newsics.com
ಪ್ಲಾಸ್ಟಿಕ್ ರಾಣಿ ಎಂದೇ ಫೇಮಸ್ ಆಗಿರೋ ನಟಿ ಶೆರ್ಲಿನ್ ಚೋಪ್ರಾ. ದೇಹದ ಬಹುತೇಕ ಭಾಗಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು, ಅದನ್ನು ಪ್ರದರ್ಶಿಸುತ್ತಲೇ ಪಾಪರಾಜಿಗಳ ಕಣ್ಣಿಗೆ ಬೀಳುತ್ತಾರೆ. ಈ ಮೂಲಕ ನಟಿ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ.ಸದಾ ಅರೆಬರೆ ದೇಹದ ಪ್ರದರ್ಶನ ಮಾಡುವುದರ ಜೊತೆಗೆ ಶಾಕಿಂಗ್ ಹೇಳಿಕೆ ಕೊಡುವ ಮೂಲಕವೂ ಈಕೆ ಸುದ್ದಿಯಲ್ಲಿ ಇರುತ್ತಾರೆ.
ಪ್ಲಾಸ್ಟಿಕ್ ಸರ್ಜರಿ ಪ್ರತಿಸಲವೂ ಎಲ್ಲವೂ ಸರಿಯಾಗತ್ತದೆ ಎಂದು ಹೇಳಲು ಆಗುವುದಿಲ್ಲ. ಕೆಲವೊಂದು ಬಾರಿ ಎಡವಟ್ಟು ಗಳು ಆಗುತೆ. ಅದೇ ಸ್ಥಿತಿ ಕೆಲ ದಿನಗಳ ಹಿಂದೆ ಪ್ಲಾಸ್ಟಿಕ್ ರಾಣಿ ಎಂದೇ ಫೇಮಸ್ ಆಗಿರೋ ನಟಿ ಶೆರ್ಲಿನ್ ಚೋಪ್ರಾಗೂ ಆಗಿದೆ. ಈಗ ವೈರಲ್ ಆಗ್ತಿರೋ ಆಕೆಯ ವಿಡಿಯೋದಲ್ಲಿ ನಟಿಯ ತುಟಿ ಎರ್ರಾಬಿರ್ರಿ ಆಗಿದೆ.
ಈ ಸಮಯದಲ್ಲಿ ನಡೆದ ಸಂದರ್ಶನದಲ್ಲಿ ಆಕೆ, ನನ್ನ ದೇಹ, ನಾನು ಎಲ್ಲಿ ಬೇಕಾದ್ರೂ ಸರ್ಜರಿ ಮಾಡಿಸಿಕೊಳ್ತೇನೆ, ನನ್ನ ದುಡ್ಡು, ನಾನು ಸರ್ಜರಿ ಮಾಡಿಸಿಕೊಂಡ್ರೆ ಯಾರಪ್ಪನ ಮನೆ ಗಂಟು ಹೋಗುತ್ತೆ ಎಂದು ಪ್ರಶ್ನಿಸಿದ್ದಾರೆ. ಆದರೆ ಇವರ ತುಟಿ ನೋಡಿದ್ರೆ ಮಾತ್ರ ಎಡವಟ್ಟು ಆಗಿರೋದು ಕಾಣಿಸುತ್ತದೆ. ತುಟಿಯನ್ನು ಸರಿ ಮಾಡಿಸಲು ನಟಿ ಪಡಬಾರದ ಕಷ್ಟವನ್ನೂ ಪಟ್ಟಿದ್ದಾರೆ. ಈ ವಿಡಿಯೋ ಸ್ವಲ್ಪ ಹಳೆಯದ್ದಾಗಿದ್ದು, ತುಟಿ ಸರಿಯಾದ ಬಳಿಕ ಮತ್ತೊಂದು ಸಂದರ್ಶನದಲ್ಲಿ ನಟಿ ತುಟಿಯ ಬಗ್ಗೆಯೂ ಹೇಳಿದ್ದರು. ನಟಿಯ ವಿಡಿಯೋ ವೈರಲ್ ಆದಾಗ ಇದು ಎಐ ಯಿಂದ ಮಾಡಿದ್ದು, ಎಡಿಟೆಡ್ ಎಂದೇ ಅಂದುಕೊಳ್ಳಲಾಗಿತ್ತು. ಅದರಲ್ಲಿ ಶೆರ್ಲಿನ್ ತುಟಿ ಭಯಾನಕ ರೀತಿಯಲ್ಲಿ ಕಾಣಿಸುತ್ತಿತ್ತು. ಇದು ಒರಿಜಿನಲ್ ಅಲ್ಲ ಎಂದು ನಕ್ಕು ಸುಮ್ಮನಾದವರೇ ಬಹುತೇಕ ಮಂದಿ. ಆದರೆ ಇದೀಗ ಅದರ ಗುಟ್ಟನ್ನು ನಟಿ ರಿವೀಲ್ ಮಾಡಿದ್ದಾರೆ. ಅದು ಎಡಿಟೆಡ್ ಅಲ್ಲ, ಬದಲಿಗೆ ತುಟಿಗೆ ಸರ್ಜರಿ ಮಾಡಿಸಿದ್ದು ಮಿಸ್ಟೆಕ್ ಆಗಿ, ತುಟಿ ಊದಿಕೊಂಡಿತ್ತು. ನಾನು ಏಲಿಯನ್ ರೀತಿ ಕಾಣಿಸುತ್ತಿದ್ದೆ. ಕನ್ನಡಿಯಲ್ಲಿ ಮುಖ ನೋಡಿಕೊಂಡಾಗಲೆಲ್ಲಾ ಭಯ ಆಗ್ತಿತ್ತು. ಅದನ್ನು ಸರಿಪಡಿಸಲು ಸಿಕ್ಕಾಪಟ್ಟೆ ಕಷ್ಟ ಪಡಬೇಕಾಯಿತು. ಈ ಕೆಟ್ಟ ತುಟಿಯಿಂದಾಗಿ ಪಡಬಾರದ ಕಷ್ಟ ಪಟ್ಟೆ ಎಂದಿದ್ದರು ನಟಿ.