newsics.com
ಚಂಡೀಗಢ:ಪ್ರೀತಿ ಕುರುಡು ಎಂಬ ಮಾತಿದೆ. ಅದಕ್ಕೆ ಪುಷ್ಟಿ ನೀಡುವಂತೆ 21 ವರ್ಷದ ಯುವಕನೊಬ್ಬ 65 ವರ್ಷದ ಅಜ್ಜಿ ಸುಲ್ತಾನಾ ಕಟೂನ್ ಜೊತೆ ಮದುವೆಯಾದ ಘಟನೆ ಹರಿಯಾಣದಲ್ಲಿ ನಡೆದಿದೆ.
21 ವರ್ಷದ ಮೊಹಮ್ಮದ್ ಇರ್ಫಾನ್ ಆತನ ಅಜ್ಜಿ 65 ವರ್ಷದ ಸುಲ್ತಾನಾ ಖತೂನ್ ಅವರನ್ನು ಮದುವೆಯಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಮೊಹಮ್ಮದ್ ಇರ್ಪಾನ್ ತನ್ನ ಸ್ವಂತ ಅಜ್ಜಿಯನ್ನು ಮದುವೆಯಾಗಿದ್ದಾನೆ.
ಪತಿ ಸಾವನ್ನಪ್ಪಿದ ಬಳಿಕ ಜೀವನದಲ್ಲಿ ಸುಲ್ತಾನಾ ಕಟೂನ್ ಒಂಟಿಯಾಗಿದ್ದರು. ಈ ವೇಳೆ ಮೊಹಮ್ಮದ್ ಇರ್ಪಾನ್ ಅಜ್ಜಿ ಸುಲ್ತಾನಾ ಕಟೂನ್ ಜೊತೆ ಇದ್ದು ಅವರನ್ನು ಕೇರ್ ಮಾಡುತ್ತಿದ್ದರು. ಇದೇ ಬಾಂಧವ್ಯ ಕೊನೆಗೆ ಸದೃಢವಾಗಿ ಮದುವೆಯಾಗುವ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇನ್ನೂ, ಈ ಇಬ್ಬರ ಮದುವೆಗೆ ಸಾರ್ವಜನಿಕರ ವಿರೋಧದ ಮಧ್ಯೆಯೂ ಈ ಇಬ್ಬರು ಮದುವೆಯಾಗಿದ್ದಾರೆ.