Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಆನೆಯ ಡೆಡ್ಲಿ ಅಟ್ಯಾಕ್‌ನಿಂದ ಬೇಲೂರಿನ ವ್ಯಕ್ತಿ ಪಾರು: ವಿಡಿಯೊ ಭಾರೀ ವೈರಲ್
ಕರ್ನಾಟಕವೈರಲ್

ಆನೆಯ ಡೆಡ್ಲಿ ಅಟ್ಯಾಕ್‌ನಿಂದ ಬೇಲೂರಿನ ವ್ಯಕ್ತಿ ಪಾರು: ವಿಡಿಯೊ ಭಾರೀ ವೈರಲ್

Share
2 Min Read
SHARE

newsics.com

ಹಾಸನ: ಕಾಫಿ ತೋಟಕ್ಕೆ ಹೋದ ಕಾರ್ಮಿಕನ ಮೇಲೆ ಒಂಟಿ ಸಲಗ ಡೆಡ್ಲಿ ಅಟ್ಯಾಕ್ ಮಾಡಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ.

ಆನೆ ಘೀಳಿಡುತ್ತ ಕಾರ್ಮಿಕನನ್ನು ತುಳಿದು ಸಾಯಿಸಲು ಅಟ್ಟಾಡಿಸಿಕೊಂಡು ಬಂದಿದ್ದು, ಆನೆಯಿಂದ ಹೇಗೋ ತಪ್ಪಿಸಿಕೊಂದು ಓಡಿ ಬಂದ ವ್ಯಕ್ತಿ ಮನೆಯ ಬಳಿಯಿದ್ದ ಮೆಟ್ಟಿಲನ್ನೇರಿ ಮನೆಯ ಮೇಲೆ ಹೋಗಿ ಜೀವ ಉಳಿಸಿಕೊಂಡಿದ್ದಾನೆ.

ಆದರೆ, ಕಾರ್ಮಿಕ ಪುನಃ ಮೆಟ್ಟಿಲಿನಿಂದ ಇಳಿದು ಬರಬಹುದು ಎಂದು ಮನೆಯ ಮುಂದಿನ ಕಾಫಿ ತೋಟದಲ್ಲಿ ಸುಮಾರು ಹೊತ್ತು ಅಡಗಿ ಕುಳಿತು ಬೇಟೆಗಾಗು ಹುಲಿಯಂತೆ ಹೊಂಚು ಹಾಕಿತ್ತು.

ಆನೆಯನ್ನು ಮನೆ ಮೇಲಿನಿಂದ ನೋಡುತ್ತಿದ್ದ ಕಾರ್ಮಿಕ ಆನೆ ಸಂಪೂರ್ಣವಾಗಿ ಹೋಗುವುದನ್ನು ಖಚಿತಪಡಿಸಿಕೊಂಡು ನಂತರ ಕೆಳಗೆ ಬಂದಿದ್ದಾನೆ.

ರಾಮನಗರ ಹಾಗೂ ಹಾಸನದಲ್ಲಿ ಆನೆಗಳ ದಾಳಿಗೆ ಸಾವನ್ನಪ್ಪುವವರ ಪ್ರಕರಣ ಹೆಚ್ಚಾಗುತ್ತಿವೆ. ಬೆಳಗ್ಗೆ ಹಾಸನದ ಕಾಫಿ ತೋಟದಲ್ಲಿ ಒಂಟಿ ಸಲಗವೊಂದು ಹುಲಿಯಂತೆ ಅಡಗಿ ಕುಳಿತು ಕಾಫಿ ತೋಟದ ಕಾರ್ಮಿಕ ಬರುತ್ತಿದ್ದಂತೆಯೇ ಡೆಡ್ಲಿ ಅಟ್ಯಾಕ್ ಮಾಡಿದೆ. ಆದರೆ, ಕೂದಲೆಳೆ ಅಂತರದಲ್ಲಿ ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಡೆಗರ್ಜೆ ಗ್ರಾಮದಲ್ಲಿ ನಡೆದಿದೆ.

ಬೆಳಗ್ಗೆ ತಮ್ಮ ಕಾಫಿ ತೋಟದಲ್ಲಿರುವ ಮನೆಯಿಂದ ಕಾಫಿ ತೋಟಕ್ಕೆ ಹೊರಟ ಮಹೇಶ್‌ಗೌಡ, ಕಾಫಿ ತೋಟದೊಳಗೆ ನಡೆದುಕೊಂಡು ಹೋಗುವಾಗ ಒಂಟಿ ಸಲಗ ಈತನ‌ ಮೇಲೆ ಅಟ್ಯಾಕ್ ಮಾಡಿದೆ. ಮಹೇಶ್‌ಗೌಡ ಮನೆಯತ್ತ ಓಡಿ ಬಂದು ಕಬ್ಬಿಣದ ಮೆಟ್ಟಿಲುಗಳನ್ನು ಹತ್ತಿ ಮನೆಯ ಮೇಲೆ ಹೋಗಿ ಬಚಾವಾಗಿದ್ದಾನೆ.

