newsics.com
ಬೆಂಗಳೂರು: ಜೂನ್ 12ರಂದು ಅಹ್ಮದಾಬಾದ್‌ನ ಸರ್ದಾರ್ ವಲ್ಲಭಭಾಯ್ ವಿಮಾನ ನಿಲ್ದಾಣದಿಂದ ಹೊರಟಿದ್ದ ಏರ್‌ಇಂಡಿಯಾ ( ಎಐ 171 ) ವಿಮಾನ ಟೇಕ್‌ಆಫ್ ಆದ 42 ಸೆಕೆಂಡುಗಳಲ್ಲೇ ವಿಮಾನ ನಿಲ್ದಾಣದ ಸಮೀಪದಲ್ಲೇ ಇರುವ ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ಅಪ್ಪಳಿಸಿತ್ತು.
ಪರಿಣಾಮ ವಿಮಾನದಲ್ಲಿದ್ದ 242 ಮಂದಿ ಪೈಕಿ 241 ಮಂದಿ ಮೃತಪಟ್ಟರೆ, ಹಾಸ್ಟೆಲ್‌ನ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಿವಾಸಿಗಳು ಸೇರಿದಂತೆ 29 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು 270 ಮಂದಿಯನ್ನು ಬಲಿ ತೆಗೆದುಕೊಂಡ ಏರ್‌ಇಂಡಿಯಾ ವಿಮಾನ ಹೇಗೆ ನೆಲಕ್ಕೆ ಅಪ್ಪಳಿಸಿತು ಎಂಬ ವಿಡಿಯೊ ಕ್ಷಣ ಮಾತ್ರದಲ್ಲೇ ಅಂತರ್ಜಾಲದಲ್ಲಿ ವೈರಲ್ ಆಯಿತು.
ಈ ವಿಡಿಯೊ ಮಾಧ್ಯಮಗಳು ಹಾಗೂ ಟ್ರೋಲ್ ಪೇಜ್‌ಗಳಲ್ಲಿ ಬ್ರೇಕಿಂಗ್ ನ್ಯೂಸ್ ಹಾಗೂ ಟ್ರೆಂಡಿಂಗ್ ನ್ಯೂಸ್‌ನಡಿ ಹರಿದಾಡಿತ್ತು. ಹೀಗೆ ದೊಡ್ಡ ಮಟ್ಟದಲ್ಲಿ ಹಂಚಲ್ಪಟ್ಟ ಈ ವಿಡಿಯೊವನ್ನು ಸೆರೆ ಹಿಡಿದದ್ದು ಯಾರು ಎಂಬ ಅಂಶ ಬಹಿರಂಗಗೊಂಡಿದೆ. ಆರ್ಯನ್ ಅನ್ಸಾರಿ ಎಂಬ ಬಾಲಕ ಈ ವಿಡಿಯೊವನ್ನು ಸೆರೆ ಹಿಡಿದಿದ್ದಾನೆ. ವಿಮಾನ ತೀರ ಹತ್ತಿರದಲ್ಲಿ ಹಾರುತ್ತಿದ್ದನ್ನು ಕಂಡು ವಿಡಿಯೊ ಮಾಡಿದರೆ ಚೆನ್ನಾಗಿರುತ್ತದೆ, ಸ್ನೇಹಿತರಿಗೆ ಕಳುಹಿಸಬಹುದು ಎಂದು ವಿಡಿಯೊ ಮಾಡಿದೆ, ವಿಮಾನ ಕೆಳಗಿಳಿಯುತ್ತಿದ್ದನ್ನು ಕಂಡು ವಿಮಾನ ನಿಲ್ದಾಣ ಹತ್ತಿರದಲ್ಲೇ ಇದೆ ಲ್ಯಾಂಡ್ ಆಗುತ್ತಿರಬಹುದು ಎಂದುಕೊಂಡೆ, ಆದರೆ ಕೆಲವೇ ಕ್ಷಣಗಳಲ್ಲಿ ಸ್ಪೋಟಗೊಂಡು ಬೆಂಕಿ ಏಳುತ್ತಿದ್ದಂತೆ ಭಯಭೀತನಾದೆ, ವಿಡಿಯೊವನ್ನು ತಂದೆ ಹಾಗೂ ಅಕ್ಕನಿಗೆ ತೋರಿಸಿದೆ ಎಂದು ಆರ್ಯನ್ ಅನ್ಸಾರಿ ಹೇಳಿಕೊಂಡಿದ್ದಾನೆ.
450 ಮಂದಿ ಇಂಟರ್ ವ್ಯೂ ಮಾಡಿದ್ರೂ ಒಬ್ಬ ಅಭ್ಯರ್ಥಿಯನ್ನು ನೇಮಿಸದ ಕಂಪನಿ; ಕಾರಣ?