newsics.com
ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ಟರ್ಮಿನಲ್ ಗೆ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ‘CISF‘ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಅನುಮಾನಾಸ್ಪದವಾಗಿ ಟರ್ಮಿನಲ್ ನುಗ್ಗಲು ಯತ್ನಿಸಿದವನ್ನು ಶ್ರೀನಗರದ ಮೂಲದ ಸದದ್ ಮೊಹಮದ್ ಬಾಬಾ ಎಂದು ತಿಳಿದುಬಂದಿದೆ. ಈತ ಅಲ್ಲಿನ ಸಿಬ್ಬಂದಿಗೆ ದಾಖಲೆ ತೋರಿಸದೇ ಟರ್ಮಿನಲ್ ಗೆ ನುಗ್ಗಲು ಯತ್ನಿಸಿದ್ದಾನೆ. ಕೂಡಲೇ ಮೊಹಮ್ಮದ್ ನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈತ ಜಮ್ಮು-ಕಾಶ್ಮೀರದ ಶ್ರೀನಗರ ಮೂಲದವನು ಎಂದು ಹೇಳಲಾಗಿದೆ.ಈತ ಏಕಾಏಕಿ ನುಗ್ಗಲು ಕಾರಣ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.