newsics.com
ಶಿವಮೊಗ್ಗ: ಸಿಗಂದೂರು ಸೇತುವೆಯ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಇದೀಗ ಲೋಡ್ ಗಟ್ಟಲೇ ಟಿಪ್ಪರ್ ಲಾರಿಗಳನ್ನು ಹ್ಯಾಂಗಿಂಗ್ ಸೇತುವೆ ಮೇಲೆ ನಿಲ್ಲಿಸಿ ಲೋಡ್ ಟೆಸ್ಟಿಂಗ್ಮಾಡಲಾಗಿದೆ.
ಕೊಲ್ಲೂರು ಮತ್ತು ಸಿಗಂಧೂರು ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಸುಮಾರು 450 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಸದ್ಯ, ಸಿಗಂದೂರು ಸೇತುವೆ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ಸದ್ಯದಲ್ಲೇ ಪ್ರವಾಸಿಗರಿಗೆ ಈ ಸೇತುವೆ ಮುಕ್ತಾಯವಾಗಲಿದೆ.
ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ದೇಶದ ಎರಡನೇ ಉದ್ದದ ಸೇತುವೆ ಇದಾಗಿದೆ. ಸದ್ಯ, ಸೇತುವೆಯ ಲೋಡ್ ಟೆಸ್ಟಿಂಗ್ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋವನ್ನು ಬಿ.ವೈ ರಾಘವೇಂದ್ರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
https://www.instagram.com/p/DLSnF4IvQv5/?igsh=MTBkMWY3ajljMm1teQ==