newsics.com
ಟೆಕ್ಸಾಸ್: ಅಮೆರಿಕಾದ ಟೆಕ್ಸಾಸ್ ನಗರದಲ್ಲಿ ದಿಢೀರ್ ಪ್ರವಾಹದಿಂದಾಗಿ ನಗರಗಳೇ ಮುಳುಗಿ ಹೋಗಿವೆ. ವರುಣಾರ್ಭಟಕ್ಕೆ ಶರವೇಗದಲ್ಲಿ ಅಪ್ಪಳಿಸಿದ ಭೀಕರ ಪ್ರವಾಹಕ್ಕೆ ಮನೆಗಳು, ಕ್ಯಾಂಪ್ ಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಅಪಾರ ಪ್ರಮಾಣದ ಸಾವು, ನೋವು, ಹಾನಿಯುಂಟಾಗಿದೆ.
ಟೆಕ್ಸಾಸ್ ನಲ್ಲಿ ಸಂಭವಿಸಿದ ಪ್ರವಾಹದಲ್ಲಿ 15 ಮಕ್ಕಳು ಸೇರಿದಂತೆ 50 ಜನರು ಸಾವನ್ನಪ್ಪಿದ್ದಾರೆ. ಹಲವರು ಕಣ್ಮರೆಯಾಗಿದ್ದಾರೆ. L.
ಅಮೆರಿಕಾದ ಕೆರ್ ಕೌಂಟಿಯಲ್ಲಿ 43, ಟ್ರವಿಸ್ ಕೌಂಟಿಯಲ್ಲಿ 4, ಬರ್ನೆಟ್ ಕೌಂಟಿಯಲ್ಲಿ ಇಬ್ಬರು, ಗ್ರೋನ್ ಕೌಂಟಿಯಲ್ಲಿ ಓರ್ವರು ಮೃತಪಟ್ಟಿದ್ದಾರೆ. ನದಿ ತೀರದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಪ್ರವಾಹದ ಅಬ್ಬರಕ್ಕೆ ಕೊಚ್ಚಿ ಹೋಗಿದ್ದಾರೆ. 27 ಮಕ್ಕಳು ನಾಪತ್ತೆಯಾಗಿದ್ದು, ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಕ್ಯಾಂಪ್ ನಲ್ಲಿ ಒಟ್ಟು 750 ಬಾಲಕಿಯರು ಭಾಗವಹಿಸಿದ್ದರು.