newsics.com
ಶಾಸ್ತ್ರಗಳ ಪ್ರಕಾರ, ಗಂಡ ತನ್ನ ಹೆಂಡತಿಯ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ತುಂಬಾನೇ ಒಳ್ಳೆಯದು.
ಮದುವೆಯಾಗಿ ಬಂದ ಹೆಣ್ಣನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಹೆಂಡತಿಯನ್ನು ಶುಕ್ರ ಎಂದು ಹೇಳಲಾಗುತ್ತದೆ. ಶುಕ್ರ ಸಂಪತ್ತಿನ ಅಧಿಪತಿ ಆಗಿರುವುದರಿಂದ ಹೆಂಡತಿಯ ಫೋಟೋವನ್ನು ಗಂಡನಾದವನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಆತನ ಶುಕ್ರ ದೆಸೆ ಹೆಚ್ಚುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು.
ಶುಕ್ರ ಸಂಪತ್ತಿನ ಅಧಿಪತಿ ಆಗಿರುವುದರಿಂದ ಹೆಂಡತಿ ಫೋಟೋವನ್ನು ಗಂಡ ಪರ್ಸ್‌ನಲ್ಲಿ ಇಟ್ಟುಕೊಂಡರೆ ಆತನ ಸಂಪತ್ತು ಹೆಚ್ಚಾಗುತ್ತದೆ. ಐಷಾರಾಮಿ ಜೀವನ ಆತನಿಗೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ.
ಶುಕ್ರನು ಜೀವನದಲ್ಲಿ ಭವ್ಯತೆಯನ್ನು ತರುವವನು ಎಂದು ಹೇಳಲಾಗುತ್ತದೆ. ಶುಕ್ರನು ಬಲಶಾಲಿಯಾಗಿರುವುದರಿಂದ ಖರ್ಚುಗಳು ಸಹ ಹೆಚ್ಚಾಗುತ್ತವೆ. ನೀವು ನಿಮ್ಮ ಶುಕ್ರ ಪ್ರಭಾವವನ್ನು ಉತ್ತಮಗೊಳಿಸಲು ನೀವು ಬಯಸಿದರೆ, ಬಯಸಿದ್ದನ್ನು ಪಡೆಯಬೇಕು ಎಂದಾದರೆ ನೀವು ನಿಮ್ಮ ಹೆಂಡತಿಯ ಫೋಟೋವನ್ನು ಪರ್ಸ್‌ನಲ್ಲಿಟ್ಟುಕೊಳ್ಳಬೇಕು.
ನಿಮ್ಮ ಹೆಂಡತಿ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಪ್ರೀತಿಯೂ ಬಲಗೊಳ್ಳುತ್ತದೆ.
ಅಷ್ಟೇ ಅಲ್ಲ, ನಿಮ್ಮ ಹೆಂಡ್ತಿ ಫೋಟೋವನ್ನು ನೋಡಿದಾಗ ಆಕೆಯ ನೆನಪಾಗುತ್ತದೆ, ಜತೆಗೆ ಇದು ನಿಮ್ಮ ಪ್ರೀತಿಯನ್ನು ಸಹ ಬಲಗೊಳಿಸುತ್ತದೆ. ಸಣ್ಣ ಪುಟ್ಟ ಜಗಳಗಳೂ ದೂರವಾಗುತ್ತವೆ.
ಕೆಲಸದ ಕಾರಣದಿಂದಾಗಿ ತೀರಾ ಒತ್ತಡ ಉಂಟಾದಾಗ ಅಸಮಾಧಾನ, ದುಃಖ ಉಂಟಾದಾಗ, ಪರ್ಸ್‌ನಲ್ಲಿರುವ ನಿಮ್ಮ ಹೆಂಡ್ತಿ ಫೋಟೋವನ್ನು ನೋಡುವುದರಿಂದ ಮನಸ್ಸು ಶಾಂತವಾಗುತ್ತದೆ.