newsics.com
ಜಮ್ಮು-ಕಾಶ್ಮೀರ : ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಮುಂದುವರಿದಿದ್ದು, ಭಾರತ ಹಲವು ನಗರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸಿದೆ.ಇಂದು ಬೆಳಗಿನ ಜಾವ ಜಮ್ಮುವಿನಲ್ಲಿ ದೊಡ್ಡ ಸ್ಫೋಟದ ಸದ್ದು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಭಯಬೀತಗೊಂಡಿದ್ದಾರೆ.ಜಮ್ಮು ನಗರದಲ್ಲಿ ಬೆಳಿಗ್ಗೆ 4:30 ರ ಸುಮಾರಿಗೆ ಸ್ಫೋಟಗಳು ಕೇಳಿಬಂದವು. ನಗರವು ಸಂಪೂರ್ಣ ಕತ್ತಲೆಯಲ್ಲಿದೆ.
ಪಾಕ್ ಬಿಟ್ಟ ಡ್ರೋನ್ಗಳು ಭಾರತವನ್ನು ಪ್ರವೇಶಿಸಲು ನಮ್ಮ ಸೈನ್ಯ ಬಿಟ್ಟಿಲ್ಲ. ಆಕಾಶದಲ್ಲೇ ಎಲ್ಲಾ ಡ್ರೋನ್ಗಳನ್ನು ಹೊಡೆದುರುಳಿಸಿದೆ.
ಉಧಂಪುರದ ದಿಬ್ಬರ್ ಪ್ರದೇಶದಲ್ಲೂ ಸ್ಫೋಟದ ಶಬ್ದ ಕೇಳಿಬಂದಿದೆ. ಬೆಳಗ್ಗೆಯೇ ಸೈರನ್‌ಗಳು ಮೊಳಗುತ್ತಿರುವುದನ್ನು ತೋರಿಸಲಾಗಿದೆ.ಅಖ್ನೂರ್, ಗುರೇಜ್, ಉರಿ, ಹಮೀರ್‌ಪುರ ಮತ್ತು ಪಲ್ಲನ್‌ವಾಲಾದಲ್ಲಿ ಪಾಕಿಸ್ತಾನದ ಕಡೆಯಿಂದ ಭಾರೀ ಶೆಲ್ ದಾಳಿ ನಡೆದಿದೆ ಎಂದು ವರದಿಯಾಗಿದೆ.