newsics.com
ಧಾರವಾಡ: ಆಟವಾಡುತ್ತಿದ್ದ ಮಕ್ಕಳು ಕಾಲು ಜಾರಿ ಕೆರೆಗೆ ಬಿದ್ದು ಅವಳಿ ಮಕ್ಕಳಿಬ್ಬರೂ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ.
ಮುದಸ್ಸಿರ್ ಮತ್ತು ಮುಜಮ್ಮಿಲ್ ಮೃತ ಅವಳಿ ಮಕ್ಕಳು. ಮನೆಯ ಬಳಿಯೇ ಇದ್ದ ಕೆರೆಯ ಬಳಿ ಇಬ್ಬರು ಮಕ್ಕಳು ಆಟವಾಡುತ್ತಿದ್ದರು. ಏಕಾಏಕಿ ಕಾಲು ಜಾರಿ ಮಕ್ಕಳು ಕೆರೆಗೆ ಬಿದ್ದಿದ್ದಾರೆ. ಕೆರೆ ನೀರಿನಲ್ಲಿ ಮುಳಿಗಿ ಇಬ್ಬರೂ ಸಾವನ್ನಪ್ಪಿದ್ದಾರೆ.