newsics.com
ನವದೆಹಲಿ: ಭಾರತದ ಸಿದ್ಧತೆಯನ್ನು ನೋಡಿಯೇ ಪಾಕಿಸ್ತಾನಕ್ಕೆ ಬೆವರಿಳಿದಿದೆ.ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಭಾರತವು ‘ಆಪರೇಷನ್ ಸಿಂಧೂರ್’ ಪ್ರಾರಂಭಿಸಿದೆ. ಇದು ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಾಗಿದೆ.
ಜಮ್ಮು ವಿಮಾನ ನಿಲ್ದಾಣ ಸೇರಿದಂತೆ ಎಂಟು ಕ್ಷಿಪಣಿಗಳನ್ನು ಭಾರತೀಯ ವಾಯು ರಕ್ಷಣಾ ಘಟಕಗಳು ಯಶಸ್ವಿಯಾಗಿ ತಡೆದವು. ಸಾಂಬಾ, ಆರ್‌ಎಸ್ ಪುರ, ಮತ್ತು ಅರ್ನಿಯಾದಂತಹ ಸ್ಥಳಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳನ್ನು ಹಾರಿಸಲಾಗಿತ್ತು. ಈ ಘಟನೆಯ ನಂತರ, ಪಾಕಿಸ್ತಾನವು ಲಾಹೋರ್‌ನಲ್ಲಿ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಕಳೆದುಕೊಂಡಿತು.
ಮೇ 8 ರ ರಾತ್ರಿ, ಜಮ್ಮು ಕಾಶ್ಮೀರ ಪಂಜಾಬ್ ಮತ್ತು ರಾಜಸ್ಥಾನದ ಮಿಲಿಟರಿ ನೆಲೆಗಳ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೂಲಕ ದಾಳಿ ಮಾಡುವಾಗ, ಪಾಕಿಸ್ತಾನವು ತನ್ನ ನಾಗರಿಕ ವಿಮಾನಗಳನ್ನು ರಕ್ಷಣೆಗಾಗಿ ಬಳಸಿಕೊಂಡಿತು ಎಂದು ಭಾರತ ಹೇಳಿದೆ. ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಮುಕ್ತವಾಗಿಟ್ಟಿತು, ಇದು ಅಂತರರಾಷ್ಟ್ರೀಯ ನಿಯಮಗಳ ಉಲ್ಲಂಘನೆ ಎಂದು ಭಾರತ ಹೇಳಿದೆ. ಭಾರತ ಅಟ್ಯಾಕ್ ಮಾಡುತ್ತಿದ್ದಂತೆ ಪಾಕ್ ರಕ್ಷಣೆಗಾಗಿ ಇಂಥ ನೀಚ ಕೆಲಸನವನ್ನು ಮಾಡಿದೆ.
ಜಮ್ಮು ಕಾಶ್ಮೀರ, ಪಂಜಾಬ್, ಮತ್ತು ರಾಜಸ್ಥಾನದ ಮಿಲಿಟರಿ ನೆಲೆಗಳ ಮೇಲೆ ಪಾಕಿಸ್ತಾನವು ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿ ಪ್ರಯತ್ನ ಮಾಡಿತು. ಭಾರತವು ಈ ದಾಳಿಗಳನ್ನು ತಡೆಯಿತು. ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.