ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿರುವ ದರ್ಶನ್ ಅವರು ಜೈಲೂಟಕ್ಕೆ ಬೇಸತ್ತು ಹೋಗಿದ್ದಾರೆ.
ಜೈಲಿನಲ್ಲಿ ನೀಡುತ್ತಿರುವ ಊಟ ಜೀರ್ಣವಾಗುತ್ತಿಲ್ಲ. ಜೈಲಿನ ಊಟ ತಿಂದಾಗ ಅತಿಸಾರ/ಭೇದಿ ಆಗುತ್ತಿದೆ ಎಂದು ರಿಟ್ ಅರ್ಜಿಯಲ್ಲಿ ಮಾಹಿತಿ ನೀಡಿದ್ದಾರೆ.
ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಊಟ, ಹಾಸಿಗೆ, ಪುಸ್ತಕ ಮನೆಯಿಂದ ಪಡೆಯಲು ಕೋರಿ ಜೈಲು ಅಧಿಕಾರಿಗಳಿಗೆ ನಿರ್ದೇಶನ ಕೋರಿ ಮನವಿ ಸಲ್ಲಿಸಿದ್ದಾರೆ. ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ದರ್ಶನ್ಗೆ ಜೈಲಿನ ಆಹಾರ ಸೂಕ್ತವಲ್ಲ ಅಂತ ವೈದ್ಯರೇ ಹೇಳಿದ್ದಾರೆ ಎಂದು ಹೇಳಲಾಗಿದೆ. ದರ್ಶನ್ಗೆ ಜೈಲಿನಲ್ಲಿ ನೀಡುತ್ತಿರುವ ಊಟ ಜೀರ್ಣವಾಗುತ್ತಿಲ್ಲ. ದರ್ಶನ್ಗೆ ಜೈಲಿನ ಊಟ ತಿಂದಾಗ ಅತಿಸಾರ/ಭೇದಿ ಆಗುತ್ತಿದೆ. ದರ್ಶನ್ಗೆ ಜೈಲಿನ ಆಹಾರ ಒಗ್ಗದೇ ಫುಡ್ ಪಾಯ್ಸನಿಂಗ್ ಆಗುತ್ತಿದೆ ಹೀಗಾಗಿ ಮನೆ ಊಟಕ್ಕೆ ಕೋರಿಕೆ ಸಲ್ಲಿಸಲಾಗಿದೆ.
ಅತಿಸಾರ, ಭೇದಿಯಿಂದ ದರ್ಶನ್ ತೂಕವೂ ಕಡಿಮೆಯಾಗುತ್ತಿದೆ. ಜೈಲಿನ ಅಧಿಕಾರಿಗಳು ಮನೆ ಊಟಕ್ಕೆ ನಿರಾಕರಣೆ ಮಾಡುತ್ತಿರೋದು ಕಾನೂನುಬಾಹಿರ ಹಾಗೂ ಅಮಾನವೀಯ. ಹೀಗೆ ಮುಂದುವರಿದ್ರೆ ದರ್ಶನ್ ಮತ್ತಷ್ಟು ತೂಕ ಕಳೆದುಕೊಳ್ಳಬಹುದು. ಇದು ದರ್ಶನ್ರ ಅನಾರೋಗ್ಯಕ್ಕೂ ಕಾರಣವಾಗುವ ಸಾಧ್ಯತೆ ಇದೆ. ಮನೆ ಊಟಕ್ಕೆ ಅನುಮತಿ ನೀಡಿದರೆ ಯಾರಿಗೂ ತೊಂದರೆಯಾಗಲ್ಲ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೂ ಹೊರೆ ಕಡಿಮೆಯಾಗುತ್ತದೆ ಎಂದು ವಕೀಲರು ಮನವಿ ಸಲ್ಲಿಸಿದ್ದಾರೆ.
ಜೈಲಿನಲ್ಲಿ ದರ್ಶನ್ ಅವರ ಮನವಿಗೆ ಜೈಲಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ಮನೆ ಊಟಕ್ಕೆ ಅನುಮತಿ ನೀಡುವ ಕೋರಿಕೆ ಮನ್ನಿಸಿಲ್ಲ. ಕೋರ್ಟ್ ಆದೇಶವಿಲ್ಲದೆ ಇದಕ್ಕೆ ಅನುಮತಿ ನೀಡಲು ಆಗಲ್ಲ. ಬೇರೆ ಕೈದಿಗಳು ಜೈಲಿನ ಊಟ ಸೇವಿಸಿ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.