಂಟ್ಸ್ ಟೇಬಲ್‌ನಲ್ಲಿ ಪ್ರಮುಖ ಬದಲಾವಣೆಗಳಾಗಿವೆ.
2ನೇ ಟೆಸ್ಟ್ ಪಂದ್ಯದಲ್ಲಿ ಭಾರತ 336 ರನ್ಗಳಿಂದ ಗೆಲುವು ಸಾಧಿಸಿತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 587 ರನ್‌ಗಳಿಗೆ ಆಲೌಟ್ ಆಗಿತ್ತು. ಶುಭ್ಮನ್ ಗಿಲ್ (269) ದ್ವಿಶತಕ ಸಿಡಿಸಿದ್ದಾರೆ.ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 587 ರನ್‌ಗಳಿಗೆ ಆಲೌಟ್ ಆಗಿತ್ತು. ಶುಭ್ಮನ್ ಗಿಲ್ (269) ದ್ವಿಶತಕ ಸಿಡಿಸಿದರೆ,ಯಶಸ್ವಿ ಜೈಸ್ವಾಲ್ (87) ಮತ್ತು ರವೀಂದ್ರ ಜಡೇಜಾ (89) ಉತ್ತಮ ಪ್ರದರ್ಶನ ನೀಡಿದರು.
ಈ ಮೂಲಕ ಭಾರತ ತಂಡಕ್ಕೆ ನಾಯಕನಾದ ಶುಭ್ಮನ್ ಗಿಲ್ ಅವರು ಚೊಚ್ಚಲ ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಆದರೆ ಈ ಟೆಸ್ಟ್ ಪಂದ್ಯದ ನಡುವೆ ಶುಭ್ಮನ್ ಗಿಲ್ ದೊಡ್ಡ ತಪ್ಪು ಎಸಗಿರುವುದು ಇದೀಗ ಮೂರನೇ ಕಣ್ಣಿನಿಂದ ಗೊತ್ತಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ಟೀಮ್ ಇಂಡಿಯಾ 607 ರನ್ಗಳ ಬೃಹತ್ ಮೊತ್ತ ಕಲೆ ಹಾಕಿದ್ದರಿಂದ ಬಾಲ್ಕನಿಯಲ್ಲಿದ್ದ ಶುಭ್ಮನ್ ಗಿಲ್ ಅವರು ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಇಬ್ಬರು ಬ್ಯಾಟ್ಸ್ಮನ್ಗಳನ್ನ ವಾಪಸ್ ಕರೆದಿದ್ದಾರೆ.
ಬಾಲ್ಕನಿಯಿಂದ ಕರೆಯುವಾಗ ಶುಭ್ಮನ್ ಗಿಲ್ ಅವರು ನೈಕ್ ಕಂಪನಿಯ ಟೀ-ಶರ್ಟ್ ಧರಿಸಿದ್ದರು. ಇದರಿಂದ ಬಿಸಿಸಿಐ ಒಪ್ಪಂದವನ್ನು ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ. ಬಿಸಿಸಿಐಗೆ ಕೋಟಿ ಕೋಟಿ ಹಣ ಕೊಟ್ಟು ಅಡೀಡಸ್ ಕಂಪನಿ ಒಪ್ಪಂದ ಮಾಡಿಕೊಂಡರೇ, ಗಿಲ್ ಅವರು ನೈಕ್ ಕಂಪನಿ ಟೀ-ಶರ್ಟ್ ಧರಿಸಿ ಕ್ಯಾಮೆರಾ ಕಣ್ಣಿಗೆ ಬಿದ್ದಿರುವುದು ಒಪ್ಪಂದ ಉಲ್ಲಂಘನೆ ಮಾಡಲಾಗಿದೆ. ಇದರಿಂದ ಗಿಲ್ಗೆ ಸಂಕಷ್ಟ ಎದುರಾಗಲಿದೆ.
ಬಿಸಿಸಿಐ ಜೊತೆ ನೈಕ್ ಕಂಪನಿ ಈ ಮೊದಲು ಅಂದರೆ 2006 ರಿಂದ 2020ರವರೆಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಇದಾದ ಮೇಲೆ 2023ರ ಬಳಿಕ ಬಿಸಿಸಿಐ ಜೊತೆ ಅಡೀಡಸ್ ಒಪ್ಪಂದ ಮಾಡಿಕೊಂಡಿದ್ದು ಆಟಗಾರರು ಕೂಡ ಅಡೀಡಸ್ ಉಡುಪು ಧರಿಸಿಯೇ ಇರಬೇಕು. ಆದರೆ ಬೇರೆ ಕಂಪನಿಯ ಟೀಶರ್ಟ್ ಧರಿಸಿ ಕ್ಯಾಪ್ಟನ್ ಗಿಲ್ ತಪ್ಪು ಮಾಡಿದ್ದಾರೆ ಎನ್ನಲಾಗುತ್ತಿದೆ.