newsics.com
ತೀರ್ಥಹಳ್ಳಿ: ಮಕ್ಕಳು ಮೊಬೈಲ್ ದಾಸರಾಗಿರುವ ಬೆನ್ನಲ್ಲೇ ಪಟ್ಟಣದ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳು “ಮೊಬೈಲ್ ಬಳಸುವುದಿಲ್ಲ, ಮೊಬೈಲ್ ನೋಡುವುದಿಲ್ಲ’ ಎಂದು ಪ್ರಮಾಣ ಮಾಡಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆ ಸರ್ಕಾರಿ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಸುಮಾರು 270 ವಿದ್ಯಾರ್ಥಿಗಳಿದ್ದಾರೆ. ನಿನ್ನೆ ಬೆಳಗ್ಗೆ ಪ್ರಾರ್ಥನೆ ಮಾಡುವ ವೇಳೆ ಮುಖ್ಯ ಶಿಕ್ಷಕಿ ಸಾವಿತ್ರಿ, ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಮೊಬೈಲ್‌ನಿಂದ ಆಗುವ ಅನಾಹುತಗಳ ಬಗ್ಗೆ ತಿಳಿಸುತ್ತಿದ್ದಂತೆ ತಕ್ಷಣವೇ ಮಕ್ಕಳು “ಇನ್ನು ಮುಂದೆ ಮೊಬೈಲ್ ಬಳಸುವುದಿಲ್ಲ-ನೋಡುವುದಿಲ್ಲ’ ಎಂದು ಮಕ್ಕಳು ಪ್ರಮಾಣ ಮಾಡಿದ್ದಾರೆ.
ಇತ್ತೀಚಿಗೆ ಮಕ್ಕಳು ಅತೀ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದು ಅದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳು ಮೊಬೈಲ್ ಬಳಸುವುದು ಇಲ್ಲ ನೋಡುವುದು ಇಲ್ಲ ಎಂಬ ಪ್ರಮಾಣ ಮಾಡಿರುವ ತೀರ್ಮಾನಕ್ಕೆ ಪೋಷಕರಿಗೆ ಖುಷಿ ತರಿಸಿದ್ದು ಅನೇಕ ಪೋಷಕರು ಶಾಲೆಯ ಈ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಶಾಲೆಯನ್ನು ಶಾಸಕ ಆರಗ ಜ್ಞಾನೇಂದ್ರ ದತ್ತು ತೆಗೆದುಕೊಂಡಿದ್ದಾರೆ.