newsics.com
ಬೆಂಗಳೂರು: ನಟ ಕಮಲ್ ಹಾಸನ್ ನೀಡಿರುವ ಹೇಳಿಕೆ ಇದೀಗ ದೊಡ್ಡಮಟ್ಟದಲ್ಲಿ ವಿವಾದವನ್ನೇ ಹುಟ್ಟುಹಾಕಿದೆ. ಇದರ ನಡುವೆ ನಟ ಕನ್ನಡಿಗರ ಕ್ಷಮೆ ಕೇಳಬೇಕು ಅಂತ ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿವೆ. ಇದರ ಬೆನ್ನಲ್ಲೆ ಉಗ್ರ ಹೋರಾಟದ ಹಾದಿ ತುಳಿಯಲು ನಿರ್ಧರಿಸಿರುವ ಸಂಘಟನೆಗಳು ಕರ್ನಾಟಕ ಬಂದ್ ಮಾಡುವ ಸೂಚನೆ ನೀಡಿವೆ.
ಕ್ಷಮೆ ಕೇಳದಿದ್ರೆ ಕರ್ನಾಟಕ ಬಂದ್:
ಕಮಲ್ ಹಾಸನ್ ಹೇಳಿಕೆ ಕುರಿತು ಕನ್ನಡಿಗರ ಬಳಿ ಕ್ಷಮೆ ಕೇಳದಿದ್ದರೆ ಕರ್ನಾಟಕ ಬಂದ್‌ಗೆ ಕರೆ ಕೊಡಬೇಕಾಗುತ್ತದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಆದರೆ ವಾಟಾಳ್ ನಾಗರಾಜ್ ಕರ್ನಾಟಕ ಬಂದ್‌ಗೆ ಯಾವುದೇ ನಿರ್ಧಿಷ್ಟ ದಿನಾಂಕವನ್ನು ಈವರೆಗೂ ಪ್ರಕಟಿಸಿಲ್ಲ.
ಕರ್ನಾಟಕ ಬಂದ್ ದಿನ ಶಾಲೆ ರಜೆ ಇರುತ್ತಾ?
ಇನ್ನು ಏನಾದರೂ ಕರ್ನಾಟಕ ಬಂದ್ ಆದರೆ ಶಾಲಾ- ಕಾಲೇಜುಗಳಿಗೆ ರಜೆ ಸಿಗುತ್ತದೆಯೇ ಎಂಬ ಅನುಮಾನ ಅನೇಕರಲ್ಲಿ ಮೂಡಿದೆ.
Good News ತಿರುಪತಿ ಭಕ್ತರಿಗೆ ಗುಡ್ ನ್ಯೂಸ್: ವಂದೇ ಭಾರತ್ ರೈಲು ಪ್ರಯಾಣ ಇನ್ನಷ್ಟು ಸುಲಭ