newsics.com
ಮಣಿರತ್ನಂ ನಿರ್ದೇಶನದ ಕಮಲ್ ಹಾಸನ್ ನಟಿಸಿರುವ ಬಹುನಿರೀಕ್ಷಿತ ‘ಥಗ್‌ಲೈಫ್’ (Thuglife) ಚಿತ್ರದ ʻಶುಗರ್ ಬೇಬಿʼ (Sugar Baby) ಹಾಡು ವಿವಾದಕ್ಕೀಡಾಗುವ ಸಾಧ್ಯತೆಯಿದೆ.
ʻಶುಗರ್ ಬೇಬಿʼ ಎಂದರೆ ಸಾಮಾನ್ಯವಾಗಿ ಹಣಕ್ಕಾಗಿ ವಯಸ್ಸಾದ ಪುರುಷನೊಂದಿಗೆ ಕಿರಿಯ ಯುವತಿ ಹೊಂದಿರುವ ಸಂಬಂಧವನ್ನು ಸೂಚಿಸುತ್ತದೆ. ಇದರಿಂದ ಚಿತ್ರದಲ್ಲಿ ತ್ರಿಷಾ (Trisha) ಅವರನ್ನು ವಿವಾದಾತ್ಮಕ ಪಾತ್ರದಲ್ಲಿ ಚಿತ್ರಿಸಿರಬಹುದು ಎಂಬ ಊಹಾಪೋಹಕ್ಕೆ ಎಡೆಮಾಡಿಕೊಟ್ಟಿದೆ.
ಈ ಹಾಡಿನ ಶೀರ್ಷಿಕೆ ಮತ್ತು ನಟಿ ತ್ರಿಷಾ ಮಿಂಚಿಂಗ್ ದೃಶ್ಯಗಳ ಪ್ರೋಮೋ ಈಗಾಗಲೇ ಆರಂಭಿಕ ಸಂಚಲನ ಮೂಡಿಸಿದೆ.
ಪ್ರಚೋದನಕಾರಿ ವಿಷಯಗಳನ್ನು ನಿಭಾಯಿಸುವಲ್ಲಿ ಹೆಸರುವಾಸಿಯಾದ ಮಣಿರತ್ನಂ ಮತ್ತು ಕಮಲ್ ಹಾಸನ್ ಅವರ ಹಿಂದಿನ ವಿಚಾರಗಳನ್ನು ಗಮನಿಸಿದರೆ, ಈ ಚಿತ್ರವೂ ಅದೇ ಹಾದಿಯಲ್ಲಿ ಸಾಗ್ತಿದೆಯೇ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.
ಮೇ 17 ರಂದು ಟ್ರೈಲರ್ ರಿಲೀಸ್ ಆಗಿತ್ತು. ಇದರಲ್ಲಿ ತ್ರಿಷಾ ಜತೆ ರೊಮ್ಯಾನ್ಸ್.. ಅಭಿರಾಮಿಗೆ ಲಿಪ್‌ಲಾಕ್ ಮಾಡುವ ಸೀನ್ ಅಭಿಮಾನಿಗಳ ಕಾತರವನ್ನು ಹೆಚ್ಚಿಸಿತ್ತು. ಸಿನಿರಸಿಕರ ಈ ಕಾತರ ತಣಿಯಲು ಜೂ.5ರವರೆಗೆ ಕಾಯಬೇಕು.