newsics.com
ಭಾರತೀಯ ಚಲನಚಿತ್ರ ಐಕಾನ್‌ಗಳಾದ ಕಮಲ್ ಹಾಸನ್ ಮತ್ತು ಮಣಿರತ್ನಂ ಅವರು ಮೊದಲು ಒಟ್ಟಿಗೆ ಕೆಲಸ ಮಾಡಿದ ಸುಮಾರು 38 ವರ್ಷಗಳ ನಂತರ ʼಥಗ್ ಲೈಫ್ʼಗಾಗಿ ಒಂದಾಗಿದ್ದಾರೆ. ಹೀಗಾಗಿ ಇದು ಪ್ರಾರಂಭದಿಂದಲೇ ಸಂಚಲನ ಸೃಷ್ಟಿಸಿದ ಚಿತ್ರವಾಗಿದೆ. ಇಂದು ಇದು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಕಮಲ್ ಹಾಸನ್ ನಟನೆಯ ಇಂಡಿಯನ್ 2 ಚಿತ್ರವನ್ನು ಕೆಟ್ಟ ಚಿತ್ರ ಎಂದುಕೊಂಡಿದ್ವಿ, ಆದರೆ ಇದು ಅದಕ್ಕಿಂತ ಕೆಟ್ಟ ಚಿತ್ರ ಎಂದು ಸಿನಿ ಪ್ರಿಯರು ಚಿತ್ರಕ್ಕೆ ವಿಮರ್ಶೆ ನೀಡಿದ್ದಾರೆ. ಚಿತ್ರ ವೀಕ್ಷಿಸಿ ಹೊರಬಂದ ಸಿನಿ ರಸಿಕರು ಎಕ್ಸ್ ವೇದಿಕೆಯಲ್ಲಿ ತಮ್ಮ ವಿಮರ್ಶೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಪಾರ್ತಿಬನ್ ಎಂಬ ಎಕ್ಸ್ ಬಳಕೆದಾರರು ಥಗ್‌ಲೈಫ್ ವೀಕ್ಷಿಸಿದ ಬಳಿಕ ಚಿತ್ರದ ಬಗ್ಗೆ ಬರೆದುಕೊಂಡಿದ್ದು ʼಈ ವರ್ಷದ ಅತಿಕೆಟ್ಟ ಚಿತ್ರವೆಂದರೆ ಇದೇ. ಕಮಲ್ ಹಾಸನ್ ಒಂದಷ್ಟು ದೃಶ್ಯಗಳಲ್ಲಿ ಮಿಂಚಿದ್ದಾರೆ. ತುಂಬಾ ನಿರಾಸೆಯಾಗಯಿತು. ಚಿತ್ರ ನೋಡಬೇಡಿʼ ಎಂದು ಬರೆದುಕೊಂಡಿದ್ದಾರೆ.
ಮತ್ತೋರ್ವ ಬಳಕೆದಾರ ʼಥಗ್‌ಲೈಫ್ ನಿಜಕ್ಕೂ ಒಂದು ಹಿಂಸೆ. ಮಣಿರತ್ನಂ ಮತ್ತೋರ್ವ ರಾಮ್‌ಗೋಪಾಲ್ ವರ್ಮಾ ಆಗುವ ಮುನ್ನ ನಿವೃತ್ತಿ ಹೊಂದಬೇಕುʼ ಎಂದು ಬರೆದುಕೊಂಡಿದ್ದಾರೆ.