newsics.com
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಬುಧವಾರ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿಯೊಂದು ತಿಳಿಸಿದೆ.
ನ್ಯಾಯಮೂರ್ತಿ ಎಂಡಿ ಗೋಲಂ ಮೊರ್ಟುಜಾ ಮೊಜುಂದರ್ ನೇತೃತ್ವದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ -1 ರ ಮೂವರು ಸದಸ್ಯರ ಪೀಠವು ಈ ತೀರ್ಪು ನೀಡಿದೆ.
ಶೇಖ್ ಹಸೀನಾ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವು ಕಳೆದ ವರ್ಷ 2024 ರ ಅಕ್ಟೋಬರ್‌ನಲ್ಲಿ ಶಕೀಲ್ ಅಕಂದ್ ಬುಲ್ಬುಲ್ ಅವರೊಂದಿಗೆ ಸಂಭಾಷಣೆ ನಡೆಸಿದ್ದರು ಎನ್ನಲಾದ ಸೋರಿಕೆಯಾದ ಫೋನ್ ಕರೆಗೆ ಸಂಬಂಧಿಸಿದ್ದಾಗಿದೆ. ಸೋರಿಕೆಯಾದ ಆಡಿಯೋದಲ್ಲಿ ಹಸೀನಾ ಎಂದು ಹೆಸರಿಸಲಾದ ಮಹಿಳೆಯೊಬ್ಬರು ಮಾತನಾಡಿರುವ ಧ್ವನಿಯಾಗಿದ್ದು ಅದರಲ್ಲಿ “ನನ್ನ ವಿರುದ್ಧ 227 ಪ್ರಕರಣಗಳು ದಾಖಲಾಗಿವೆ, ಆದ್ದರಿಂದ ನಾನು ಆ 227 ಜನರನ್ನು ಕೊಲ್ಲಲು ಪರವಾನಗಿ ಪಡೆದಿದ್ದೇನೆ” ಎಂದು ಹೇಳುತ್ತಿರುವುದು ದಾಖಲಾಗಿದೆ.
ಅದರಂತೆ ಹಿಂಸಾತ್ಮಕ ಕ್ರಮ ಕೈಗೊಳ್ಳಲು ಆದೇಶಿಸಿದ ಆರೋಪದ ಮೇಲೆ ಕಳೆದ ತಿಂಗಳು ಜೂನ್ 1 ರಂದು ಹಸೀನಾ ವಿರುದ್ಧ ಅಧಿಕೃತವಾಗಿ ಅಪರಾಧಗಳ ಆರೋಪ ಹೊರಿಸಲಾಯಿತು. ಇದಾದ ತಿಂಗಳುಗಳ ತನಿಖೆಯ ನಂತರ ಶನಿವಾರ (ಜೂ.28) ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT) ಔಪಚಾರಿಕ ಆರೋಪಗಳನ್ನು ಸಲ್ಲಿಸಿತು. ಇದಾದ ಬಳಿಕ ಇಂದು ಬುಧವಾರ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ -1 ರ ತ್ರಿಸದಸ್ಯ ಪೀಠ ತೀರ್ಪು ನೀಡಿ ಆದೇಶಿಸಿದೆ