ಆದರೆ, ಮನೆಯ ಮೆಟ್ಟಿಲು ಹತ್ತುವಾಗ ಮಳೆಯಾಗಿದ್ದರಿಂದ ಕಾಲು ಜಾರಿ ಬಿದ್ದಿದ್ದಾನೆ. ಆದರೂ ಸಾವರಿಸಿಕೊಂಡು ಮೇಲೇರಿದ್ದಾನೆ. ಮೆಟ್ಟಿಲನ್ನು ಹತ್ತುವುದಕ್ಕೂ ಆನೆ ಪ್ರಯತ್ನಿಸಿದೆ. ಸಾಧ್ಯವಾಗದ್ದರಿಂದ ಕೆಲಹೊತ್ತು ಕಾದು ನಿಂತಿದೆ. ಮನೆಯ ಮೇಲೆ ಹೋದ ವ್ಯಕ್ತಿ ಮರಳಿ ಬಾರದ ಹಿನ್ನೆಲೆಯಲ್ಲಿ ಆನೆ ಮನೆಯ ಮುಂದೆ ಹೋಗಿ ಜೋರಾಗಿ ಘೀಳಿಡುತ್ತಾ ಮಣ್ಣು ಕೆದರುತ್ತಾ ಆಕ್ರೋಶ ಹೊರಹಾಕಿದೆ.

ಇಷ್ಟಕ್ಕೆ ಸುಮ್ಮನಾಗದ ಆನೆ, ಮನೆ ಮಹಡಿಯೇರಿದ ವ್ಯಕ್ತಿ ಇರುವ ಸ್ಥಳದಿಂದ ತಾನು ಕಾಣದ ರೀತಿಯಲ್ಲಿ ಕಾಫಿಗಿಡಗಳ ಬಳಿ ಅವಿತು ನಿಂತಿದೆ. ಆದರೆ, ಆನೆ ಎಲ್ಲಿದೆ ಎಂಬುದನ್ನು ಮನೆ ಮೇಲಿಂದ ವೀಕ್ಷಣೆ ಮಾಡುತ್ತಿದ್ದ ಮಹೇಶ್‌ಗೌಡ, ಸುಮಾರು 30 ನಿಮಿಷ ಕಾಲ ಮನೆ ಮೇಲೆಯೇ ನಿಂತು ಆನೆ ದೂರ ಹೋಗುವವರೆಗೂ ಕಾದಿದ್ದಾನೆ. ಆನೆ ಹೋಗಿರುವುದನ್ನು ಖಚಿತಪಡಿಸಿಕೊಂಡು ಕೆಳಗೆ ಬಂದಿದ್ದಾನೆ. ಕೊನೆಗೂ ಆನೆಯಿಂದ ಪ್ರಾಣ ಉಳಿಸಿಕೊಂಡ ಮಹೇಶ್‌ಗೌಡ ನಿಟ್ಟುಸಿರು ಬಿಟ್ಟು ಊರಿನತ್ತ ಹೋಗಿದ್ದಾನೆ.

ಅರಸು ಟ್ರಕ್ ಟರ್ಮಿನಲ್ ನಿಗಮದಲ್ಲಿ ಹಣ ದುರ್ಬಳಕೆ ಆರೋಪ: ಬಿಜೆಪಿ ಮಾಜಿ ಎಂಎಲ್‌ಸಿ ವೀರಯ್ಯ ಬಂಧನ

ಸಿಎಂ ಸಿದ್ದರಾಮಯ್ಯ ಸ್ವೀಕರಿಸಿದ್ದ ಸಾರ್ವಜನಿಕರ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆ!

ಆರು ತಿಂಗಳ ಹಿಂದೆಯೇ ಮೃತಪಟ್ಟ ನಗರಾಭಿವೃದ್ಧಿ ಇಲಾಖೆ ಇಂಜಿನಿಯರ್ ಈಗ ಸೇಡಂನಿಂದ ಮಡಿಕೇರಿಗೆ ವರ್ಗಾವಣೆ!

TAGGED:Belur Man Escapes Deadly Elephant Attack: Video Goes Viral
Share This Article
Facebook Twitter Copy Link Print
Previous Article ಅರಸು ಟ್ರಕ್ ಟರ್ಮಿನಲ್ ನಿಗಮದಲ್ಲಿ ಹಣ ದುರ್ಬಳಕೆ ಆರೋಪ: ಬಿಜೆಪಿ ಮಾಜಿ ಎಂಎಲ್‌ಸಿ ವೀರಯ್ಯ ಬಂಧನ
Next Article ಗುಜರಾತಿನ ಪಾಲಿತಾನಾ ಜಗತ್ತಿನ ಮೊದಲ ಮಾಂಸಾಹಾರ ನಿಷೇಧ ನಗರ!

Popular Posts

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

You Might Also Like

ಕರ್ನಾಟಕಪ್ರಮುಖ

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read
ಪ್ರಮುಖಕರ್ನಾಟಕ

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read
ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read
ಕರ್ನಾಟಕಪ್ರಮುಖ

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?